Revenue Facts

ಇಸ್ರೇಲ್ ​ನಿಂದ 212 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ವಾಯುಪಡೆ

ಇಸ್ರೇಲ್ ​ನಿಂದ 212 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ವಾಯುಪಡೆ

ನವದೆಹಲಿ;ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ಯುದ್ಧ ಮುಂದುವರೆದಿದೆ. ಇದರ ನಡುವೆ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಸ್ರೇಲ್ ​ನಿಂದ ದೆಹಲಿಗೆ ಬಂದಿಳಿದಿದೆ.ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್(Operation Ajey) ಮೂಲಕ ಯುದ್ಧ ಭೂಮಿ ಇಸ್ರೇಲ್‌ನಿಂದ 211 ಭಾರತೀಯರು ತಾಯ್ತಾಡಿಗೆ ಮರಳಿದ್ದಾರೆ. ಮೊದಲ ಬ್ಯಾಚ್‌ನಲ್ಲಿ ಕರ್ನಾಟಕದ ಐವರು ಆಗಮಿಸಿದ್ದಾರೆ. ಜಯೇಶ್ ತಾಕರ್ಶಿ, ಅಶ್ವಿನಿ ಕೃಷ್ಣ, ಕಲ್ಪನಾ ಗೋಪಾಲ್, ಪ್ರೀತಿ ರಾಜಮನ್ನಾರ್ ಹಾಗೂ ಈರಣ್ಣ ಭಾರತಕ್ಕೆ ಬಂದಿಳಿದಿದ್ದಾರೆ. ಇನ್ನೂ, ಈ ಯುದ್ಧದಿಂದಾಗಿ ಉಭಯ ಕಡೆಗಳಲ್ಲಿ ಸುಮಾರು 4,000 ಜನರು ಮೃತಪಟ್ಟಿದ್ದು, 9,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಒಟ್ಟು 3 ಸಾವಿರದ 200 ಮಂದಿ ಗಾಯಗೊಂಡಿದ್ದಾರೆ.ವಿಮಾನವು 211 ವಯಸ್ಕರು ಮತ್ತು ಒಂದು ಶಿಶುವನ್ನು ಹೊತ್ತೊಯ್ಯಿತು.ನಾವು ಅಲ್ಲಿ ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲು, ನಮ್ಮನ್ನು ಮರಳಿ ಕರೆತಂದಿದ್ದಕ್ಕೆ ಭಾರತ ಸರ್ಕಾರಕ್ಕೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.ಇಸ್ರೇಲ್‌ ನಿಂದ ಹಿಂದಿರುಗಲು ಬಯಸುವ ನಮ್ಮ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ #OperationAjay ಅನ್ನು ಪ್ರಾರಂಭಿಸಲಾಗುತ್ತಿದೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಇರಿಸಲಾಗುತ್ತಿದೆ ಎಂದು ಜೈಶಂಕರ್ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದರು.

Exit mobile version