Revenue Facts

ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಪಾಲಿಸಬೇಕಾದ ನಿಯಮಗಳು ಯಾವುವು..?

ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಪಾಲಿಸಬೇಕಾದ ನಿಯಮಗಳು ಯಾವುವು..?

ಬೆಂಗಳೂರು, ಜ. 31 : ಆಸ್ತಿ ಎಂದು ಬಂದರೆ, ಅಲ್ಲಿ ಸಮಸ್ಯೆಗಳೇ ಹೆಚ್ಚು. ಖರೀದಿಸುವಾಗಲೂ ಗೊಂದಲ ಸಮಸ್ಯೆಗಳು ಇರುತ್ತವೆ. ಇನ್ನು ಮಾರಾಟ ಮಾಡುವಾಗಲೂ ಕಿರಿಕಿರಿಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಪೂರ್ವಜರ ಆಸ್ತಿ ಎಂದರೆ ಕೇಳಬೇಕೆ? ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸಮ್ಮತವಾಗಿ ಒಪ್ಪಿ ಮಾರಾಟ ಮಾಡಬೇಕು. ಇನ್ನು ಆಸ್ತಿ ಖರೀದಿ, ಮಾರಟಗಳಿಗೆ ಸಂಬಂಧ ಪಟ್ಟಂತೆ ನಿಯಮಗಳು ಹಾಗೂ ಕಾನೂನು ರೀತಿಯಲ್ಲಿ ಕೆಲ ಮಾಹಿತಿಗಳ ಕೊರತೆಯಿಂದ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟ ಮಾಡುವ ಮಿನ್ನ ನಿಯಮಗಳನ್ನು ತಿಳಿದಿರುವುದು ಸೂಕ್ತ.

ಪೂರ್ವಜರ ಆಸ್ತಿಯನ್ನು ಮಾರಾಟ ಮಾಡುವುದು ಎಂದರೆ ಸುಲಭದ ಮಾತೇನು ಅಲ್ಲ. ನೂರೆಂಟು ಕಾನೂನು ಕಟ್ಟುಪಾಡುಗಳ ಇರುತ್ತವೆ. ಪೂರ್ವಜರ ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಕೆಲ ಗೊಂದಲಗಳು, ವಿವಾದಗಳು ಹಾಗೂ ಅನೇಕ ರೀತಿಯ ಅಡಚಣೆಗಳಿಂದ ಪಾರಾಗಲು ಕಾನೂನು ನಿಯಮಗಳ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ಹೊಂದಿರುವುದು ಅತ್ಯವಶ್ಯ. ಹಾಗಾದರೆ ಬನ್ನಿ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಲು ಕಾನೂನಿನಲ್ಲಿರುವ ಕ್ರಮಗಳೇನು, ಪೂರ್ವರ ಆಸ್ತಿ ಮಾರಾಟಕ್ಕೆ ಯಾರ ಒಪ್ಪಿಗೆ ಬೇಕು, ಮಾರಾಟ ಮಾಡಲು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿಯೋಣ.

ತಾತಾ, ಮುತ್ತಜ್ಜ, ಅಜ್ಜಿ ಸೇಋಿದಂತೆ ಪೂರ್ವಜರಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಎಂದು ಕರೆಯುತ್ತೇವೆ. ಪೂರ್ವಜರ ಆಸ್ತಿ ಎಂದು ಕೂಡ ಹೇಳಲಾಗುತ್ತದೆ. ದೇಣಿಗೆ ಬಂದದ್ದು, ಸ್ವತಃ ಖರೀದಿಸಿದ್ದು, ಉಡುಗೊರೆಯಾಗಿ ಬಂದ ಇಲ್ಲವೇ ಬೇರೊಬ್ಬರ ಆಸ್ತಿಯನ್ನು ಪಡೆದದ್ದನ್ನು ಸ್ವಯಾರ್ಜಿತ ಎಂದು ಹೇಳಲಾಗುತ್ತದೆ. ತಲೆಮಾರುಗಳಿಂದ ಬಂದ ಪೂರ್ವಜರ ಆಸ್ತಿ ಆದಾಯದ ಜೊತೆಗೆ ಭಾವನಾತ್ಮಕವಾದ ಮೌಲ್ಯವನ್ನೂ ಹೊಂದಿರುತ್ತದೆ. ಸ್ವಯಾರ್ಜಿತ ಆಸ್ತಿಗೆ ಹೋಲಿಸಿದರೆ, ಪೂರ್ವಜರ ಆಸ್ತಿಯನ್ನು ಮಾರಾಟ ಮಾಡುವುದು ಕಷ್ಟವೇ ಸರಿ. ಯಾಕೆಂದರೆ ಸ್ವಯಾರ್ಜಿತ ಆಸ್ತಿಗೆ ಹೆಚ್ಚಿನ ನಿಯಮ ಹಾಗೂ ಕಾನೂನುಗಳಿಲ್ಲ.

 

ಇನ್ನು ಪೂರ್ವಜರ ಆಸ್ತಿಯ ಮೇಲೆ ನಾಲ್ಕು ತಲೆಮಾರುಗಳ ಕುಟುಂಬದ ಹಕ್ಕು ಇರುತ್ತದೆ. ಇನ್ನು ಮಕ್ಕಳಿಗೆ ಆಸ್ತಿಯ ಮೇಲಿನ ಹಕ್ಕು ಹುಟ್ಟಿನಿಂದಲೇ ಬಂದಿರುತ್ತದೆ. ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡಲು ನಾಲ್ಕು ತಲೆಮಾರಿನಲ್ಲಿ ಬದುಕಿರುವ ಪ್ರತಿಯೊಬ್ಬರಿಗೂ ಹಕ್ಕು ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಪಾಲುದಾರನೂ ಒಪ್ಪಿಗೆ ನೀಡಬೇಕಾಗುತ್ತದೆ. ಗಂಡ ಮಕ್ಕಳಷ್ಟೇ ಅಲ್ಲದೇ, ಹೆಣ್ಣು ಮಕ್ಕಳಿಗೂ ಪೂರ್ವಜರ ಆಸ್ತಿಯ ಮೇಲೆ ಸಮಾನಾದ ಹಕ್ಕನ್ನು ನೀಡಲಾಗಿದೆ. ಪಾಲುದಾರರು ಎಲ್ಲರೂ ಆಸ್ತಿ ಮಾರಟಕ್ಕೆ ಒಪ್ಪಿಗೆಯನ್ನು ನೀಡಿದರೆ, ಆಗ ಕಾನೂನು ರೀತಿಯಲ್ಲಿ ಆಸ್ತಿಯನ್ನು ಮಾರಾಟ ಮಾಡಬಹುದು.

ಇನ್ನು ನೀವು ಊರಿನಲ್ಲಿ ಆಸ್ತಿಯನ್ನು ಹೊಂದಿದ್ದರೆ, ಅದನ್ನು ಮಾರಾಟ ಮಾಡುವುದು ಇನ್ನೂ ಸ್ವಲ್ಪ ಕಠಿಣವಾಗಬಹುದು. ಪಾಲುದಾರರ ಪ್ರತಿಯೊಬ್ಬರ ಜೊತೆಗೂ ಸಮಾಲೋಚನೆ ನಡೆಸಿ, ಆಸ್ತಿಯನ್ನು ಮಾರಾಟ ಮಾಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬಹುದು. ಪಾಲುದಾರರು ಮಾರಾಟದ ವಿರುದ್ಧ ಧಾವೆ ಹೂಡುವುದರಿಂದ ನಿಮಗೆ ನೋಟಿಸ್‌ ಬರಬಹುದು. ಆಗ ಆಸ್ತಿ ಮಾರಾಟ ಮಾಡಿರುವುದನ್ನು ನ್ಯಾಯಾಲಯ ರದ್ದುಗೊಳಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡುವಾಗ ಎಚ್ಚರ ವಹಿಸುವುದು ಬಹಳ ಮುಖ್ಯವ ಆಗಿರುತ್ತದೆ.

Exit mobile version