Revenue Facts

ಜಿ.ಪಿ.ಎ. : ಕೊಡುವಾಗ ಎಚ್ಚರವಿರಲಿ!

ಒಬ್ಬ ವಯಸ್ಕ ವ್ಯಕ್ತಿಯು ಇನ್ನೊಬ್ಬ ವಯಸ್ಕ ವ್ಯಕ್ತಿಗೆ ಅಂದರೆ ಕುಟುಂಬದ ಸದಸ್ಯರೊಳಗೊಂಡಂತೆ, ಅಣ್ಣ,ಅಕ್ಕ ತಮ್ಮ,ತಂಗಿ,ತಂದೆ,ತಾಯಿಗಳಿಗೆ ತನ್ನ ಪರವಾಗಿ ಕಾರ್ಯ ನಿರ್ವವಹಿಸಲು ಜಿ.ಪಿ.ಎ ಕೊಡಬಹುದಾಗಿದೆ. ತನ್ನ ಆಸ್ತಿಯನ್ನು ಮೇಲ್ಕಂಡ ಸಂಬಂಧಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಮಾರಾಟ ಮಾಡಲು ಅಧಿಕಾರ ಕೊಟ್ಟಿದ್ದರೆ, ಆಸ್ತಿಯ ಮೌಲ್ಯದಂತೆ ಶೇ.5 ರಷ್ಟು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಆಸ್ತಿಯನ್ನು ಅಭಿವೃದ್ಧಿಪಡಿಸುವವರಿಗೆ ಅಪಾರ್ಟ್ಮೆಮೆಂಟ್ ಕಟ್ಟುವವರಿಗೆ ಅಧಿಕಾರ ಕೊಡಬಹುದು. ಮುದ್ರಾಂಕ ಶುಲ್ಕವನ್ನು ಕಟ್ಟುವುದು ಕಡ್ಡಾಯವಾಗಿದೆ.ಜಿ.ಪಿ.ಎ. ಕೊಡುವಾಗ ಬರೆಸಿಕೊಳ್ಳುವ ವ್ಯಕ್ತಿಯ ಬಗ್ಗೆ ಸಾಕಷ್ಟು ತಿಳುವಳಿಕೆ ಇರಬೇಕು ಹಾಗು ಅವನು ನಂಬಿಕಸ್ತನಾಗಿರಬೇಕು, ಜಿ.ಪಿ.ಎ. ಯಲ್ಲಿ ಸೂಚಿಸಿರುವ ಅಧಿಕಾರವನ್ನುತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಸಾದ್ಯತೆ ಇರಬಹುದಾಗಿದ್ದು ಈ ಬಗ್ಗೆ ಎಚ್ಚರದಿಂದಿರುವುದು ಒಳ್ಳೆಯದು.

ಜಿ.ಪಿ.ಎ ಯಾವಾಗ ರದ್ದಾಗುತ್ತದೆ?
ಜಿ.ಪಿ.ಎ. ಬರೆದುಕೊಟ್ಟ ವ್ಯಕ್ತಿ, ಜಿ.ಪಿ.ಎ.ಯನ್ನು ಯಾವಾಗಲಾದರೂ ರದ್ದುಪಡಿಸಬಹುದು.
ಜಿ.ಪಿ.ಎ. ಬರೆದುಕೊಟ್ಟ ವ್ಯಕ್ತಿ, ಮರಣ ಹೊಂದಿದರೆ ಅದು ತನ್ನಿಂದ ತಾನೆ ರದ್ದಾಗುತ್ತದೆ.
ಜಿ.ಪಿ.ಎ. ಮಾಡಿಕೊಟ್ಟವರು ಏಕಪಕ್ಷೀಯವಾಗಿ ಅವರು ಮಾಡಿದ ಜಿ.ಪಿ.ಎ. ಅನ್ನು ರದ್ದುಪಡಿಸಬಹುದು.ರದ್ದುಪಡಿಸಿದ ನಂತರ ಜಿ.ಪಿ.ಎ. ಮಾಡಿಸಿಕೊಂಡವನಿಗೆ ತಿಳಿಸಬೇಕು ಹಾಗು ನ್ಯೂಸ್ ಪೇಪರ್ ಗಳಲ್ಲಿ ಹಾಕುವುದು ಒಳ್ಳೆಯದು.

ರದ್ದುಪಡಿಸಲಾಗದ ಜಿ.ಪಿ.ಎ. ಎಂದರೆ ಏನು?

ಜಿ.ಪಿ.ಎ. ಯಲ್ಲಿ ಆಸ್ತಿಯ ಹಣ ಪಡೆದು ಜಿ.ಪಿ.ಎ. ಕೊಡಲಾಗಿದೆ ಮತ್ತು ಅದು ರದ್ದು ಮಾಡುವಂಥಹದಲ್ಲ ಎಂದು ಹೇಳಿದ್ದರೆ ಅದನ್ನು ಆಸ್ತಿ ಹಸ್ತಾಂತರ ಮಾಡುವವರೆಗೂ ಏಕಪಕ್ಷೀಯವಾಗಿ ರದ್ದುಪಡಿಸುವಂತಿಲ್ಲ. (Indian Contract Act,1872 ಕಲಂ 202)

Exit mobile version