Revenue Facts

ಮಾರಾಟವಾಗದ ನಿವೇಶನಗಳ ಇ-ಹರಾಜು ಹಾಕಲು ಬಿಡಿಎ ಪ್ಲಾನ್

ಮಾರಾಟವಾಗದ ನಿವೇಶನಗಳ ಇ-ಹರಾಜು ಹಾಕಲು ಬಿಡಿಎ ಪ್ಲಾನ್

ಬೆಂಗಳೂರು, ಮಾ. 29 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಬಡಾವಣೆಗಳಲ್ಲಿ ಮಾರಾಟವಾಗದೇ, ಹಾಗೆ ಉಳಿದಿವೆ. ಹಲವು ವರ್ಷಗಳಿಂದ ಮಾರಾಟವಾಗದೆ ಉಳಿದ 1500ಕ್ಕೂ ಅಧಿಕ ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಮುಂದಾಗಿದೆ. ಇದಕ್ಕಾಗಿ ನಿವೇಶನಗಳನ್ನು ಗುರುತು ಮಾಡಿದ್ದು, ಇವೆಲ್ಲವೂ ದುಬಾರಿ ಬೆಲೆಯದ್ದಾಗಿದೆ. ಸುಮಾರು 20 ರಿಂದ 30 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಈ ಬಡಾವಣೆಗಳಲ್ಲಿ 1500 ಕ್ಕೂ ಹೆಚ್ಚು ನಿವೇಶನಗಳು ಮಾರಾಟವಾಗದೇ ಹಾಗೆ ಉಳಿದಿವೆ.

 

ಇನ್ನು ಈ ನಿವೇಶನಗಳ ಪೈಕಿ ಕೆಲ ಸೈಟ್ ಗಳ ಒಡೆತನಕ್ಕೆ ಸಂಬಂಧಪಟ್ಟಂತೆ ವ್ಯಾಜ್ಯ ನಡೆಯುತ್ತಿವೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿದೆ. ಇನ್ನು ಕೆಲ ನಿವೇಶನಗಳನ್ನು ಪಡೆದವರು ಹಣವನ್ನು ಪಾವತಿ ಮಾಡಿಲ್ಲ. ಇಷ್ಟೇ ಅಲ್ಲದೇ, ಈತರೆ ಸಮಸ್ಯೆಗಳಿಂದ ಕೆಲ ನಿವೇಶನಗಳು ಮಾರಾಟವಾಗದೆ ಹಾಗೆ ಬಾಕಿ ಉಳಿದಿವೆ. ಹೀಗೆ ಮಾರಾಟವಾಗದೆ ನಿವೇಶನಗಳು ಬಾಕಿ ಉಳಿದಿರುವುದರಿಂದ ಬಿಡಿಎಗೆ ನಷ್ಟ ಉಂಟಾಗಿದೆ. ಈ ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದು, ಅಕ್ಕ-ಪಕ್ಕದ ಮನೆಯವರಿಗೆ ಸಮಸ್ಯೆ ಆಗುತ್ತಿದೆ.

ಹೀಗಾಗಲಿ ಕಳೆದ 2021ರ ನ. 25ರಂದು ಸುಪ್ರೀಂ ಕೋರ್ಟ್‌ ಈ ನಿವೇಶನಗಳನ್ನು ಹರಾಜು ಮೂಲಕ ಮಾರಟ ಮಾಡುವಂತೆ ಆದೇಶಿಸಿತ್ತು. ಇದರಂತೆ ಮಾರಾಟ ಮಾಡಲು ಈಗ ಬಿಡಿಎ ಮುಂದಾಗಿದೆ. ಇದರಿಂದ ಬರುವ ಆದಾಯವನ್ನು ಬಿಡಿಎ ಅಭಿವೃದ್ಧೀ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಈಗಾಗಲೇ ಸಮೀಕ್ಷೆಯನ್ನು ಪೂರ್ಣಗೊಳಿಸಸಿದ್ದು, ನಿವೇಶನಗಳನ್ನು ಗುರುತು ಮಾಡಲಾಗಿದೆ.

ಜಯನಗರ, ಬಿಟಿಎಂ ಲೇಔಟ್, ಬನಶಂಕರಿ, ಅಂಜನಾಪುರ, ಎಚ್ಎಎಲ್, ಎಚ್ಬಿಆರ್ ಲೇಔಟ್, ಜೆ.ಪಿ.ನಗರ, ನಾಗರಬಾವಿ, ಕೋರಮಂಗಲ, ಎಚ್ಎಸ್ಆರ್ ಲೇಔಟ್, ಇಂದಿರಾನಗರ ಬಡಾವಣೆಗಳಲ್ಲಿ ಹೆಚ್ಚಿನ ನಿವೇಶನಗಳು ಪತ್ತೆಯಾಗಿವೆ. ಇಲ್ಲೆಲ್ಲಾ ನಿವೇಶನಗಳ ಬೆಲೆಯೂ ಅಧಿಕವಿದೆ. ಪ್ರತೀ ನಿವೇಶನಕ್ಕೂ 1 ರಿಂದ 2 ಕೋಟಿ ರೂ. ಬೆಲೆ ಬಾಳುತ್ತವೆ ಎಂದು ಬಿಡಿಎ ಹೇಳಿದೆ. ಈ ನಿವೇಶನಗಳನ್ನು ಶೀಘ್ರದಲ್ಲೇ ಇ-ಹರಾಜು ಮೂಲಕ ಮಾರಾಟ ಮಾಡಲು ಬಿಡಿಎ ಮುಂದಾಗಿದೆ.

Exit mobile version