Revenue Facts

ಬಳ್ಳಾರಿ;ಬಿ.ನಾಗೇಂದ್ರಗೆ ಗೆಲುವು,ಶ್ರೀರಾಮುಲುಗೆ ಹೀನಾಯ ಸೋಲು,

ಬಳ್ಳಾರಿ;ಬಿ.ನಾಗೇಂದ್ರಗೆ ಗೆಲುವು,ಶ್ರೀರಾಮುಲುಗೆ ಹೀನಾಯ ಸೋಲು,

ಬಳ್ಳಾರಿ ಮೇ. 13 :ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಉಸ್ತುವಾರಿ ಬಿ. ಶ್ರೀರಾಮುಲು ಅವರಿಗೆ ಹೀನಾಯ ಸೋಲು ಅನುಭವಿಸಿದ್ದು, ಬಿ ನಾಗೇಂದ್ರ ಅವರು ಬಾರಿ ಗೆದ್ದಿದ್ದಾರೆ.ಇನ್ನೊಂದೆಡೆ ಬಿಜೆಪಿ ಪಕ್ಷದ ಶ್ರೀರಾಮುಲು 37514 ಮತಗಳಿಂದ ಹೀನಾಯವಾಗಿ ಸೋತಿದ್ದಾರೆ. ಬಿ.ನಾಗೇಂದ್ರ 61035 ಮತಗಳಿಂದ ಗೆದ್ದಿದ್ದಾರೆ.

ಈ ಬಾರಿ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಒಟ್ಟು 1,16,096 ಪುರುಷ ಮತದಾರರು, 1,22,181 ಮಹಿಳೆಯರು, 49 ಇತರ ಮತದಾರರು ಸೇರಿ ಒಟ್ಟು 2,38,326 ಮತದಾರರು ಮತದಾನದ ಹಕ್ಕು ಹೊಂದಿದ್ದರು. ಮೇ 10ರಂದು ನಡೆದಿದ್ದ ಮತದಾನದ ವೇಳೆ ಕ್ಷೇತ್ರದಲ್ಲಿ ಶೇ.76.09ರಷ್ಟು ಸಾಧಾರಣ ಮತದಾನ ನಡೆದಿತ್ತು.2018ರ ಚುನಾವಣೆ ವೇಳೆ ತಮ್ಮ ಸ್ವಕ್ಷೇತ್ರವನ್ನು ಬಿಟ್ಟು ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಸಚಿವ ಶ್ರೀರಾಮುಲು ಈ ಬಾರಿ ಮತ್ತೊಮ್ಮೆ ತಮ್ಮ ತವರು ಕ್ಷೇತ್ರಕ್ಕೆ ಮರಳಿದ್ದರು. ಈ ಬಾರಿ ಶ್ರೀ ರಾಮುಲು ಬಾರಿ ಮತಗಳಿಂದ ಹಿನ್ನಡೆಯನ್ನು ಸಾಧಿಸಿದ್ದಾರೆ. 2018 ರಲ್ಲಿ ಕಾಂಗ್ರೆಸ್ ಪಕ್ಷದ ನಾಗೇಂದ್ರ ಅವರು ಈ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದರು.ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ನಾಗೇಂದ್ರಗೆ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಾಗೇಂದ್ರ ಅಭಿಮಾನಿಗಳು ಹಾಗೂ ಕೈ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ

Exit mobile version