Revenue Facts

ಒಂದು ಕೋಟಿ ಮನೆಗಳಿಗೆ ಛಾವಣಿಯ ಸೋಲಾರ್ ಪ್ಯಾನೆಲ್‌ ಅಳವಡಿಸುವುದಾಗಿ ಘೋಷಣೆ

ಒಂದು ಕೋಟಿ ಮನೆಗಳಿಗೆ ಛಾವಣಿಯ ಸೋಲಾರ್ ಪ್ಯಾನೆಲ್‌ ಅಳವಡಿಸುವುದಾಗಿ ಘೋಷಣೆ

# announcement # install #rooftop #solar panels # one crore houses

ದೆಹಲಿ: ಆಯೋಧ್ಯೆಯ ರಾಮಮಂದಿರದಲ್ಲಿ(Rammandir) ರಾಮಲಲ್ಲಾನ(Ramlalla) ಪ್ರಾಣ ಪ್ರತಿಷ್ಠಾಪನೆ ನಂತರ ಪ್ರಧಾನಿ ನರೇಂದ್ರ ಮೋದಿ(Narendramodi) ಅವರು ‘ಸೂರ್ಯೋದಯ ಯೋಜನೆ’ ಘೋಷಿಸಿದ್ದಾರೆ.ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಪನೆ ಸಂದರ್ಭದಲ್ಲಿ ದೇಶವಾಸಿಗಳು ತಮ್ಮ ಮನೆಗಳ ಮೇಲ್ಟಾವಣೆಯ ಮೇಲೆ ಸೋಲಾರ್ ಪ್ಯಾನಲ್(Solar panel) ಹೊಂದಬೇಕೆಂಬ ಅವರ ಸಂಕಲ ವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಘೋಷಣೆಯ ಪ್ರಕಾರ, ಮೋದಿಯವರ ಯೋಜನೆಯಡಿಯಲ್ಲಿ ಒಂದು ಕೋಟಿ ಮನೆ ಗಳ ಚಾವಣಿ ಮೇಲೆ ಸೋಲಾರ್ ಅಳವಡಿಸಲಾಗುತ್ತದೆ.ಈ ಯೋಜನೆಗೆ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)’ ಎಂದು ಹೆಸರಿಸಲಾಗಿದೆ. ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಜನರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಯನ್ನು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ಅಳವಡಿಸುವ ಗುರಿಯೊಂದಿಗೆ ಪ್ರಾರಂಭಿಸಲಿದೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಸರ್ಕಾರವು 3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲು 40% ಸಬ್ಸಿಡಿ ನೀಡುತ್ತದೆ

Exit mobile version