Revenue Facts

ಬೆಂಗಳೂರಿನ ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ QR ಕೋಡ್ ವ್ಯವಸ್ಥೆ ಜಾರಿ!

ಬೆಂಗಳೂರು, ಜುಲೈ 11: ಬೆಂಗಳೂರು ನಗರದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. QR ಕೋಡ್ ಆಧಾರಿತ ಈ ವ್ಯವಸ್ಥೆಯ ಮೂಲಕ ಪೊಲೀಸರ ಸೇವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ಸರಳವಾಗಿ ತಂತ್ರಜ್ಞಾನ ಉಪಯೋಗಿಸಿ ನೀಡಬಹುದಾಗಿರುತ್ತದೆ ಎಂದು ತಿಳಿಸಲಾಗಿರುತ್ತದೆ.ಬೆಂಗಳೂರಿನಲ್ಲಿ ಕೆಲಸ ಮಾಡುವ ಪೊಲೀಸ್‌ ವ್ಯವಸ್ಥೆಯ ಸುಧಾರಣೆಯ ಭಾಗವಾಗಿ ಜನಸ್ನೇಹಿ ಪೊಲೀಸ್‌ ಸಕ್ರಿಯಗೊಳಿಸಲು ನಗರದ ಪೊಲೀಸರು ಹೊಸ ವ್ಯವಸ್ಥೆಯೊಂದನ್ನು ಜಾರಿ ಮಾಡಿದ್ದಾರೆ.

ಸಾರ್ವಜನಿಕರು ನೀಡಿದ ಅಭಿಪ್ರಾಯದ ಮೇಲೆ ನಗರ ಪೊಲೀಸ್ ಆಯುಕ್ತರು ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿರುತ್ತದೆ. ಇತ್ತೀಚೆಗಷ್ಟೇ ಬೆಂಗಳೂರಿನ ಟ್ರಾಫಿಕ್​ ಜಾಮ್​ ವಿಚಾರವಾಗಿ ಯಶವಂತಪುರ ಟ್ರಾಫಿಕ್​ ಪೊಲೀಸ್​​ ಸಾರ್ವಜನಿಕರಿಗೆ ಟ್ರಾಫಿಕ್​ ಜಾಮ್​ ಉಂಟಾಗಲು ಕಾರಣ ಏನು? ಒಂದು ವಾಕ್ಯದಲ್ಲಿ ಉತ್ತರಿಸಿ. ಅತ್ಯುತ್ತಮ ಉತ್ತರ ನೀಡುವವರಿಗೆ ಉತ್ತಮ ಬಹುಮಾನವೂ ಇದೆ ಎಂದು ಹೇಳುವ ಮೂಲಕ ಟ್ವೀಟ್​ ಮಾಡಿದ್ದರು.

QR ಕೋಡ್ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ವ್ಯವಸ್ಥೆಯನ್ನು ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿದೆ.
ಸಾರ್ವಜನಿಕರು ಈ ಮೂಲಕ ನಮ್ಮ ಸೇವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ಸರಳವಾಗಿ ತಂತ್ರಜ್ಞಾನ ಉಪಯೋಗಿಸಿ ನೀಡಬಹುದಾಗಿದೆ. ಇದರಿಂದ ನಾವು ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಉತ್ತಮಪಡಿಸಲು ಸಹಾಯವಾಗಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ ಅವರು ಟ್ವೀಟ್ ‌ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುಳ್ಳುಸುದ್ದಿ, ತಿರುಚಿದ ಮಾಹಿತಿ, ಉಹಾಪೋಹಗಳನ್ನು ನಿಖರವಾದ ಮಾಹಿತಿ ನೀಡುವ ಮೂಲಕ ಸಾರ್ವಜನಿಕರ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಹಿರಿಯ ಅಧಿಕಾರಿಗಳು, ತನಿಖಾಧಿಕಾರಿಗಳು, ಬೆಂಗಳೂರು ಸಂಚಾರ ಪೊಲೀಸ್ ಮತ್ತಿತರ ವಿಭಾಗದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಎಲ್ಲೆಡೆಯ ಮಾಹಿತಿ ಸಂಗ್ರಹಿಸಿ ಇಲಾಖೆ ಆದ್ಯತೆಗೆ ಏಕರೀತಿಯ ಸಂದೇಶ ಬರುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು.

ಪೊಲೀಸರಿಗೆ ತನಿಖೆಗೆ ಸಹಾಯ ಮಾಡುವ ವ್ಯಕ್ತಿಗಳು ಹಾಗೂ ಅವರ ಕೆಲಸದ ಪಟ್ಟಿಯನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಬೇಕು. ಮಾಸಿಕ ಜನಸಂಪರ್ಕ ಸಭೆ ನಡೆಸಬೇಕು. ಸಾರ್ವಜನಿಕರೊಂದಿಗೆ ಅಧಿಕೃತ ವಕ್ತಾರರಾಗಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಪೊಲೀಸ್ ಇಲಾಖೆಯ ವರ್ಚಸ್ಸು, ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸಾರ್ವಜನಿಕರ ಮತ್ತು ಮಾಧ್ಯಮಗಳ ಪ್ರಶ್ನೆಗಳಿಗೆ ಅಧಿಕೃತ ವಕ್ತಾರರು ಮಾಹಿತಿ ನೀಡಬೇಕು ಎಂದು ತಿಳಿಸಿದ್ದರು.

ಇದಲ್ಲದೆ ನಗರ ಪೊಲೀಸ್ ವಿಭಾಗದಲ್ಲಿ ಸಾರ್ವಜನಿಕರು, ಮಾಧ್ಯಮದ ಜೊತೆ ಸಂವಹನ ನಡೆಸಲು ಜಂಟಿ ಪೊಲೀಸ್ ಆಯುಕ್ತರನ್ನು (ಅಪರಾಧ) ಅಧಿಕೃತ ವಕ್ತಾರರಾಗಿ ನೇಮಕಗೊಳಿಸಿ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್ ಅವರು ಆದೇಶಿಸಿದ್ದರು. ಸಾರ್ವಜನಿಕ ಸುರಕ್ಷತೆ, ಸಂಚಾರ, ಅಪರಾಧ ನಿಯಂತ್ರಣ ಸಮುದಾಯ ಕಾವಲುಗಳಂತಹ ವಿಶೇಷ ಅಭಿಯಾನವನ್ನು ಅಧಿಕೃತ ವಕ್ತಾರರು ರೂಪಿಸಬೇಕು ಎಂದು ತಿಳಿಸಲಾಗಿದೆ.

Exit mobile version