Revenue Facts

ಬೆಡ್ ರೂಮ್ ನಲ್ಲಿ ವಾಡ್ ರೋಬ್ ಗಳನ್ನು ವಾಸ್ತು ಪ್ರಕಾರ ಹೇಗೆ ನಿರ್ಮಿಸಬೇಕು..?

ಬೆಂಗಳೂರು, ಆ. 28 : ಎಲ್ಲರೂ ವಾಡ್ರೋಬ್ ಗಳನ್ನು ತಮಗೆ ಬೇಕಾದ ದಿಕ್ಕುಗಳಲ್ಲಿ ಹಾಕಿಕೊಳ್ಳುತ್ತಾರೆ. ಪೂರ್ವ , ಉತ್ತರ ಅಂತ ಎಲ್ಲಾ ದಿಕ್ಕಿನಲ್ಲೂ ಅಳವಡಿಸಿಕೊಂಡಿರುತ್ತಾರೆ. ವಾರ್ಡ್ ರೋಬ್ ನ ಅವಶ್ಯಕತೆ ನಮಗೆ ಇದ್ದೇ ಇರುತ್ತದೆ. ಬಟ್ಟೆಗಳು ಸೇರಿದಂತೆ ಹಲವು ವಸ್ತುಗಳನ್ನು ಜೋಡಿಸಿ ಇಟ್ಟುಕೊಳ್ಳಲು ವಾಡ್ರೂಬ್ ಗಳ ಅಗತ್ಯವಿರುತ್ತದೆ. ಮನೆಯಲ್ಲಿ ಏನಿಲ್ಲ ಎಂದರೂ ವಾರ್ಡ್ ರೋಬ್ ಇರಲೇಬೇಕು. ಬಟ್ಟೆಗಳನ್ನು ಜೋಡಿಸಿಕೊಳ್ಳಲು ಅತ್ಯಗತ್ಯವಾಗಿ ವಾರ್ಡ್ ರೋಬ್ ಗಳ ಅವಶ್ಯಕತೆ ಇರುತ್ತದೆ.

ಹಿಂದಿನ ಕಾಲದಲ್ಲಿ ಸ್ಟೀಲ್, ಅಲುಮಿನಿಯಂ ಹಾಗೂ ಮರದ ವಾರ್ಡ್ ರೋಬ್ ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಬೀರುಗಳಲ್ಲಿ ಎಲ್ಲರೂ ಬಟ್ಟೆಗಳನ್ನು ಜೋಡಿಸಿಕೊಳ್ಳುತ್ತಿದ್ದರು. ಈಗ ಮಾರ್ಡನ್ ಯುಗದಲ್ಲಿ ಮನೆ ನಿರ್ಮಾಣ ಮಾಡುವಾಗಲೇ ವಾರ್ಡ್ ರೋಬ್ ಗಳನ್ನು ಜೋಡಿಸಲಾಗುತ್ತದೆ. ಬಟ್ಟೆಗಳಿಗಷ್ಟೇ ಅಲ್ಲದೇ, ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನೂ ಸ್ಟೋರ್ ಮಾಡಲು ಈಗ ವಾರ್ಡ್ ರೋಬ್ ಗಳನ್ನು ಇರಿಸಲಾಗುತ್ತದೆ. ಇದು ಮನೆಯ ಅಂದವನ್ನು ಕೂಡ ಹೆಚ್ಚಿಸುತ್ತದೆ.

ಇನ್ನು ರೂಮ್ ಗಳಲ್ಲಿ ಬಟ್ಟೆಗಳಿಗಾಗಿ ವಾರ್ಡ್ ರೋಬ್ ಗಳನ್ನು ಮನೆ ನಿರ್ಮಾಣದ ಸಮಯದಲ್ಲಿ ಅಳವಡಿಸಲಾಗುತ್ತದೆ. ಮರದ ವಾರ್ಡ್ ರೋಬ್ ಗಳನ್ನು ನಿರ್ಮಿಸುವಾಗ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಎಂಬುದನ್ನು ತಿಳಿಯೋಣ ಬನ್ನಿ. ಬೆಡ್ ರೂಮ್ ಗಳಲ್ಲಿ ವಾಡ್ರೂಬ್ ಅನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಟ್ಟುಕೊಳ್ಳುವುದು ಸೂಕ್ತ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಲ್ಲೂ ರೂಮಿನ ಗೋಡೆಗಳ ಅಳತೆ ಮಾಡಿದಾಗ ಯಾವ ದಿಕ್ಕಿನಲ್ಲಿ ಹೆಚ್ಚಿನ ಸ್ಥಳವಿರುತ್ತದೆ ಅಲ್ಲಿ ವಾರ್ಡ್ ರೋಬ್ ನಿರ್ಮಾಣ ಮಾಡುವುದು ಸೂಕ್ತ.

ಆದಷ್ಟು ಲೆಂತ್ ಯಾವ ಕಡೆ ಹೆಚ್ಚು ಇರುತ್ತದೋ ಅಲ್ಲೇ ವಾರ್ಡ್ ರೋಬ್ ಗಳನ್ನು ಅಳವಡಿಸುವುದರಿಂದ ರೂಮ್ ನಲ್ಲಿ ಹೆಚ್ಚಿನ ಜಾಗ ಉಳಿಯುತ್ತದೆ. ಇದರಿಂದ ರೂಮ್ ಬಹಳ ವಿಶಾಲವಾಗಿ ಕಾಣುತ್ತದೆ. ಇನ್ನು ಹಿಂದಿನ ಕಾಲದಲ್ಲಿ ಹಣ ಇಡಲು ಅಲಮೆರಾಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈಗ ವಾಡ್ರೋಬ್ ಗಳಲ್ಲೇ ಇಡುವುದರಿಂದ ಆದಷ್ಟು ದಕ್ಷಿಣ ದಿಕ್ಕಿನಲ್ಲಿ ಇದ್ದರೆ, ಉತ್ತರ ದಿಕ್ಕು ಕುಬೇರನ ಮೂಲೆಗೆ ನೋಡಿದಂತಾಗುತ್ತದೆ.

ಅನುಕೂಲವಾಗಲಿ ಎಂದು ಕೆಲವರು ಪೂರ್ವದಲ್ಲಿ ವಾರ್ಡ್ ರೋಬ್ ಗಳನ್ನು ಮಾಡಿಸುತ್ತಾರೆ. ಇದು ಸಮಸ್ಯೆಗೆ ಕಾರಣವಾಗುತ್ತದೆ. ಏಕೆಂದರೆ, ಪೂರ್ವದಲ್ಲಿ ಹೆಚ್ಚಿನ ಭಾರ ಇರಬಾರದು. ಮರದಲ್ಲಿ ತಯಾರಿಸುವ ವಾರ್ಡ್ ರೋಬ್ ತೂಕವಿರುತ್ತದೆ. ಇನ್ನು ಇದರ ಮೇಲೆ ಜಾಗ ಖಾಲಿ ಇರುತ್ತದೆ ಎಂದು ಸ್ಟೋರೇಜ್ ಗಾಗಿ ಸಜ್ಜೆಯನ್ನು ತಯಾರಿಸುತ್ತಾರೆ. ಅದಕ್ಕೂ ಬಾಗಿಲನ್ನು ಇಡುತ್ತಾರೆ. ಇದರಲ್ಲಿ ಭಾರವಾದ ವಸ್ತುಗಳನ್ನು ಇಡಲಾಗುತ್ತದೆ. ಹಾಗಾಗಿ ಇದನ್ನು ಪೂರ್ವ ಮತ್ತು ಉತ್ತರದಲ್ಲಿ ಇಡುವುದು ಸೂಕ್ತವಲ್ಲ. ಹಾಗಾಗಿ ಆದಷ್ಟು ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ವಾರ್ಡ್ ರೋಬ್ ಅನ್ನು ಮಾಡಿಸುವುದು ಸೂಕ್ತ.

Exit mobile version