Revenue Facts

ಮನೆಯಲ್ಲಿ ನೀಚಸ್ಥಾನವನ್ನು ಗುರುತಿಸುವುದು ಹೇಗೆ..?

ಮನೆಯಲ್ಲಿ ನೀಚಸ್ಥಾನವನ್ನು ಗುರುತಿಸುವುದು ಹೇಗೆ..?

ಬೆಂಗಳೂರು, ಮೇ. 25: ಸೋಲಾರ್ ಹಾಗೂ ಮ್ಯಾಗ್ನೆಟಿಕ್ ಎನರ್ಜಿಯಿಂದಾಗಿ ಈ ಉಚ್ಚಸ್ಥಾನ ಹಾಗೂ ನೀಚಸ್ಥಾನಗಳನ್ನು ಗುರುತಿಸಲಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕನ್ನ ಉಚ್ಛಸ್ಥಾನ ಎಂದು ಹೇಳುತ್ತೀವಿ, ನೈರುತ್ಯದಲ್ಲಿ ಅಂದರೆ ಪಶ್ಚಿಮ ನೈರುತ್ಯ ಉಚ್ಚಸ್ಥಾನ ಎಂದು ಹೇಳಲಾಗಿದೆ. ದಕ್ಷಿಣ ನೈರುತ್ಯ ನೀಚಸ್ಥಾನ, ಆಗ್ನೇಯದಲ್ಲಿ ದಕ್ಷಿಣ ಉಚ್ಛಸ್ಥಾನವಾದರೆ ಪೂರ್ವ ಆಗ್ನೇಯ ನೀಚಸ್ಥಾನವಾಗುತ್ತದೆ. ವಾಯುವ್ಯದಲ್ಲಿ ಪಶ್ಚಿಮ ವಾಯುವ್ಯ ಉಚ್ಛಸ್ಥಾನವಾದರೆ, ಉತ್ತರ ವಾಯುವ್ಯ ನೀಚಸ್ಥಾನವಾಗಿದೆ.

ಪಶ್ಚಿಮ ನೈರುತ್ಯ, ದಕ್ಷಿಣ ನೈರುತ್ಯ, ಪೂರ್ವ ಆಗ್ನೇಯ, ಉತ್ತರ ವಾಯುವ್ಯವನ್ನು ಉಚ್ಚಸ್ಥಾನ ಎಂದು ಹೇಳಲಾಗಿದೆ. ಇನ್ನು ವಾಸ್ತು ಹಾಗೂ ಜ್ಯೋತಿಷ್ಯಕ್ಕೂ ಸಂಬಂಧವಿದೆ. ಜ್ಯೋತಿಷ್ಯದಲ್ಲಿ ಚಕ್ರವನ್ನು ಕಾಲಗಣನೆ ಮಾತ್ರವಲ್ಲದೇ, ಮನುಷ್ಯನ ಮೂರು ಕಾಲಗಳು ಎಂದು ಹೇಳಲಾಗಿದೆ. ಇದೇ ರೀತಿಯಲ್ಲಿ ವಾಸ್ತುವಿನಲ್ಲೂ ಉಚ್ಚಸ್ಥಾನಗಳು ನೀಚಸ್ಥಾನಗಳನ್ನು ಹೋಲಿಸಲಾಗಿದೆ. ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಗ್ರಹ ಉಚ್ಚಸ್ಥಾನದಲ್ಲಿ ನಿಲ್ಲುತ್ತದೆ.

ವೃಷಭ ರಾಶಿ ಉತ್ತರ ದಿಕ್ಕಿನಲ್ಲಿ ಗುರು ಉಚ್ಚಸ್ಥಾನದಲ್ಲಿದ್ದು, ಅಥವಾ ಕರ್ಕಾಟಕ ರಾಶಿ. ಪಶ್ಚಿಮ ದಿಕ್ಕಿನಲ್ಲಿ ತುಲಾ ರಾಶಿಗೆ ಶನಿ ಗ್ರಹವು ಉಚ್ಚಸ್ಥಾನದಲ್ಲಿರುತ್ತದೆ. ಮಕರ ರಾಶೀಯಲ್ಲಿ ದಕ್ಷಿಣ ದಿಕ್ಕಿಗೆ ಕುಜ ಗ್ರಹ ಉಚ್ಚಸ್ಥಾನದಲ್ಲಿದೆ. ಆಗ್ನೇಯ ದಿಕ್ಕಿನಲ್ಲಿ ಮೀನ ರಾಶಿಗೆ ಶುಕ್ರ ಗ್ರಹವು ಉಚ್ಚಸ್ಥಾನದಲ್ಲಿದ್ದು, ವಾಯುವ್ಯ ದಿಕ್ಕಿನಲ್ಲಿ ಕನ್ಯಾ ರಾಶಿಯು ಬುಧ ಗ್ರಹ ಉಚ್ಚಸ್ಥಾನದಲ್ಲಿದೆ. ಗುರುವನ್ನು ಜೀವಕಾರಕ ಎಂದು ಹೇಳಿ ಇವೆಲ್ಲಾ ಶುಭ ಗ್ರಹಗಳಾಗಿವೆ. ಕೆಲ ರಾಶಿಗಳಲ್ಲಿ ಗ್ರಹಗಳು ನೀಚಸ್ಥಾನಕ್ಕೆ ಬಂದು ನಿಲ್ಲುತ್ತವೆ.

ಹೀಗಿರುವಾಗ ನೀಚ ಹಾಗೂ ಉಚ್ಚ ಸ್ಥಾನಗಳಲ್ಲಿ ನಿಲ್ಲುವ ಗ್ರಹಗಳನ್ನು ಸಮನಾಗಿ ಇಡಬೇಕು. ಎರಡೂ ಗ್ರಹಗಳು ಒಂದಕ್ಕೊಂದು ಜೊತೆಗೆ ನಿಲ್ಲುತ್ತವೆ. ಹಾಗಾಗಿ ವಾಸ್ತುವಿನಲ್ಲಿ ಕೂಡ ಯಾವ ಭಾಗಗಳು ಹೇಗಿರಬೇಕು ಎಂಬುದನ್ನು ಹೇಳುತ್ತೇವೆ. ಹೀಗಾಗಿ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಚ್ಚ ಹಾಗೂ ನೀಚ ಸ್ಥಾನಗಳನ್ನು ಸಮನಾಗಿ ಅಳವಡಿಸಿಕೊಳ್ಳಲಾಗಿದೆ.

Exit mobile version