Revenue Facts

ದೀಪಾವಳಿ ಪಟಾಕಿ ಸ್ಫೋಟಕ್ಕೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ 193ಕ್ಕೇರಿದ AQI

ಬೆಂಗಳೂರು : ಉದ್ಯಾನನಗರಿಯಲ್ಲಿ ಹವಾಮಾನ ಗುಣಮಟ್ಟ ತೀವ್ರಪ್ರಮಾಣದಲ್ಲಿ ಕುಸಿದಿದೆ ಎಂದು ವರದಿಯೊಂದು ಹೇಳಿದೆ.ಬೆಂಗಳೂರಿನ ಜನತೆ ಕಳೆದ 2 ದಿನಗಳಿಂದ ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದಾರೆ ಉದ್ಯಾನ ನಗರಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ 193ಕ್ಕೇರಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ ವರದಿ ಮಾಡಿದೆ.ಬೆಂಗಳೂರಿನ ಇಂದಿನ ಗಾಳಿಯ ಗುಣಮಟ್ಟದಿಂದ ಉಸಿರಾಟದ ತೊಂದರೆ ಅಥವಾ ಗಂಟಲಿನ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಅನಾವಶ್ಯಕ ಹೊರಗಿನ ಓಡಾಟ ತಪ್ಪಿಸಿ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.ಬೆಂಗಳೂರಿನ ಇಂದಿನ ವಾಯು ಗುಣಮಟ್ಟ PM 2.6 193 ಆಗಿದ್ದು, PM 10 (Particulate Matter)ನ ಪ್ರಮಾಣ 152ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ತುಂಬಾ ಅನಾರೋಗ್ಯಕರ ಎಂದು ಆ್ಯಕ್ಯುವೆದರ್ ವರದಿ ಮಾಡಿದೆ.ವಾಯುಮಾಲಿನ್ಯ (Air Pollution)ದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ (Delhi) ಹಾದಿಯಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರು ದಾಪುಗಾಲಿರಿಸುತ್ತಿದ್ದು, ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ (Air Quality Index) ಕಳಪೆ ಮಟ್ಟಕ್ಕೆ ಕುಸಿಯುತ್ತಿರುವ ಕುರಿತು ಈ ಹಿಂದೆ ವರದಿಯಾಗಿತ್ತು.

Exit mobile version