Revenue Facts

ಬಹು ಮಹಡಿ ಕಟ್ಟಡಗಳಲ್ಲಿ ಟ್ರಾನ್ಸ್‌ ಫಾರ್ಮರ್‌, ಜನರೇಟರ್‌ ಗಳನ್ನು ಎಲ್ಲಿ ಇಡಬೇಕು..?

ಬಹು ಮಹಡಿ ಕಟ್ಟಡಗಳಲ್ಲಿ ಟ್ರಾನ್ಸ್‌ ಫಾರ್ಮರ್‌, ಜನರೇಟರ್‌ ಗಳನ್ನು ಎಲ್ಲಿ ಇಡಬೇಕು..?

Inverter in House According to Vastu

ಬೆಂಗಳೂರು, ಮೇ. 09 : ಬಹು ಮಹಡಿ ಕಟ್ಟಡಗಳಿಗೆ ಜನರೇಟರ್‌, ಟ್ರಾನ್ಸ್‌ ಫಾರ್ಮ್ಸ್‌, ಯುಪಿಎಸ್‌ ಗಳು ಬಹಳ ಅಗತ್ಯ ಇರುತ್ತದೆ. ಲಿಫ್ಟ್, ಎಸಿಗಳಿಗೆ ಪವರ್‌ ಸಪ್ಲೈ ಬೇಕಾಗುತ್ತದೆ. ಇದಕ್ಕಾಗಿಯಾದರೂ ಜನರೇಟರ್‌, ಟ್ರಾನ್ಸ್‌ ಫಾರ್ಮ್ಸ್‌ ಕಡ್ಡಾಯವಾಗಿ ಬೇಕಾಗುತ್ತದೆ. ಈಗ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಯುಪಿಎಸ್ ಅನ್ನು ಅಳವಡಿಸಿಕೊಳ್ಳುತ್ತಾರೆ. ಕರೆಂಟ್ ಹೋದರೂ ಕೂಡ ತಮಗೆ ಸಮಸ್ಯೆ ಆಗಬಾರದು ಎಂದು ಯುಪಿಎಸ್ ಅನ್ನು ಬಳಸುತ್ತಾರೆ. ಮೊದಲೆಲ್ಲಾ ಜನರೇಟರ್ ಗಳನ್ನು ಆಫಿಸ್ ಗಳಲ್ಲಿ ಬಳಸಲಾಗುತ್ತಿತ್ತು.

ಈಗ ಯುಪಿಎಸ್ ಬಳಕೆಗೆ ಬಂದಿದೆ. ಕಚೇರಿ ಕೆಲಸಗಳಿಗೆ ಸಮಸ್ಯೆ ಆಗಬಾರದು ಎಂದು ಯುಪಿಎಸ್ ಅನ್ನು ಬಳಕೆ ಮಾಡುತ್ತಿದ್ದರು. ಆದರೆ, ಈ ಎಲ್ಲರ ಮನೆಗಳಲ್ಲೂ ಯುಪಿಎಸ್ ಇರುತ್ತದೆ. ಕೋವಿಡ್ ಬಂದಾಗಿನಿಂದ ಎಲ್ಲರೂ ಮನೆಯಲ್ಲಿ ಕೆಲಸ ಮಾಡುವ ಸಲುವಾಗಿ ಯುಪಿಎಸ್ ಅನ್ನು ಅಳವಡಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ಎಲೆಕ್ಟ್ರಿಕಲ್ ಅಪ್ಲಯನ್ಸ್ ಗಳು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡುವುದು ಸೂಕ್ತ. ಸಾಮಾನ್ಯವಾಗಿ ಎಲ್ಲಾ ಬಗೆಯ ಎಲೆಕ್ಟ್ರಿಕ್ ಅಪ್ಲಾಯನ್ಸ್ ಗಳು ಕೂಡ ಆಗ್ನೇಯ ದಿಕ್ಕಿನಲ್ಲಿ ಬಂದರೇನೇ ಸೂಕ್ತ.

ಆಗ್ನೇಯ ಇಲ್ಲವೇ ವಾಯುವ್ಯ ದಿಕ್ಕಿನಲ್ಲಿ ಯುಪಿಎಸ್, ಜನರೇಟರ್‌, ಟ್ರಾನ್ಸ್‌ ಫಾರ್ಮ್ಸ್ ಅನ್ನು ಇಟ್ಟುಕೊಳ್ಳಬಹುದು. ಆದರೆ, ಯಾವ ದಿಕ್ಕಿನಲ್ಲೇ ಇಟ್ಟುಕೊಂಡರೂ ಮನೆಯ ಎಲ್ಲಾ ವೈರಿಂಗ್ ಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗುವಂತೆ ಇಟ್ಟುಕೊಳ್ಳಬೇಕು. ಇನ್ನು ಯುಪಿಎಸ್ ಅನ್ನು ಎಲ್ಲೆಂದರಲ್ಲಿ ಹಾಕಬಾರದು ಮೆಟ್ಟಿಲು ಕೆಳಗೆ ಹಾಕಬಹುದು ಎಂದೆಲ್ಲಾ ಹಾಕುವುದು ಒಳ್ಳೆಯದಲ್ಲ. ಆದಷ್ಟು ಗಾಳಿ ಆಡುವ ಕಡೆಗಳಲ್ಲಿ ಯುಪಿಎಸ್ ಹಾಕಿಕೊಳ್ಳುವುದು ಉತ್ತಮ.

ಆಗ್ನೇಯ ಹಾಗೂ ವಾಯುವ್ಯದಲ್ಲಿ ಮೆಟ್ಟಿಲುಗಳು ಇದ್ದರೆ ಅಲ್ಲಿ ಇಡಬಹುದು. ಆದಷ್ಟು ಯುಪಿಎಸ್, ಜನರೇಟರ್‌, ಟ್ರಾನ್ಸ್‌ ಫಾರ್ಮ್ ಬಿಸಿ ಆಗಲು ಅವಕಾಶ ನೀಡದಂತೆ ಒಳ್ಳೆಯ ಸ್ಥಳದಲ್ಲಿ ಇಡಬೇಕು. ಪವರ್ ಇರುವುದರಿಂದ ಅದೊಂದು ಎನರ್ಜಿಯನ್ನು ರಿಲೀಸ್ ಮಾಡುತ್ತದೆ. ಬೇರೆ ದಿಕ್ಕಿನಲ್ಲಿ ಹಾಕಿದರೆ, ಅಲ್ಲಿನ ಎನರ್ಜಿಯನ್ನು ಸುಟ್ಟು ಹಾಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಯುಪಿಎಸ್ ಅನ್ನು ಆದಷ್ಟು ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನಲ್ಲಿ ಇಡುವುದು ಬಹಳ ಒಳ್ಳೆಯದು.

Exit mobile version