Revenue Facts

ಕೋನದಾಸಪುರದಲ್ಲಿ 2ಬಿಎಚ್‌ಕೆ ಫ್ಲಾಟ್ ಹಂಚಿಕೆ ಮಾಡುತ್ತಿರುವ ಬಿಡಿಎ : ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರು, ಮಾ. 20 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಕೋನದಾಸಪುರ ಗ್ರಾಮದಲ್ಲಿ ವಸತಿ ಯೋಜನೆ ಅಡಿಯಲ್ಲಿ ಫ್ಲಾಟ್‌ ಗಳನ್ನು ನಿರ್ಮಾಣ ಮಾಡಿದೆ. ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಖರೀದಿಸಬೇಕು ಎಂದು ಆಸೆ ಇರುವವರಿಗಾಗಿ ಬಿಡಿಎ ಫ್ಲಾಟ್‌ ಗಳನ್ನು ನಿರ್ಮಾಣ ಮಾಡಿದ್ದು, ಈಗ ಸಾರ್ವಜನಿಕರಿಗೆ ಲಭ್ಯವಿದೆ. ಬಿದರಹಳ್ಳಿ ಹೋಬಳಿ ಕೋನದಾಸಪುರದಲ್ಲಿ ರ್ವೆ ನಂ: 22 ಮತ್ತು 23ರಲ್ಲಿ ಫ್ಲಾಟ್‌ ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಒಟ್ಟು 672 ಫ್ಲಾಟ್‌ಗಳಿವೆ. 2 ಬಿಎಚ್‌ಕೆ ಫ್ಲಾಟ್ ಗಳಿದ್ದು, ಸಾರ್ವಜನಿಕರು ಖರೀದಿಸಬಹುದಾಗಿದೆ.

ಈ ಫ್ಲಾಟ್‌ಗಳ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರಿಗೆ ಅರ್ಜಿ ಶುಲ್ಕ ರೂ. 400 ಕಟ್ಟಿದರೆ, ಸಾಮಾನ್ಯ ಹಾಗೂ ಇತರೆ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ. 600.. ಇನ್ನು ನೋಂದಣಿ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರಿಗೆ ರೂ. 200, ಹಾಗೂ ಇತರೆ ಪ್ರವರ್ಗಗಳಿಗೆ 400 ರೂಗಳನ್ನು ಪಾವತಿಸಬೇಕು ಎಂದು ಬಿಡಿಎ ಹೇಳಿದೆ. ಒಂದು ಫ್ಲಾಟ್‌ ಗೆ 4800000 ರೂ ನಿಂದ ಬೆಲೆಯನ್ನು ನಿಗದಿಪಡಿಸಾಗಿದೆ.

ಇನ್ನು ಬಿಡಿಎ ವೆಬ್‌ ಸೈಟ್‌ ನಲ್ಲಿ ಪ್ರತೀ ಫ್ಲಾಟ್‌ ನ ಬೆಲೆಯನ್ನು ನಿಗದಿಪಡಿಸಲಾಗಿದೆ. ಅದರಂತೆಯೇ ಫ್ಲಾಟ್ ಗೆ ನಮೂದಿಸಿರುವ ಬೆಲೆಯನ್ನು ಪಾವತಿ ಮಾಡಬೇಕು. ಇನ್ನು ನೀರು ಹಾಗೂ ವಿದ್ಯುತ್‌ ವ್ಯವಸ್ಥೆಗಾಗಿ ಪಾವತಿಸಬೇಕಾದ ಮೊತ್ತವು ಬೇರೆಯಿದ್ದು, ಇದನ್ನು ಫ್ಲಾಟ್ ಬೆಲೆಯಲ್ಲಿ ಸೇರಿರುವುದಿಲ್ಲ. ಇನ್ನು ಪಾರ್ಕಿಂಗ್‌ ಸ್ಥಳಕ್ಕಾಗಿ ಹೆಚ್ಚುವರಿಯಾಗಿ 2.50 ಲಕ್ಷಗಳನ್ನು ಪಾವತಿ ಮಾಡಬೇಕು. ಇನ್ನು ಆದ್ಯತೆಯ ಮೇರೆಗೆ ಫ್ಲಾಟ್‌ ಗಳನ್ನು ಹಂಚಿಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವವರು ವಿಶೇಷ ಚೇತನರಿಗೆ ಹಂಚಿಕೆ ದರಗಳಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. 18 ವರ್ಷ ವಯಸ್ಸು ಪೂರ್ಣಗೊಂಡವರು ಮಾತ್ರ ಅರ್ಜಿ ಸಲ್ಲಿಸಬೇಖು. ಅರ್ಜಿದಾರರು ಬೆಮಗಳುರಿನಲ್ಲಿ ಕನಿಷ್ಠ ಎರಡು ವರ್ಷಗಳಾಗಿರಬೇಕು. ಇನ್ನು ಅರ್ಜಿದಾರರು ಈ ಹಿಂದೆ ಯಾವುದಾದರೂ ಯೋಜನೆ ಅಡಿಯಲ್ಲಿ ನಿವೇಶನ ಅಥವಾ ವಸತಿಯನ್ನು ಪಡೆದಿದ್ದಲ್ಲಿ, ಅವರು ಅರ್ಹರಿರುವುದಿಲ್ಲ. ಇನ್ನು ಅರ್ಜಿ ನಮೂನೆಯನ್ನು ಬಿಡಿಎ ಕೇಂದ್ರ ಕಚೇರಿ ಅಲ್ಲಿಸಿ, ಶುಲಕ್ವನ್ನು ಕೆನರಾ ಬ್ಯಾಂಕ್‌ ನಲ್ಲಿ ಪಾವತಿಸಬೇಕು. ಇಲ್ಲವೇ ಆನ್‌ ಲೈನ್‌ ಮೂಲಕ ಸಲ್ಲಿಸಬಹುದಾಗಿದೆ.

Exit mobile version