Revenue Facts

ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ದಾರರಿಗೆ ಮತ್ತೊಂದು ಶಾಕ್

ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ದಾರರಿಗೆ  ಮತ್ತೊಂದು ಶಾಕ್

ಬೆಂಗಳೂರು;ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ  ಯೋಜನೆಯಡಿ ಪಡಿತರ ಪಡೆಯದ ಬಿಪಿಎಲ್(BPL) ಕಾರ್ಡ್ ರದ್ದತಿಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮದಿಂದ ಸರ್ಕಾರಿ ಸೌಲಭ್ಯದಿಂದಲೂ ವಂಚಿತಗೊಳ್ಳುವ ಆತಂಕ ಲಕ್ಷಾಂತರ ಕುಟುಂಬಗಳಿಗೆ ಎದುರಾಗಿದೆ.ಆರು ತಿಂಗಳಿಂದ ಪಡಿತರ ಪಡೆಯದ ಬಿಪಿಎಲ್(BPL) ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಇದರಿಂದ ಪಡಿತರ ಚೀಟಿ(Rationcard) ಜೊತೆಗೆ ಸೌಲಭ್ಯವೂ ಕಡಿತವಾಗುವ ಆತಂಕದಲ್ಲಿ ಲಕ್ಷಾಂತರ ಕುಟುಂಬಗಳಿವೆ.ಗಮನಾರ್ಹವಾಗಿ, ರಾಜ್ಯದಲ್ಲಿ 1,16,95,029 ಬಿಪಿಎಲ್ ಕಾರ್ಡ್ ದಾರರಿದ್ದಾರೆ. ಆದರೆ, ಕಳೆದ ಆರು ತಿಂಗಳಿನಿಂದ 3.40 ಲಕ್ಷ ಕಾರ್ಡ್ ದಾರರು ಪಡಿತರವನ್ನೇ ಪಡೆದುಕೊಂಡಿಲ್ಲ. ಇಂತಹ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಸೂಚನೆ ನೀಡಿದೆ.ಪಡಿತರ ಪಡೆಯದ ಕಾರ್ಡ್ ದಾರರಿಗೆ ಯಾವುದೇ ನೋಟಿಸ್ ನೀಡದೆ ಕಾರ್ಡ್ ಗಳನ್ನು ರದ್ದು(Cancel) ಮಾಡಲಾಗುವುದು ಎನ್ನಲಾಗಿದೆ.ಆಹಾರ ಭದ್ರತೆ ಕಾಯ್ದೆಯಡಿ (NFSI) ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ರಾಜ್ಯದ ಬಿಪಿಎಲ್ ಫಲಾನುಭವಿಗಳಿಗೆ, ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ.

ಇದರಿಂದ ನ್ಯಾಯಬೆಲೆ ಅಂಗಡಿಗಳ ವರ್ತಕರಿಗೆ ಕ್ವಿಂಟಲ್‌ಗೆ 100 ರೂ. ಕಮಿಷನ್ ಸಿಗುತ್ತಿದೆ. ಎಷ್ಟು ಆದರೆ, ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ನೀಡುತ್ತಿದ್ದು, ವರ್ತಕರಿಗೆ ಸಿಗಬೇಕಿದ್ದ ಕಮಿಷನ್ ಸಿಗದಂತಾಗಿದೆ. ಪಡಿತರ ಪಡೆಯದ ಕಾರ್ಡ್‌ಗಳನ್ನು ರದ್ದುಪಡಿಸಿದರೆ ನ್ಯಾಯಬೆಲೆ ಅಂಗಡಿಗಳು ಹೊಂದಿರುವ ಕಾರ್ಡ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಜತೆಗೆ, ಕಮಿಷನ್ ಹಣವೂ ಖೋತಾವಾಗುತ್ತದೆ.ಪಡಿತರ ಚೀಟಿ ರದ್ದತಿಯಿಂದ ಉಚಿತ ರೇಷನ್ ಸೇರಿದಂತೆ ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯಲು ಪಿಂಚಣಿ ಸೌಲಭ್ಯ, ಹಾಗೆಯೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಹ ಪಡೆಯುವಲ್ಲಿಯೂ ತೊಡಕು , ಆರ್‌ಟಿಇ ಶಿಕ್ಷಣ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯುವಲ್ಲಿ ಜನರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 60 ಕೋಟಿ ರೂ. ಉಳಿತಾಯವಾಗುತ್ತದೆ. ಹೀಗಿದ್ದರೂ ಪಡಿತರ ಪಡೆಯದವರ ಕಾರ್ಡ್ ರದ್ದು ಮಾಡುವುದರಿಂದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಲಾಗಿದೆ.

Exit mobile version