Revenue Facts

ಯುರೋಪ್‌ ಪ್ರವಾಸದ ನಂತರ ಕಾಂಬೋಡಿಯಾಗೆ ತೆರಳಿದ ಹೆಚ್. ಡಿ. ಕುಮಾರಸ್ವಾಮಿ

#After#HD Kumarswamy #Europe #commercial organization

ಬೆಂಗಳೂರು : ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಮ್ಮ ನಾಲ್ವರು ಆಪ್ತರ ಜೊತೆ ಕಳೆದ ರಾತ್ರಿ ಬೆಂಗಳೂರಿನಿಂದ ಕಾಂಬೋಡಿಯಾಕ್ಕೆ ತೆರಳಿದ್ದಾರೆ.ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಕಾಂಬೋಡಿಯಾಕ್ಕೆ ತೆರಳಲಿರುವ ಕುಮಾರಸ್ವಾಮಿ ಇದೇ ತಿಂಗಳ 12 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.ಕಳೆದ ವಾರವಷ್ಟೇ ಕುಟುಂಬ ಸಮೇತ ಯುರೋಪ್ ಪ್ರವಾಸ ಮಾಡಿ ವಾಪಸ್ ಆಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ,ಇದೀಗ ತಮ್ಮ ಪಕ್ಷದ ನಾಯಕರ ಜೊತೆಗೆ ಕಾಂಬೋಡಿಯಾ ಪ್ರವಾಸಕ್ಕೆ ತೆರಳಿದ್ದಾರೆ.ಕುಮಾರಸ್ವಾಮಿಯ ಜೊತೆ ಮಾಜಿ ಶಾಸಕ ಸಾ ರಾ ಮಹೇಶ್, ಎಂ ಮಂಜುನಾಥ್, ಪರಿಷತ್ ಸದಸ್ಯ ಬೋಜೇಗೌಡ, ಮಾಜಿ ಪರಿಷತ್ ಸದಸ್ಯ ರಮೇಶ್ ಗೌಡ ಸಾಥ್ ನೀಡಿದ್ದಾರೆ.ನಿನ್ನೆ ರಾತ್ರಿ ಮಾಜಿ ಸಿಎಂ ಕುಮಾರಸ್ವಾಮಿ 12 ಗಂಟೆಗೆ ವಿಮಾನದಲ್ಲಿ ತೆರಳಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಮತ್ತೆ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.ಈ ಬಾರಿ ಕಾಂಬೋಡಿಯಾ ದೇಶದ ವಾಣಿಜ್ಯ ಸಂಸ್ಥೆಯೊಂದರ ಅಧಿಕೃತ ಆಹ್ವಾನದ ಮೇರೆಗೆ ತೆರಳಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Exit mobile version