Revenue Facts

BBMP ಅಸ್ತಿಗಳ ಡಿಜಿಟಲೀಕರಣ: ಮುನೀಶ್‌ ಮೌದ್ಗಿಲ್ ಅವರ ಪತ್ರದಲ್ಲೇನಿದೆ ?

BBMP property Documents Digitalisation

ಬಿಬಿಎಂಪಿ ಅಸ್ತಿಗಳ ಡಿಜಿಟಲೀಕರಣ: ಮುನೀಶ್‌ ಮೌದ್ಗಿಲ್ ಅವರ ಪತ್ರದಲ್ಲೇನಿದೆ ? ಬಿಬಿಎಂಪಿ ವ್ಯಾಪ್ತಿಯ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಐಎಎಸ್‌ ಅಧಿಕಾರಿ ಮುನೀಶ್ ಮುದ್ಗಿಲ್ ಚಾಲನೆ ನೀಡಿದ್ದಾರೆ.

BBMP property Documents Digitalisation

#Degitalisation #BBMP, #IAS officer Munish Moudgil

ಬೆಂಗಳೂರು, ನ.18: ಬೆಂಗಳೂರು ನಾಗರಿಕರಿಗೊಂದು ಸಿಹಿ ಸುದ್ದಿ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ಥಿರ ಸ್ವತ್ತುಗಳ ಖಾತಾ ದಾಖಲೆಗಳು ಶೀಘ್ರದಲ್ಲಿಯೇ ಡಿಜಿಟಲೀಕರಣಗೊಳ್ಳಲಿವೆ.ಸರ್ಕಾರಿ ಸೇವೆಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿರುವ ನಾಡಿನ ದಕ್ಷ ಐಎಎಸ್‌ ಅಧಿಕಾರಿ ಮುನೀಶ್ ಮುದ್ಗಿಲ್ ಅವರ ನೇತೃತ್ವದಲ್ಲಿ ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳು ಡಿಜಟಲೀಕರಣಗೊಳ್ಳುತ್ತಿವೆ. ಮುಂದಿನ ಮೂರು ತಿಂಗಳಲ್ಲಿ ಬಿಬಿಎಂಪಿ 198 ವಾರ್ಡ್‌ ಗಳ ಸ್ಥಿರ ಸ್ವತ್ತುಗಳ ಖಾತೆಗಳು ಡಿಜಟಲೀಕರಣಗೊಳ್ಳಲಿವೆ.

ಇದರಿಂದ ಬೆಂಗಳೂರು ಜನತೆ ತಮ್ಮ ಆಸ್ತಿಯ ಖಾತೆಗೆ ಕಚೇರಿಗೆ ಅಲೆಯುವಂತಿಲ್ಲ. ಆನ್‌ಲೈನ್ ನಲ್ಲಿಯೇ ಪಡೆಯಬಹುದು. ಮುಖ್ಯವಾಗಿ ಖಾತೆಗಳನ್ನು ತಿದ್ದುಪಡಿ ಮಾಡಿ ಆಸ್ತಿಗಳನ್ನು ಅಕ್ರಮ ಪರಭಾರೆ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಬಿಬಿಎಂಪಿ ವ್ಯಾಪ್ತಿಯ ಸ್ಥಿರ ಸ್ವತ್ತುಗಳು ಡಿಜಟಲೀಕರಣಗೊಂಡ ಬಳಿಕ ಕಾವೇರಿ ತಂತ್ರಾಂಶದಲ್ಲಿಇಂಟಿಗ್ರೇಡ್‌ ಆಗಲಿದ್ದು ಆಸ್ತಿಗಳ ಸುಗಮ ನೋಂದಣಿಯಾಗಲಿದೆ. ಜತೆಗೆ ಇದರಿಂದ ಬಿಬಿಎಂಪಿ ಖಾತಾ ಇಲ್ಲದೇ ನಕಲಿ ಖಾತಾಗಳನ್ನು ಆಧರಿಸಿ ನಿವೇಶನ ನೋಂದಣಿ ಮಾಡುವುದಕ್ಕೆ ಕಡಿವಾಣ ಬೀಳಲಿದೆ. ಈಗಿನ ವೇಗದಲ್ಲಿಯೇ ಕೆಲಸ ಪೂರ್ಣಗೊಂಡಲ್ಲಿ ಮುಂದಿನ ಮೂರು ತಿಂಗಳ ಒಳಗೆ ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಡಿಜಟಲೀಕರಣ ಕಾರ್ಯ ಮುಕ್ತಾಯವಾಗಲಿದೆ.

Manish Moudgil Letter to BBMP Zonal commissioners:

ಬಿಬಿಎಂಪಿ ವ್ಯಾಪ್ತಿಯ ಸ್ಥಿರ ಸ್ವತ್ತುಗಳ ( ಎ ಖಾತಾ ಹಾಗೂ ಬಿ ಖಾತಾ ) ಖಾತಾ ಪುಸ್ತಗಳನ್ನು ಡಿಜಟಲೀಕರಣ ಮಾಡುವ ಸಂಬಂಧ ಬಿಬಿಎಂಪಿ ಸ್ಪೆಷಲ್ ಕಮೀಷನರ್‌  ನೀಷ್‌ ಮುದ್ಗಿಲ್ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ಆಸ್ತಿ ನೋಂದಣಿ ರಿಜಿಸ್ಟರ್ ಗಳನ್ನು ಸ್ಕಾನಿಂಗ್ ಮಾಡಿ ಡಿಜಿಟಲೀಕರಣ ಮಾಡುತ್ತಿದ್ದು, ಮೂರು ತಿಂಗಳ ಒಳಗೆ ಒಳಗಾಗಿ ಬಿಬಿಎಂಪಿ ವಲಯದ ಪ್ರತಿ ವಾರ್ಡ್‌ನ ಆಸ್ತಿಗಳನ್ನು ಡಿಜಟಲೀಕರಣ ಮಾಡಬೇಕು. ಈ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ರಿಜಿಸ್ಟರ್‌ ಗಳಲ್ಲಿ ಯಾವುದೇ ದುರುದ್ದೇಶ ಪೂರ್ವಕ ನೋಂದಣಿ ಸೇರಿಸದೇ ಎಲ್ಲಾ ರಿಜಿಸ್ಟರ್‌ ಗಳನ್ನು ಸೀಲ್‌ ಮಾಡಿ ಜೋನಲ್‌ ಕಮೀಷನರ್‌ ಗಳ ವಶದಲ್ಲಿಟ್ಟುಕೊಳ್ಳಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನೀಡಿದ್ದಾರೆ.

ಎಲ್ಲಾ ಸಹಾಯಕ ಕಂದಾಯ ಅಧಿಕಾರಿಗಳು ಕಂದಾಯ ನಿರೀಕ್ಷಕರು ಮತ್ತು ಐಟಿ ಸಿಬ್ಬಂದಿಯ ಜತೆ ಸೇರಿ ಎಲ್ಲಾ ಆಸ್ತಿ ನೋಂದಣಿ ರಿಜಿಸ್ಟರ್‌ ಗಳನ್ನು ( ಎ ಖಾತಾ ಮತ್ತು ಬಿ ಖಾತಾ ) ನವೆಂಬರ್ 4 ರಂದು ಸಂಜೆ ನಾಲ್ಕು ಗಂಟೆಯೊಳಗೆ ತಲುಪಿಸಲು ಸೂಚಿಸಿದ್ದು,ಅದರಂತೆ ಎಲ್ಲಾ ಆಸ್ತಿ ರಿಜಿಸ್ಟರ್‌ ಗಳನ್ನು ಸೀಲ್‌ ಮಾಡಿ ವಲಯ ಆಯುಕ್ತರ ಕಚೇರಿಗೆ ತಲುಪಿಸಲಾಗಿದೆ. ಪ್ರತಿಯೊಬ್ಬ ಎಆರ್‌ಓ 50 ರಿಂದ 90 ರಿಜಿಸ್ಟರ್‌ ಗಳನ್ನು ಹೊಂದಿರಬೇಕು.

ಎಆರ್‌ಓಗಳು ತಮ್ಮ ತಂಡಗಳ ಜತೆ ವಲಯ ಆಯುಕ್ತರ ಕಚೇರಿಗೆ ಹಾಜರಾಗಬೇಕು. ಪ್ರತಿ ರಿಜಿಸ್ಟರ್‌ ನ ಮೇಲೆ ರಿಜಿಸ್ಟರ್‌ ನಲ್ಲಿರುವ ವ್ಯಕ್ತಿಗಳ ವಿವರಗಳನ್ನು ನಮೂದಿಸಬೇಕು. ರಿಜಿಸ್ಟರ್‌ ನ ಖಾಲಿ ಪುಟಗಳಿಗೆ ಸೀಲ್ ಹಾಕಬೇಕು. ಜೋನಲ್ ಕಮೀಷನರ್ ಮತ್ತು ಜಂಟಿ ಆಯುಕ್ತರು ಎಆರ್‌ಓಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತರ ಆದೇಶದಂತೆ ಬೆಂಗಳೂರಿನ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿರುವ 198 ವಾರ್ಡ್‌ಗಳ ಆಸ್ತಿ ರಿಜಿಸ್ಟರ್‌ ಗಳನ್ನು ಈಗಾಗಲೇ ಜೋನಲ್ ಕಮೀಷನರ್‌ ಗಳ ಕಚೇರಿಗೆ ರವಾನಿಸಿ ಸೀಲ್ ಮಾಡಲಾಗಿದೆ. ಡಿಜಿಟಲೀಕರಣದಲ್ಲಿ ಯಾವುದೇ ಎಡವಟ್ಟು ಹಾಗೂ ತಪ್ಪುಗಳಿಗೆ ಆಸ್ಪದ ಮಾಡದಂತೆ ಮೊದಲ ಹೆಜ್ಜೆಯಲ್ಲಿಯೇ ಮನೀಷ್‌ ಮುದ್ಗಿಲ್ ಮಹತ್ವದ ಕ್ರಮ ಜರುಗಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇ ಸ್ವೊತ್ತು ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳ ನೋಂದಣಿ ವೇಳೆ ಅಕ್ರಮಗಳಿಗೆ ಆಸ್ಪದ ವಿಲ್ಲದೇ ತಡೆ ಹಾಕಲಾಗಿದೆ. ಅದರೆ ಬೆಂಗಳೂರಿನಲ್ಲಿ ನ ಸ್ಥಿರ ಸ್ವತ್ತುಗಳಿಗೆ ಈವರೆಗೂ ಡಿಜಟಲೀಕರಣ ಮಾಡಿರಲಿಲ್ಲ. ಹೀಗಾಗಿ ಯಾರದ್ದೋ ಖಾತೆಯನ್ನು ತಿದ್ದುಪಡಿ ಮಾಡಿ ಅಕ್ರಮ ನೋಂದಣಿ ಮಾಡಿಸಲಾಗುತ್ತಿತ್ತು. ಖಾತಾ ಇಲ್ಲದ ಆಸ್ತಿಗಳಿಗೆ ನಕಲಿ ಖಾತಾ ಸೃಷ್ಟಿಸುವ ದೊಡ್ಡ ಜಾಲವೇ ಹುಟ್ಟಿಕೊಂಡಿತ್ತು. ದಕ್ಷ ಅಧಿಕಾರಿ ಮನೀಷ್‌ ಮುದ್ಗಿಲ್ ನೇತೃತ್ವದಲ್ಲಿ ಇದೀಗ ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಸ್ವತ್ತುಗಳ ಡಿಜಿಟಲೀಕರಣ ಮಾಡುತ್ತಿದ್ದು,ಬೆಂಗಳೂರಿನ ಜನತೆಗೆ ಭಾರೀ ಅನುಕೂಲವಾಗಲಿದೆ.

ಆನ್‌ಲೈನ್ ನಲ್ಲಿಯೇ ಖಾತಾ ಲಭ್ಯದ ಜತೆಗೆ ಅಸ್ತಿಗಳ ನೋಂದಣಿಗೆ ಭಾರೀ ಅನುಕೂಲವಾಗಲಿದೆ. ಅಕ್ರಮ ಆಸ್ತಿಗಳ ನೋಂದಣಿಗೆ ಕಡಿವಾಣ ಬೀಳಲಿದೆ. ಜತೆಗೆ ಬೆಂಗಳೂರಿನ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಖಾತಾ ಗಳನ್ನು ಪಡೆಯಲು ಬಿಬಿಎಂಪಿಗೆ ಅಲೆಯುವುದು ತಪ್ಪಲಿದೆ.

ಸಕಾಲ, ದಿಶಾಂಕ್‌, ಸರ್ವೆ ದಾಖಲೆಗಳ ಡಿಜಟಲೀಕರಣ ಮಾಡುವ ಮೂಲಕ ಕರ್ನಾಟಕಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಹಿರಿಯ ಐಎಎಸ್ ಅಧಿಕಾರಿ ಮನೀಷ್‌ ಮೌದ್ಗಿಲ್ ಸಾರಥ್ಯದಲ್ಲಿಯೇ ಬಿಬಿಎಂಪಿ ಆಸ್ತಿಗಳ ಡಿಜಟಲೀಕರಣವಾಗುತ್ತಿರುವುದು ಮತ್ತೊಂದು ಸಂತಸದ ಸಂಗತಿ. ಈ ಗವರ್ನೆಸ್‌, ತಂತ್ರಜ್ಞಾನ ಬಳಸಿ ಕೋವಿಡ್‌ ನಿರ್ವಹಣೆ, ಸಕಾಲ, ದಿಶಾಂಕ್‌ ಇನ್ನಿತರ ಸೇವೆಯ ಮೂಲಕ ಮನೀಷ್‌ ಮೌದ್ಗಿಲ್ ಅವರು ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಡ್ರೋನ್‌ ಸರ್ವೆ ಗೆ ಚಾಲನೆ ನೀಡಿದ್ದರು. ಕೋವಿಡ್‌ ವಾರ್ ರೂಮ್‌ ನಿರ್ವಹಣೆ ಶೈಲಿ ಮೆಚ್ಚಿ ಕೇಂದ್ರ ಸರ್ಕಾರ ಮನೀಷ್‌ ಮೌದ್ಗಿಲ್ ಅವರಿಗೆ 2020-21 ರಲ್ಲಿ ರಾಷ್ಟ್ರೀಯ ಇ ಗವರ್ನೆಸ್‌ ಅವಾರ್ಡ್‌ ಪಡೆದಿದ್ದರು. 2012 ರಲ್ಲಿಯೇ ಅತ್ಯುತ್ತಮ ನಾಗರಿಕ ಸೇವೆ ಸಲ್ಲಿಸಿದಕ್ಕೆ ಎಕ್ಸ್‌ಲೆನ್ಸಿ ಅವಾರ್ಡ್‌ ನ್ನು ಪ್ರಧಾನ ಮಂತ್ರಿಯಿಂದ ಸ್ವೀಕರಿಸಿದ್ದರು.

ರಿಯಲ್ ಎಸ್ಟೇಟ್‌ ಮಾಫಿಯಾ, ಆಸ್ತಿಗಳ ಅಕ್ರಮ ಪರಭಾರೆಯ ತಾಣವಾಗಿರುವ ಬೆಂಗಳೂರಿನ ಸ್ಥಿರ ಸ್ವತ್ತುಗಳ ಖಾತಾ ದಾಖಲೆಗಳು ಡಿಜಟಲೀಕರಣ ಆಗುವುದರಿಂದ ಅಕ್ರಮ ಖಾತಾ ಸೃಷ್ಠಿಗೆ ಬ್ರೇಕ್ ಬೀಳಲಿದೆ. ನಕಲಿ ಖಾತಾ ಸೃಷ್ಟಿ, ಅಧಿಕಾರಿಗಳ ಭ್ರಷ್ಟಾಚಾರವೂ ನಿಲ್ಲಲಿದೆ.

Exit mobile version