Revenue Facts

ಇಂದಿನಿಂದ ಅನ್ನಭಾಗ್ಯ. ಗೃಹಜ್ಯೊತಿ ಯೊಜನೆ ಜಾರಿ

ಇಂದಿನಿಂದ ಅನ್ನಭಾಗ್ಯ. ಗೃಹಜ್ಯೊತಿ ಯೊಜನೆ ಜಾರಿ

ಬೆಂಗಳೂರು, ಜು. 01 :ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಈ ಮೂಲಕ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಇಂದಿನಿಂದ (ಜುಲೈ 1) ಇನ್ನೆರಡು ಗ್ಯಾರಂಟಿಗಳಾದ ಸರ್ಕಾರದ ಗೃಹಜ್ಯೋತಿ ಮತ್ತು ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳು ಇಂದಿನಿಂದಲೇ (ಜುಲೈ 1) ಅಧಿಕೃತವಾಗಿ ಅನುಷ್ಠಾನವಾಗಲಿವೆ. 5 ಕೆಜಿ ಅಕ್ಕಿಯ ಜತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಫ್ರೀ ವಿದ್ಯುತ್ ದೊರೆಯಲಿದೆ.ಗ್ರಾಹಕರು ಜುಲೈ ತಿಂಗಳ ಬಿಲ್ ಆಗಸ್ಟ್‌ನಲ್ಲಿ ಕಟ್ಟಬೇಕಿಲ್ಲ.

ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಮತ್ತು 5 ಕೆ.ಜಿ ಅಕ್ಕಿಯ ಹಣ ಸಿಗಲಿದೆ. ಪ್ರತೀ ಕೆ.ಜಿ ಅಕ್ಕಿಗೆ 34 ರೂಪಾಯಿಗಳಂತೆ 170 ರೂ. ಪಡಿತರ ಚೀಟಿದಾರರ ಖಾತೆಗೆ ಜಮಾ ಆಗಲಿದೆ.1.22 ಕೋಟಿ ಬಿಪಿಎಲ್ ಕಾರ್ಡ್‌ದಾರ ಫಲಾನುಭವಿಗಳ ಖಾತೆಗಳಿದ್ದು ತಕ್ಷಣದಿಂದಲೇ ಕಾರ್ಡ್‌ನಲ್ಲಿ ಇರುವ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರನಗದು ಮುಖಾಂತರ ಹಣ ವರ್ಗಾವಣೆಯಾಗಲಿದೆ. ಇಲಾಖೆ ಎಲ್ಲಾ ರೀತಿಯಿಂದಲೂ ಸಜ್ಜಾಗಿದ್ದು, ಅಕ್ಕಿ ಸಿಗುವರೆಗೂ ನಗದು ಹಣ ನೀಡುವ ವ್ಯವಸ್ಥೆ ಮುಂದುವರಿಯಲಿದೆ.

ಜುಲೈ ಒಂದರಿಂದ ಬಳಸುವ 200 ಯುನಿಟ್ ಒಳಗಿನ ಸರಾಸರಿ (ಶೇ.10) ವಿದ್ಯುತ್‌ಗೆ ಬಿಲ್‌ಕಟ್ಟುವಂತಿಲ್ಲ. ಆದರೆ ಈ ತಿಂಗಳ ವಿದ್ಯುತ್‌ ಬಿಲ್‌ ಆಗಸ್ಟ್‌ನಲ್ಲಿ ಗ್ರಾಹಕರಿಗೆ ಬರಲಿದೆ. 12 ತಿಂಗಳ ಬಿಲ್‌ ಸರಾಸರಿ ಆಧಾರದಲ್ಲಿ ಫ್ರೀ ವಿದ್ಯುತ್ ನೀಡಲಾಗುತ್ತದೆ. ಈ ಅವಧಿಯಲ್ಲಿ ನಿಗದಿಗಿಂತ ಹೆಚ್ಚು ವಿದ್ಯುತ್‌ ಬಳಸಿದರ ಮಾತ್ರ ಬಿಲ್‌ ಪಾವತಿಸಬೇಕಾಗಿದೆ. ವಾರ್ಷಿಕ ಸರಾಸರಿ ಬಿಲ್‌ನಲ್ಲಿ 200 ಯೂನಿಟ್ ಮೀರಿ 10 ಯೂನಿಟ್ ಹೆಚ್ಚಳವಾದರೂ ಬಿಲ್‌ ಪಾವತಿ ಅನಿವಾರ್ಯವಾಗಲಿದೆ. ಗೃಹಜ್ಯೋತಿ ಯೋಜನೆಗೆ ಈಗಾಗಲೇ ರಾಜ್ಯಾದ್ಯಂತ 77,20,207 ಮಂದಿ ಅರ್ಜಿ ಹಾಕಿದ್ದಾರೆ.

Exit mobile version