Revenue Facts

GOOD NEWS: ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತ ಮಹಿಳೆಯರಿಗೆ ₹12,000 ಘೋಷಣೆ ಸಾಧ್ಯತೆ

GOOD NEWS: ಕಿಸಾನ್‌ ಸಮ್ಮಾನ್‌ ಯೋಜನೆಯಡಿ  ರೈತ ಮಹಿಳೆಯರಿಗೆ ₹12,000 ಘೋಷಣೆ ಸಾಧ್ಯತೆ

ಬೆಂಗಳೂರು;ದೇಶದ ರೈತ ಮಹಿಳೆಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಲಿದೆ ಎಂದು ವರದಿಯಾಗಿದೆ.ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಮಹಿಳಾ ರೈತರಿಗೆ ಮಹತ್ವದ ಘೋಷಣೆ ಮಾಡಲಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಮಹಿಳಾ ರೈತರಿಗೆ ವಾರ್ಷಿಕ 12,000 ರೂ. ನೆರವು ಘೋಷಿಸಲಿದೆ.ಎಂದು ಎರಡು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯ್ಟರ್ಸ್‌(Reuters) ವರದಿ ಮಾಡಿದೆ.ಫೆಬ್ರವರಿ 1ರಂದು ಮಂಡನೆಯಾಗಲಿರುವ ಮಧ್ಯಂತರ ಬಜೆಟ್‌ನಲ್ಲಿ(Budget) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಅವರು ಮಹಿಳಾ ರೈತರಿಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.ಪ್ರಧಾನಿ ನರೇಂದ್ರ ಮೋದಿ ವಾರ್ಷಿಕವಾಗಿ ಮಹಿಳಾ ರೈತರಿಗೆ ಗೌರವ ನಿಧಿಯನ್ನು ದ್ವಿಗುಣಗೊಳಿಸಲಿದ್ದಾರೆ. ಇದು ಸಂಭವಿಸಿದಲ್ಲಿ, ಮಹಿಳಾ ರೈತರು ಕೇಂದ್ರ ಸರ್ಕಾರದಿಂದ ಪ್ರತಿವರ್ಷ 12 ಸಾವಿರ ರೂ. ಪಡೆಯಲಿದ್ದಾರೆ. ಪ್ರಸ್ತುತ, ದೇಶಾದ್ಯಂತ ರೈತರಿಗೆ ಕಿಸಾನ್‌ ಸಮ್ಮಾನ್‌ ನಿಧಿಯಡಿ ವಾರ್ಷಿಕ 6000 ರೂ. ನೆರವು ನೀಡಲಾಗುತ್ತಿದೆ.ದೇಶದಲ್ಲಿ ಒಟ್ಟು 26 ಕೋಟಿ ರೈತರಿದ್ದಾರೆ. ಅವರ ಕುಟುಂಬಗಳ ಮತಗಳನ್ನು ಲೆಕ್ಕ ಹಾಕಿದರೆ, ಬಹಳ ದೊಡ್ಡ ಮತ ಬ್ಯಾಂಕ್‌ ಆಗಿದೆ. ದೇಶದ 142 ಕೋಟಿ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಶೇ. 60ರಷ್ಟು ಇದೆ. ಕೇವಲ ಶೇ. 13ರಷ್ಟು ಮಹಿಳೆಯರಷ್ಟೇ ಭೂಮಿಯ ಒಡೆತನ ಹೊಂದಿದ್ದಾರೆ.ಬಾರ್ಕ್ಲೇಸ್ ಇನ್ವೆಸ್ಟ್ಮೆಂಟ್ ಬ್ಯಾಂಕಿನ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ(Rahul Bajoria) ಅವರು ಹೇಳುವಂತೆ, ಕಿಸಾನ್ ಸಮ್ಮಾನ್‌ ನಿಧಿ ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಸಾಕಷ್ಟು ಬೆಂಬಲ ದೊರೆಯಲಿದೆ ಎಂದು ಹೇಳಿದರು. ಇದು ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಗ್ರಾಮೀಣ ಪ್ರದೇಶದ ಮಹಿಳೆಯರ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ.

Exit mobile version