Revenue Facts

ಬೆಂಗಳೂರಿನಲ್ಲಿ ನಿಲ್ಲದ ಖೋಟಾ ನೋಟು ಹಾವಳಿ

ಬೆಂಗಳೂರಿನಲ್ಲಿ ನಿಲ್ಲದ ಖೋಟಾ ನೋಟು ಹಾವಳಿ

ಬೆಂಗಳೂರು, ಜು. 31 :ಬಿಹಾರದಿಂದ ನಕಲಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಕಾಟನ್‌ ಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಬಾಲರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಅಕ್ರಮದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ತಮಿಳನಾಡು ಮೂಲದ ಶರವಣನ್ ಕೇರಳದ ನಿತಿನ್ ಹಾಗೂ ದೇವನ್ ಎಂದು ಗುರುತಿಸಲಾಗಿದೆ. ಇವರಿಂದ 500 ರೂ. ಮುಖಬೆಲೆಯ 6,53,500 ರೂ. ಮೌಲ್ಯದ 1307 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.ಇನ್​ಸ್ಟಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ ಶರವಣನ್ ಬಿಹಾರಕ್ಕೆ ತೆರಳಿ 10 ಲಕ್ಷ ನೋಟಿಗೆ 3 ಲಕ್ಷ ಅಸಲಿ ನೋಟು ನೀಡಿ ಬೆಂಗಳೂರಿಗೆ ತಂದಿದ್ದ. ಬೆಂಗಳೂರಿನಲ್ಲಿ 4 ಸಾವಿರ ಅಸಲಿ ನೋಟಿಗೆ 10 ಸಾವಿರ ಖೋಟಾ ನೋಟು ನೀಡುತ್ತಿದ್ದ. ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳ ಬಂಧಿಸಲಾಗಿದ್ದು, ಆರೋಪಿಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆದಿರುವುದಾಗಿ ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.

Exit mobile version