Revenue Facts

ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶದಂತೆ ಕಾರ್ಯಾಚರಣೆ ಬೀದಿಬದಿ ವ್ಯಾಪಾರಿಗಳು ಬೀದಿಪಾಲು

#order #BBMP #Chief Commissioner #operation #street vendors

ಬೆಂಗಳೂರು: ಬಿಬಿಎಂಪಿಯಿಂದ(BBMP) ತೆರವು ಕಾರ್ಯಾಚರಣೆ ಆರಂಭವಾಗಿದೆ.ದೀಪಾವಳಿ ಹಬ್ಬದ ಭರ್ಜರಿ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಅತಂತ್ರ ಸ್ಥಿತಿ ಎದುರಾಗಿದೆ.ಬಿಬಿಎಂಪಿ ಮಾರ್ಷಲ್ ಸೇರಿದಂತೆ ಅಧಿಕಾರಿ ಗಳ ತಂಡ ಜಯನಗರ ವಾಣಿಜ್ಯ ಸಂಕೀರ್ಣ ಬಳಿಯ 9ನೇ ಮುಖ್ಯರಸ್ತೆ, 10ನೇ ಮುಖ್ಯ ರಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸೇರಿದಂತೆ ಸುತ್ತ ಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು(Clearance of encroachment) ಕಾರ್ಯಚರಣೆ ನಡೆಸಿದರು.ದಕ್ಷಿಣ ವಲಯ ವ್ಯಾಪ್ತಿಯ ಜಯನಗರದ ವಾಣಿಜ್ಯ ಸಂಕೀ ರ್ಣದ ಸುತ್ತಲಿನ ವಿವಿಧ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಮಾಡಿಕೊಂಡಿದ್ದ ಒತ್ತುವರಿ ಮಂಗಳವಾರ ತೆರವುಗೊಳಿಸಲಾಯಿತು.ಮಾರ್ಷಲ್ ಗಳು ಜಯನಗರದ ಬಿಡಿಎ(BDA) ಕಾಂಪ್ಲೆಕ್ಸ್ ಪ್ರದೇಶದಿಂದ 400 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ.ಬೀದಿ ಬದಿ ವ್ಯಾಪಾರಿಗಳು ದಶಕಗಳಿಂದ ಈ ಪ್ರದೇಶದಲ್ಲಿ ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ಬಿಬಿಎಂಪಿ(BBMP) ಪ್ರಕಾರ, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಪರವಾನಗಿ ಹೊಂದಿದ್ದರೂ ಸಹ ಈ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅನುಮತಿ ಇಲ್ಲ.ಮೂರು ತಿಂಗಳ ಹಿಂದೆ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ(BBMP) ನೋಟಿಸ್ ನೀಡಿತ್ತು.ಕಳೆದ ವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ವೇಳೆ ಪಾದಚಾರಿಗಳಿಗೆ ಅಡ್ಡಿಯಾಗುತ್ತಿದ್ದಲ್ಲಿ ಬೀದಿ ವ್ಯಾಪಾರಿಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.ಇದರಿಂದ ಬೀದಿಬದಿ ವ್ಯಾಪಾರಿಗಳನ್ನು, ಅಲ್ಲಿಂದ ತೆರವು ಮಾಡಿ ಅವರಿಗೆ ಬೇರೆ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲು ಬಿಬಿಎಂಪಿ ಚಿಂತನೆ ನಡೆಸಿತ್ತು.ಜಯನಗರದಲ್ಲಿನ ಒತ್ತುವರಿ ತೆರವು ಕುರಿತು ಮಾತನಾಡಿರುವ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಈ ಬೀದಿಬದಿ ವ್ಯಾಪಾರಿಗಳು ಇಲ್ಲಿನ ರಸ್ತೆಯ ಬಹುಪಾಲು ಭಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಒತ್ತುವರಿದಾರರ ತೆರವು ಮಾಡಲಾಗುವುದು. ಇಲ್ಲಿನ ಒತ್ತುವರಿ ವ್ಯಾಪಾರಿಗಳಿಗೆ ಈ ಹಿಂದೆ ನೋಟಿಸ್‌ ನೀಡಿ ಜಾಗ ತೆರವು ಮಾಡುವಂತೆ ಸೂಚಿಸಿದ್ದೇವೆ. ಹಲವು ನೋಟಿಸ್‌ ಜಾರಿ ಮಾಡಿದ್ದೇವೆ. ಈ ಬಾರಿ ನಾವು ಅತಿಕ್ರಮಣ ಸ್ಥಳಗಳನ್ನು ತೆರವು ಮಾಡಲು ನಿರ್ಧರಿಸಿದ್ದೇವೆ. ಈ ಸಂಬಂಧ ಕಾರ್ಯಪಡೆಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಜಯನಗರದಿಂದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದನ್ನು ಅಖಿಲ ಭಾರತ ಟ್ರೇಡ್ ಯೂನಿಯನ್ ಗಳ ಕೇಂದ್ರ ಮಂಡಳಿ (AICCT) ವಿರೋಧಿಸಿದೆ.

Exit mobile version