Revenue Facts

ಬಗರ್ ಹುಕುಂ ತಂತ್ರಾಂಶ(ಆ್ಯಪ್) ಶೀಘ್ರ ಅನುಷ್ಠಾನ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಬೆಂಗಳೂರು;ಸರ್ಕಾರಿ ಜಮೀನಿನಲ್ಲಿನ ಸಾಗುವಳಿಯನ್ನು ಸಕ್ರಮ ಮಾಡುವ ಮುನ್ನ ನಿಜಸ್ಥಿತಿಯನ್ನು ಪತ್ತೆ ಮಾಡಲು ರೂಪಿಸಿರುವ ಬಗರ್‌ಹುಕುಂ ತಂತ್ರಾಂಶದ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ರಾಜ್ಯದಾದ್ಯಂತ ಅಕ್ರಮ-ಸಕ್ರಮಕ್ಕಾಗಿ ನಮೂನೆ 50, 53 ಮತ್ತು 57 ರಲ್ಲಿ ಲಕ್ಷಾಂತರ ರೈತರು ಅರ್ಜಿ ಸಲ್ಲಿಸಿ ವಿಲೇವಾರಿಗೆ ಕಾಯುತ್ತಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಸಾಗುವಳಿಯಲ್ಲಿ ತೊಡಗಿ, ಸಾಗುವಳಿ ಪತ್ರ ನಿರೀಕ್ಷೆಯಲ್ಲಿದ್ದ ರೈತರಿಗೆ, ಸಕ್ರಮ ಮಾಡುವ ಮುನ್ನ ನೈಜತೆಯನ್ನು ಪತ್ತೆ ಮಾಡಲು ಬಗರ್ ಹುಕುಂ ತಂತ್ರಾಂಶವನ್ನು ರೂಪಿಸಲಾಗಿದೆ. ಈ ತಂತ್ರಾಂಶವನ್ನು ಶೀಘ್ರವೇ ಅನುಷ್ಠಾನಗೊಳಿಸಲಿದ್ದು, ಆ ಬಳಿಕ ಸಕ್ರಮ ಮಾಡಿ ಸಾಗುವಳಿ ಪತ್ರವನ್ನು ಬಗರ್ ಹುಕುಂ ರೈತರಿಗೆ ನೀಡಲು ಸರ್ಕಾರ ಮುಂದಾಗಿದೆ.ಸಕ್ರಮ ಮಾಡುವ ಪ್ರಕ್ರಿಯೆಯನ್ನು ಶೀಘ್ರ ಮುಗಿಸುವಂತೆ ಬುಧವಾರ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಿದರು. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಬಗರ್‌ಹುಕುಂ ತಂತ್ರಾಂಶ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯನ್ನು ಸಚಿವರಿಗೆ ತೋರಿಸಲಾಯಿತು.

ಅನಧಿಕೃತವಾಗಿ ಸಾಗುವಳಿದಾರರು ಕೃಷಿಯಲ್ಲಿ ತೊಡಗಿದರೆ, ಅಕ್ರಮ-ಸಕ್ರಮ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಇಲಾಖೆ ಬದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಮೂಲಕ ಸಾವಿರಾರು ಎಕರೆ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದೆ. ‘ಬಗರ್ ಹುಕುಂ ತಂತ್ರಾಂಶ’ (ಆ್ಯಪ್) ಮೂಲಕ ಈ ಸಕ್ರಮದ ಕೆಲಸ ಮುಗಿಸಲಾಗುವುದು ಎಂದಿದ್ದಾರೆ, ಸಾವಿರಾರು ಎಕರೆ ತರುವ ಈ ಭೂಮಿಯು ಕೃಷಿ ಚಟುವಟಿಕೆಗಳೇ ನಡೆಸದೇ ಅಕ್ರಮ ಮಾಡುವವರ ಪಾಲಾಗಿದೆ. ಪ್ರತಿಯೊಂದು ಭಾಗಕ್ಕೂ ಇಲಾಖೆ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.

Exit mobile version