Revenue Facts

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ. ತೆಲಂಗಾಣ, ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂ ಈ ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.

 

ಇಲ್ಲಿದೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರಮುಖ ದಿನಾಂಕಗಳು

1.ರಾಜಸ್ಥಾನ ವಿಧಾನಸಭಾ ಚುನಾವಣಾ ವೇಳಾಪಟ್ಟಿ

ಈ ಅಕ್ಟೋಬರ್ 30: ಅಧಿಸೂಚನೆ ಬಿಡುಗಡೆ * ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 6

ನಾಮಪತ್ರಗಳ ಪರಿಶೀಲನೆ: ನವೆಂಬರ್ 7

ನಾಮಪತ್ರಗಳ ಹಿಂಪಡೆಯುವಿಕೆ: ನವೆಂಬರ್ 9

ಚುನಾವಣಾ ದಿನಾಂಕ: ನವೆಂಬರ್ 23

ಫಲಿತಾಂಶ ದಿನಾಂಕ: ಡಿಸೆಂಬರ್ 3,

 

2. ಮಿಜೋರಾಂ: ಚುನಾವಣೆ ವೇಳಾಪಟ್ಟಿ

ಸ್ಥಾನಗಳ ಸಂಖ್ಯೆ – 40

ಹಂತಗಳ ಸಂಖ್ಯೆ – 1

ಅಧಿಸೂಚನೆ ಹೊರಡಿಸುವ ದಿನಾಂಕ – ಅಕ್ಟೋಬರ್ 13

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 20

ನಾಮಪತ್ರಗಳ ಪರಿಶೀಲನೆಗೆ ದಿನಾಂಕ – ಅಕ್ಟೋಬರ್ 21 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ – ಅಕ್ಟೋಬರ್23

ಮತದಾನದ ದಿನಾಂಕ – ನವೆಂಬರ್ 7

ಫಲಿತಾಂಶದ ದಿನಾಂಕ – ಡಿಸೆಂಬರ್ 3

3.ಮಧ್ಯಪ್ರದೇಶ: ಚುನಾವಣಾ ವೇಳಾಪಟ್ಟಿ

•ಸ್ಥಾನಗಳ ಸಂಖ್ಯೆ – 230

• ಹಂತಗಳ ಸಂಖ್ಯೆ – 1

• ಅಧಿಸೂಚನೆ ಹೊರಡಿಸುವ ದಿನಾಂಕ – ಅಕ್ಟೋಬರ್ 21 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 30

• ನಾಮಪತ್ರಗಳ ಪರಿಶೀಲನೆಗೆ ದಿನಾಂಕ ಅಕ್ಟೋಬರ್ 31

• ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ – ನವೆಂಬರ್ 2

• ಮತದಾನದ ದಿನಾಂಕ – ನವೆಂಬರ್ 17

• ಫಲಿತಾಂಶದ ದಿನಾಂಕ – ಡಿಸೆಂಬರ್ 3

4.ತೆಲಂಗಾಣ ಚುನಾವಣಾ ವೇಳಾಪಟ್ಟಿ

•ಅಧಿಸೂಚನೆ ಬಿಡುಗಡೆ: ನವೆಂಬರ್ 3

• ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 10

• ನಾಮಪತ್ರಗಳ ಪರಿಶೀಲನೆಯ ದಿನಾಂಕ ನವೆಂಬರ್ 13

• ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ನವೆಂಬರ್15

• ಮತದಾನ ದಿನಾಂಕ: ನವೆಂಬರ್ 30

•ಫಲಿತಾಂಶ ದಿನಾಂಕ: ಡಿಸೆಂಬರ್ 3

4.ಛತ್ತೀಸ್‌ಗಢದ ಚುನಾವಣಾ ವೇಳಾಪಟ್ಟಿ

ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತ: ಅ.13 ರಂದು ಅಧಿಸೂಚನೆ,

ಅ.20ಕ್ಕೆ ನಾಮಪತ್ರ ಸಲ್ಲಿಕೆ,

ಅ.21 ರಂದು ನಾಮಪತ್ರ ಪರಿಶೀಲನೆ,

ಅ.23 ರಂದು ಹಿಂಪಡೆಯುವಿಕೆ, ನ.7 ರಂದು ಮತದಾನ, ಡಿ.3 ರಂದು ಫಲಿತಾಂಶ.

ಎರಡನೇ ಹಂತ: ಅ.21 ರಂದು ಅಧಿಸೂಚನೆ,

ಅ.30 ರಂದು ನಾಮಪತ್ರ ಸಲ್ಲಿಕೆ,

ಅ.31 ರಂದು ನಾಮಪತ್ರ ಪರಿಶೀಲನೆ,

ನ.2 ರಂದು ಹಿಂಪಡೆಯುವಿಕೆ, ನ.17 ರಂದು ಮತದಾನ,

ಡಿ.3 ರಂದು ಫಲಿತಾಂಶ.

 

Exit mobile version