Revenue Facts

ನೀವು ಬಾಡಿಗೆದಾರರೇ.. ಹಾಗಾದರೆ ನಿಮ್ಮ ಹಕ್ಕುಗಳ ಬಗ್ಗೆರ ನಿಮಗೆಷ್ಟು ಗೊತ್ತು..?

ನೀವು ಬಾಡಿಗೆದಾರರೇ.. ಹಾಗಾದರೆ ನಿಮ್ಮ ಹಕ್ಕುಗಳ ಬಗ್ಗೆರ ನಿಮಗೆಷ್ಟು ಗೊತ್ತು..?

ಬೆಂಗಳೂರು, ಜೂ. 10 : ಬಾಡಿಗೆದಾರರು ತಮ್ಮ ಹಕ್ಕಿನ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಮುಖ್ಯ. ಅಷ್ಟೇ ಅಲ್ಲ ಕಾನೂನಿನಲ್ಲಿ ಬಾಡಿಗೆದಾರರ ಕಾಯ್ದೆ ಏನು ಹೇಳುತ್ತದೆ ಎಂಬ ಬಗ್ಗೆಯೂ ತಿಳಿದುಕೊಂಡಿದ್ದರೆ ಒಳ್ಳೆಯದು. ಬಾಡಿಗೆ ಮನೆಯನ್ನು ನೀಡುವ ಮಾಲೀಕರಿಗೆ ಹೇಗೆ ತಮ್ಮ ಮನೆಯ ಮೇಲೆ ಹಕ್ಕುಗಳಿರುತ್ತವೆಯೋ ಹಾಗೆಯೇ ಬಾಡಿಗೆದಾರರಿಗೆ ಕೂಡ ಮೂಲಭೂತ ಹಕ್ಕುಗಳು ಇರುತ್ತವೆ. ಅದು ಏನೆಂದರೆ, ಬಾಡಿಗೆ ನಿಯಂತ್ರಣ ಕಾಯಿದೆ 1948 ರ ಪ್ರಕಾರ ಬಾಡಿಗೆದಾರರು ಮತ್ತು ಭೂಮಾಲೀಕರು ಲಿಖಿತ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು.

ಈ ಲಿಖಿತ ಒಪ್ಪಂದ ಮಾನ್ಯವಾಗಿದ್ದರೆ, ಸಮಸ್ಯೆ ಆದಾಗ ರಕ್ಷಿಸಲು ಅವಕಾಶವಿರುತ್ತದೆ. ಒಂಪ್ಪಂದದ ಸಮಯ ಮುಗಿಯುತ್ತಿದ್ದಂತೆಯೇ ಪುನಃ ಮಾಡಿಸಬೇಕು. ಇಲ್ಲದೇ ಹೋದಲ್ಲಿ ಸಮಸ್ಯೆ ಆಗುತ್ತದೆ. ಬಾಡಿಗೆದಾರರ ಮನೆಗೆ ಮಾಲೀಕರು ಯಾವಾಗ ಎಂದರೆ, ಆಗ ಪ್ರವೇಶಿಸುವಂತಿಲ್ಲ. ತುರ್ತು ಪರೀಸ್ಥಿತಿಯಲ್ಲಿ ಹೊರತು ಪಡಿಸಿ. ಇನ್ನು ಬಾಡಿಗೆ ಮನೆಯಲ್ಲಿ ರಿಪೇರಿಗಳಿದ್ದರೆ, ಇದಕ್ಕೆ ಖರ್ಚನ್ನು ಮನೆ ಮಾಲೀಕ ಕೂಡ ಭರಿಸಬೇಕು. ನೀರು, ವಿದ್ಯುತ್ ಅನ್ನು ಹೊರತು ಪಡಿಸಿ.

ಇನ್ನು ಮನೆ ಮಾಲೀಕರು ಬಾಡಿಗೆಯನ್ನು ಹೆಚ್ಚಿಸುವುದಾದರೆ, ಮೂರು ತಿಂಗಳ ಮುನ್ನವೇ ಮಾಹಿತಿ ನೀಡಬೇಕು. ಬಾಡಿಗೆ ಮನೆಯಿಂದಲೂ ಸುಖಾ ಸುಮ್ಮನೆ ಹೊರ ಹಾಕುವಂತಿಲ್ಲ. ಒಂಪ್ಪದ ಸಮಯ ಮುಗಿದಿದ್ದರೆ ಮನೆಯಿಂ ದ ಹೊರಗೆ ಕಳಿಸಬಹುದು. ಇಲ್ಲದೇ ಹೋದಲ್ಲಿ ಬಾಡಿಗೆದಾರರಿಗೆ ಮೂರು ತಿಂಗಳ ಮುನ್ನವೇ ವಿಚಾರವನ್ನು ತಿಳಿಸಿ ಅರ್ಥ ಮಾಡಿಸಬೇಕು. ಇನ್ನು ಬಾಡಿಗೆದಾರ ಮನೆಯನ್ನು ಖಾಲಿ ಮಾಡಿದ ಒಂದು ತಿಂಗಳ ಒಳಗಾಗಿ ಮುಂಗಡ ಹಣವನ್ನು ಹಿಂದಿರುಗಿಸಬೇಕು. ಇಲ್ಲವೇ ಬಾಡಿಗೆದಾರರು ಕಾನೂನು ಹೋರಾಟವನ್ನು ಮಾಡಬಹುದು.

Exit mobile version