Revenue Facts

ಬೇಡಿಕೆ ಹೆಚ್ಚಿದ ಹಿನ್ನೆಲೆ ಬಿಡಿಎ ಫ್ಲಾಟ್‌ ಗಳ ದರ ಏರಿಕೆ!!

ಬೇಡಿಕೆ ಹೆಚ್ಚಿದ ಹಿನ್ನೆಲೆ ಬಿಡಿಎ ಫ್ಲಾಟ್‌ ಗಳ ದರ ಏರಿಕೆ!!

ಬೆಂಗಳೂರು, ಮೇ. 25 : ಬೆಂಗಳೂರಿನಲ್ಲಿ ಇತ್ತೀಚೆಗೆ ರಿಯಲ್‌ ಎಸ್ಟೇಟ್‌ ಉದ್ಯಮ ಹೆಚ್ಚಾಗುತ್ತಿದೆ. ನಿವೇಶನ, ಮನೆ ಹಾಗೂ ಫ್ಲಾಟ್‌ ಗಳನ್ನು ಖರೀದಿಸುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಫ್ಲಾಟ್ಗಳಿಗೂ ಬೇಡಿಕೆ ಹೆಚ್ಚಾಗಿದೆ. ನಾಗರಭಾವಿಯ ಚಂದ್ರಾ ಲೇಔಟ್‌ನಲ್ಲಿ ಬಿಡಿಎ ಮೂರು ಕೊಠಡಿಗಳ 120 ಫ್ಲಾಟ್ಗಳನ್ನು ಸಿದ್ಧ ಪಡಿಸಿದೆ. ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ವಸತಿ ಯೋಜನೆ ಆಗಿದೆ. ಫ್ಲಾಟ್‌ ಗಳಿಗಾಗಿ ಬೇಡಿಕೆ ಹೆಚ್ಚಾದ ಹಿನ್ನೆಲೆ ಬಿಡೆ ಫ್ಲ್ಯಾಟ್‌ನ ಬೆಲೆಯನ್ನು 1 ಕೋಟಿ ರೂ.ಗಿಂತಲೂ ಹೆಚ್ಚಳ ಮಾಡಿದೆ.

ಕಳೆದ ತಿಂಗಳು ಏಪ್ರಿಲ್ 1 ರಿಂದ ಈ ಫ್ಲಾಟ್‌ಗಳ ಮಾರಾಟವನ್ನು ಬಿಡಿಎ ಪ್ರಾರಂಭಿಸಿದೆ. ಈ ಬಗ್ಗೆ ಹಿರಿಯ ಬಿಡಿಎ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ. ಸದ್ಯ ಪ್ರತಿಯೊಂದು ಫ್ಲಾಟ್‌ ಗೂ ಮೂಲ ದರವಾಗಿ 1.04 ಕೋಟಿ ರೂಪಾಯಿ ಅನ್ನು ನಿಗದಿ ಪಡಿಸಲಾಗಿದೆ. ಇದರೊಂದಿಗೆ ಕಾರ್ ಪಾರ್ಕಿಂಗ್‌ಗೆ 2.5 ಲಕ್ಷ ಹಾಗೂ ನೀರು ಮತ್ತು ನೈರ್ಮಲ್ಯ ಸಂಪರ್ಕಕ್ಕೆ ಅಂದಾಜು 1.5 ಲಕ್ಷ ರೂಪಾಯಿ ಅನ್ನು ನಿಗದಿ ಮಾಡಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ಆಂತರಿಕ ಜಿಮ್, ರಿಕ್ರಿಯೇಷನ್ ಇದ್ದು, ಪಾರ್ಕಿಂಗ್ ಜಾಗದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್‌ಗಳಿವೆ.

 

ಚಂದ್ರಾ ಲೇಔಟ್‌ ನಲ್ಲಿ 10 ಅಂತಸ್ತಿನ ಅಪಾರ್ಟ್‌ ಮೆಂಟ್‌ ನಲ್ಲಿ ಪ್ರತಿ ಮಹಡಿಯಲ್ಲಿ 12 ಫ್ಲಾಟ್‌ಗಳಿವೆ. ಇದರಲ್ಲಿ ಒಟ್ಟು 84 ಫ್ಲಾಟ್‌ ಗಳನ್ನು ವೈಯಕ್ತಿಕ ಖರೀದಿದಾರರಿಗೆ ಯೋಜಿಸಲಾಗಿದೆ. ಇದರಲ್ಲಿ 19 ಪ್ಲಾಟ್ ಮಾರಾಟ ಮಾಡಿದ್ದು, ಕೆನರಾ ಬ್ಯಾಂಕ್ ತನ್ನ ಸಿಬ್ಬಂದಿಗಾಗಿ 12 ಫ್ಲಾಟ್‌ಗಳನ್ನು ಬುಕ್ ಮಾಡಿದೆ. ಇದನ್ನು ಬೃಹತ್ ಬುಕಿಂಗ್ ಎಂದು ವರ್ಗೀಕರಣ ಮಾಡಲಾಗಿದೆ. ಈಗಾಗಲೇ ಶೇಕಡಾ 25ರಷ್ಟು ಫ್ಲಾಟ್ ಗಳು ಮಾರಾಟವಾಗಿವೆ.

ಫ್ಲಾಟ್‌ ಗಳ ಬಗ್ಗೆ ಮಾಹಿತಿ ಪಡೆಯಲು ಪ್ರತಿ ದಿನವೂ ಸಾಕಷ್ಟು ಕರೆಗಳು ಬರುತ್ತಿವೆ. ಆದಷ್ಟು ಬೇಗ ಎಲ್ಲಾ ಫ್ಲಾಟ್ ಗಳ ಮಾರಾಟವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ 1 ಕಿ.ಮೀ ವ್ಯಾಪ್ತಿಯಲ್ಲಿ ಈ ಅಪಾರ್ಟ್‌ ಮೆಂಟ್‌ ಇದೆ. ಜೊತಗೆ ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವುದೇ ಯೋಜನೆಯ ಪ್ಲಸ್ ಪಾಯಿಂಟ್. ಅಪಾರ್ಟ್‌ ಮೆಂಟ್‌ ಎದುರು ದುರ್ಗಾ ಪರಮೇಶ್ವರಿ ದೇವಸ್ಥಾನವಿದ್ದು, ಮೂರು ಉದ್ಯಾನವನಗಳು ಸಮೀಪದಲ್ಲಿವೆ ಎಂದು ಹೇಳಿದರು.

Exit mobile version