Revenue Facts

ವಾಸ್ತುವಿನಲ್ಲಿ ಮೊದಲೇ ಕಟ್ಟಿರುವ ಮನೆಯನ್ನು ಖರೀದಿಸುವುದು ಒಳ್ಳೆಯದೇ..?

ವಾಸ್ತುವಿನಲ್ಲಿ ಮೊದಲೇ ಕಟ್ಟಿರುವ ಮನೆಯನ್ನು ಖರೀದಿಸುವುದು ಒಳ್ಳೆಯದೇ..?

ಬೆಂಗಳೂರು, ಮಾ. 24 : ಮನೆಯನ್ನು ಖರೀದಿಸುವಾಗ ಸಾಕಷ್ಟು ವಿಚಾರಗಳನ್ನು ನೋಡಬೇಕಾಗುತ್ತದೆ. ಅದರಲ್ಲಿ, ಕೆಲವರು ನಿವೇಶನಗಳನ್ನು ಖರೀದಿಸಿ, ವಾಸ್ತು ಪ್ರಕಾರ ನಿರ್ಮಾಣ ಮಾಡುತ್ತಾರೆ. ಇನ್ನೂ ಕೆಲವರು ನಿರ್ಮಾಣಗೊಂಡ ಮನೆಯನ್ನು ಖರೀದಿಸುತ್ತಾರೆ. ವಾಸ್ತು ಪ್ರಕಾರ ಇದೆರಡರಲ್ಲಿ ಯಾವುದು ಸುಲಭ ಎಂದು ತಿಳಿಯೋಣ ಬನ್ನಿ.

ಇನ್ನು ದೊಡ್ಡವರು ಮನೆ ಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು ಎಂದು ಹೇಳುದ್ದಾರೆ. ಯಾಕೆಂದರೆ ಇದೆರಡೂ ಕೆಲಸಗಳೂ ಸ್ವಲ್ಪ ಕಷ್ಟಕರವಾದ್ದೇ. ಮದುವೆ ಮಾಡಬೇಕು ಎಂದು ವಧು-ವರ ಅನ್ವೇಷಣೆ ಮಾಡಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಮುಗಿಸುವುದು ಒಂದು ಸವಾಲಾಗಿದೆ. ಇನ್ನು ಮತ್ತೊಂದು ಮನೆ ಕಟ್ಟುವುದು. ಮನೆಯನ್ನು ಕಟ್ಟುವಾಗ ಪ್ರತಿಯೊಂದು ವಿಚಾರದ ಬಗ್ಗೆಯೂ ಖುದ್ದು ಕಾಳಜಿ ವಹಿಸಬೇಕಾಗುತ್ತದೆ. ಮನೆಯನ್ನು ಕಟ್ಟಿ ಮುಗಿಸುವುದರೊಳಗೆ ಸುಸ್ತಾಗಿ ಹೋಗುತ್ತದೆ.

ಹೀಗಾಗಿಯೇ ಇದೆರಡೂ ಕೆಲಸಗಳು ಕಷ್ಟವಾಗಿದೆ. ಇನ್ನು ಈಗ ನಿರ್ಮಾಣ ಮಾಡಿರುವ ಮನೆಗಳೇ ಮಾರಟಕ್ಕೆ ಸಿಗುತ್ತವೆ. ಇಲ್ಲದಿದ್ದರೆ ಕಮಿಷನ್ ಕೊಟ್ಟರೆ, ಬಿಲ್ಡರ್ಸ್ ಗಳು ಮನೆಯನ್ನು ನಿರ್ಮಾಣ ಮಾಡುತ್ತಾರೆ. ಇನ್ನು ಮದುವೆ ಮಾಡಲು ಕೂಡ ಸಾಕಷ್ಟು ಇವೆಂಟ್ ಮ್ಯಾನೇಜ್ ಮೆಂಟ್ ಗಳಿವೆ. ಇನ್ನು ಮನೆಯನ್ನು ಕಟ್ಟುವುದಕ್ಕೆ ಸಾಕಷ್ಟು ಖರ್ಚುಗಳು ಆಗುತ್ತದೆ. ಇನ್ನು ಮನೆಯನ್ನು ಕಟ್ಟುವಾಗ ವಾಸ್ತು ಪ್ರಕಾರ ಅಳವಡಿಸಿಕೊಂಡು ಕಟ್ಟುವುದು ಬಹಳ ಮುಖ್ಯವಾಗುತ್ತದೆ.

ಮನೆಯನ್ನು ಖರೀದಿಸಲು, ವಾಸ್ತು ಪ್ರಕಾರವೇ ನಿರ್ಮಾಣ ಮಾಡಿದ್ದು, ಅದು ಮನೆಯನ್ನು ಖರೀದಿಸುವವರಿಗೆ ಆಗಿ ಬರುತ್ತದೆ ಎಂಬುದಾದರೆ, ಅದೂ ಕೂಡ ಒಳ್ಳೆಯದು. ಇಲ್ಲವೇ ನಿವೇಶನವನ್ನು ಖರೀದಿಸಿ ಅಲ್ಲಿ ವಾಸ್ತು ಪ್ರಕಾರ ತಮಗೆ ಬೇಕಾದಂತೆ ಕಟ್ಟಿಕೊಳ್ಳಬಹುದು. ಇದರಲ್ಲಿ ಯಾವುದು ಸರಿ ಎಂಬುದನ್ನು ಹೇಳುವುದು ಅಸಾಧ್ಯ. ಆದರೆ, ಮನೆಯನ್ನು ಖರೀದಿ ಮಾಡುವಾಗ ಆಗಲೀ ಅಥವಾ, ನಿರ್ಮಾಣ ಮಾಡುವಾಗ ಆಗಲೀ ಎರಡೂ ಸಂದರ್ಭದಲ್ಲಿ ವಾಸ್ತು ಬಗ್ಗೆ ಎಚ್ಚರ ವಹಿಸುವುದು ಬಹಳ ಮುಖ್ಯವಾಗುತ್ತದೆ.

Exit mobile version