Revenue Facts

ಮಂತ್ರಿ ಮಾಲ್ ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ

ಬೆಂಗಳೂರು: ಬಾಕಿ ಉಳಿದಿರುವ ತೆರಿಗೆಯನ್ನು ಮತ್ತೊಮ್ಮೆ ತೆರವುಗೊಳಿಸದ ಹಿನ್ನೆಲೆ ಮಂತ್ರಿ ಮಾಲ್ ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.

ಸಾರ್ವಜನಿಕರನೆಲ್ಲ ಹೊರಗೆ ಕಳುಹಿಸಿದ್ದ BBMP ಅಧಿಕಾರಿಗಳು…!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗು ಮಾರ್ಷಲ್‌ಗಳು ದಿಡೀರನೆ ಬೇಟಿ ನೀಡಿ ಮಂತ್ರಿ ಮಾಲ್ ( mantri mall )ಒಳಗಿದ್ದ ಸುಮಾರು 200 ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಮಾಲ್ ನಲ್ಲಿ ಇದ್ದ ಸರ್ವಾಜನಿಕರನೆಲ್ಲ ಹೊರಗೆ ಕಳುಹಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇದುವರೆಗು ಸುಮಾರು 51 ಕೋಟಿ ತೆರಿಗೆ ಹಣವನ್ನು ಪಾವತಿ ಆಗಿರಲಿಲ್ಲ.

ಬಿಬಿಎಂಪಿ ಅಧಿಕಾರಿಗಳಿಂದ ಮಂತ್ರಿ ಮಾಲ್ ಗೆ ಹಲವು ಬಾರಿ ನೋಟಿಸ್ ಜಾರಿ..!

ಈಸಂಬಂಧದ ಕುರಿತು ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಗೆ ಹಲವು ಬಾರಿ ನೋಟಿಸ್(notice) ನೀಡಿದ್ದರು. ಮಂತ್ರಿ ಮಾಲ್ ನಲ್ಲಿ ಇದ್ದ ಅಂಗಡಿಗಳಿಗೆಲ್ಲ(shops) ಬಿಬಿಎಂಪಿಯಿಂದ ನೋಟಿಸ್ ಜಾರಿ ಮಾಡಲಾಗಿತ್ತು, ಆದರೆ ಈ ಅಂಗಡಿಯ ಮಾಲೀಕರು ನೋಟಿಸ್ ಗೆ ಉತ್ತರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಮಳಿಗೆಗಳನ್ನು ಬಂದ್ ಮಾಡಿ ಮಾಲ್ ಗೆ ಬೀಗ ಜಡಿದರು.

ಮಂತ್ರಿ ಮಾಲ್ ಮಾಲಿಕರ ಪ್ರತಿಕ್ರಿಯೆ

ಬಾಕಿ ಪಾವತಿ ಸಂಬಂಧ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿಸುವುದು ಸರಿಯಲ್ಲ. ಬಿಬಿಎಂಪಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಏಕಾಏಕಿ ಬೀಗ ಹಾಕಿದ್ದಾರೆ ಎಂದು ಮಂತ್ರಿ ಮಾಲ್ ಮಾಲೀಕರು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version