Revenue Facts

ಬೀಮ್ ಗಳ ಕೆಳಗೆ ನಿಲ್ಲುವುದು, ಮಲಗುವುದು ಹಾಗೂ ಕೆಲಸವನ್ನೂ ಮಾಡಬಾರದು ಯಾಕೆ ಗೊತ್ತಾ..?

ಬೆಂಗಳೂರು, ಮೇ. 17 : ಬೀಮ್ ಅನ್ನು ಯಾಕೆ ಕಟ್ಟುತ್ತೀವಿ ಅಂದರೆ ಬೀಮ್ ಪಿಲ್ಲರ್ ಗಳನ್ನು ಇಂಟರ್ ಕನೆಕ್ಟ್ ಮಾಡುತ್ತದೆ. ಜೊತೆಗೆ ಕಟ್ಟಡದ ಭಾರವನ್ನು ಬೀಮ್ ತಡೆದುಕೊಳ್ಳುತ್ತದೆ. ಹಾಗಾಗಿ ಬೀಮ್ ಕಟ್ಟಲಾಗುತ್ತದೆ. ಇನ್ ಕೇಸ್ ನಮ್ಮ ತಲೆಯ ಮೇಲೆ ಬೀಮ್ ಇತ್ತು ಎಂದರೆ, ಭಾರವನ್ನೆಲ್ಲಾ ನಮ್ಮ ತಲೆಯ ಮೇಲೆ ಒತ್ತಿಕೊಂಡಂತೆ ಆಗುತ್ತದೆ. ಆಗ ಆ ಭಾರದ ಒತ್ತಡವಿದ್ದಂತೆ ನಮಗೆ ಜೀವನದಲ್ಲಿ ಒತ್ತಡಗಳು ಹೆಚ್ಚಾಗುತ್ತವೆ. ಇದರಿಂದಾಗಿ ಆದಷ್ಟು ಬೀಮ್ ಕೆಳಗಡೆ ಇರದಂತೆ ನೋಡಿಕೊಳ್ಳಬೇಕು.

 

ಬೀಮ್ ಕೆಳಗೆ ಕೆಲಸ ಮಾಡುವುದು, ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಹಾಗೂ ಮಲಗುವುದನ್ನು ಮಾಡಿದರೆ, ಒತ್ತಡ ಹೆಚ್ಚಾಗುತ್ತದೆ. ಮಲಗಿದರೆ ನಿದ್ದೆಯೂ ಬರುವುದಿಲ್ಲ. ಯಾವ ಕೆಲಸವೂ ಪೂರ್ಣವಾಗುವುದಿಲ್ಲ. ಬೀಮ್ ಹೊತ್ತ ಭಾರವನ್ನು ನಾವು ತಲೆಯಮೇಲೆ ಭಾರತ ಹೊತ್ತಿಕೊಂಡಂತೆ ಆಗುತ್ತದೆ. ಹೀಗಾಗಿ ಆದಷ್ಟು ಬೀಮ್ ನಿಂದ ದೂರ ಇರುವುದು ಸೂಕ್ತ. ಇಲ್ಲವೇ ಬೀಮ್ ಅನ್ನು ಮುಚ್ಚುವುದು ಕೂಡ ಒಳ್ಳೆಯದು.

ಬೀಮ್ ಅನ್ನು ಕಾಣದಂತೆ ರೂಫ್ ಅನ್ನು ಕಟ್ಟಿ ಮುಚ್ಚುವುದು ಬಹಳ ಒಳ್ಳೆಯದು. ಇದರಿಂದ ಬೀಮ್ ಗೆ ಸಪೋರ್ಟ್ ಸಿಕ್ಕಂತಾಗುತ್ತದೆ. ಜೊತೆಗೆ ನೀವು ಅದರ ಕೆಳಗಿರುವುದರಿಂದ ಆಗುವ ಹೆಚ್ಚಿನ ಒತ್ತಡವನ್ನು ಕೂಡ ತಪ್ಪಿಸಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ಬೀಮ್ ಗಳು ಹಳ್ಳಿಯ ಮನೆಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ ಅಟ್ಟ ನಿರ್ಮಾಣ ಮಾಡುವಾಗ ಮರದ ಬೀಮ್ ಗಳನ್ನು ಬಳಸುತ್ತಾರೆ. ದೊಡ್ಡ ದೊಡ್ಡ ಕಟ್ಟಡಗಳಲ್ಲೂ ಈ ಬೀಮ್ ಗಳು ಕಾಣುತ್ತವೆ. ಆದರೆ, ಬೀಮ್ ಗಳನ್ನು ಮುಚ್ಚುವುದರಿಂದ ಹೆಚ್ಚುವ ಒತ್ತಡವನ್ನು ತಡೆಗಟ್ಟಬಹುದು.

Exit mobile version