Revenue Facts

ವಾಸ್ತು ಪ್ರಕಾರ ಮನೆಯಲ್ಲಿ ಪೋರ್ಟಿಗೊ ಅಳವಡಿಸಿಕೊಳ್ಳುವುದು ಹೇಗೆ..?

ವಾಸ್ತು ಪ್ರಕಾರ ಮನೆಯಲ್ಲಿ ಪೋರ್ಟಿಗೊ ಅಳವಡಿಸಿಕೊಳ್ಳುವುದು ಹೇಗೆ..?

ಬೆಂಗಳೂರು, ಮಾ. 27 : ಪೋರ್ಟಿಗೊ ಅನ್ನು ಈಗ ಎಲ್ಲರ ಮನೆಯಲ್ಲೂ ಅಳವಡಿಸಿಕೊಳ್ಳಲು ಬಯಸುತ್ತಾರೆ. ವಾಹನಗಳನ್ನು ನಿಲುಗಡೆ ಮಾಡಿಸಿಕೊಳ್ಳುವ ಸಲುವಾಗಿ ಪೋರ್ಟಿಗೊ ಅನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನು ಪೋರ್ಟಿಗೊ ಸಾಮಾನ್ಯವಾಗಿ ಮನೆಯ ಬಅಗಿಲಿನ ಎದುರುಗಡೆಯೇ ಬರಬೇಕು. ಎಲ್ಲೆಂದರಲ್ಲಿ ಪೋರ್ಟಿಗೊ ಅನ್ನು ಇಡಲು ಸಾಧ್ಯವಿಲ್ಲ. ಆದಷ್ಟು ಮುಖ್ಯದ್ವಾರದ ಎದುರುಗಡೆಯೇ ಪೋರ್ಟಿಗೋ ಅನ್ನು ಅಳವಡಿಸಬೇಕಾಗುತ್ತದೆ. ಪದ ವಾಸ್ತು ಪ್ರಕಾರ ಹೇಳುವುದಾದರೆ, ಪೂರ್ವದಲ್ಲಿ ನಾಲ್ಕನೇ ಪಾದದಲ್ಲಿ ಬಾಗಿಲು ಬಂದರೆ, ಉಳಿದ ಜಾಗದಲ್ಲಿ ಲಾನ್‌ ಮಾಡಿಕೊಂಡು ಪೋರ್ಟಿಗೊ ಅನ್ನು ಅಳವಡಿಸಬೇಕಾಗುತ್ತದೆ.

ಅದೇ ರೀತಿಯಲ್ಲೇ ನಾವು ಬೇರೆ ಕಡೆಯೂ ಕೂಡ ಆದಷ್ಟು ಮಧ್ಯದಲ್ಲಿ ಪೊರ್ಟಿಗೋವನ್ನು ಹಾಕದೇ, ದಕ್ಷಿಣ ಆಗ್ನೇಯ, ಈಶಾನ್ಯ, ವಾಯುವ್ಯದಲ್ಲಿ ಪೊರ್ಟಿಗೋ ಅನ್ನು ಅಳವಡಿಸಿಕೊಳ್ಳಬಹುದು. ಪಶ್ಚಿಮ, ದಕ್ಷಿಣ ಹಾಗೂ ನೈರುತ್ಯದ ಮಧ್ಯ ಭಾಗದಲ್ಲಿ ಪೋರ್ಟಿಗೋ ಅನ್ನು ಹಾಕುವುದು ಶುಭವಲ್ಲ. ಅದೇ ರೀತಿಯಲ್ಲಿ ಉತ್ತರದಲ್ಲಿ ಮಧ್ಯದಲ್ಲಿ ಪೋರ್ಟಿಗೋ ಅನ್ನು ಅಳವಡಿಸಿ, ಎರಡೂ ಕಡೆಯ ಜಾಗವನ್ನು ಖಾಲಿ ಬಿಡುವುದು ಶುಭ ಎಂದು ಹೇಳಲಾಗಿದೆ. ಉತ್ತರದಲ್ಲಿ ಮಧ್ಯದಲ್ಲಿ ಹಾಕಿಕೊಳ್ಳುವುದಕ್ಕಿಂತ, ಈಶಾನ್ಯದಲ್ಲಿ ಪೋರ್ಟಿಗೊ ಅನ್ನು ಹಾಕಿಕೊಂಡರೆ, ಆಗ ಉತ್ತರದಲ್ಲಿ ಸ್ಟೇರ್‌ ಕೇಸ್‌ ನಲ್ಲೂ ಹಾಕಿಕೊಳ್ಳಬಹುದು.

ಮನೆಯಲ್ಲಿ ಪೋರ್ಟಿಕೊ ಅಳವಡಿಸಿಕೊಳ್ಳುವುದಾದರೆ ಹೇಗಿರಬೇಕು ?

ಪೋರ್ಟಿಗೋ ಅನ್ನು ಬಿಲ್ಡಿಂಗ್‌ ಬೌಂಡರಿಯಲ್ಲೇ ಅಳವಡಿಸಿಕೊಳ್ಳುವುದು ಬಹಳ ಉತ್ತಮ. ಇನ್ನು ದಕ್ಷಿಣ ಆಗ್ನೇಯ, ಪಶ್ಚಿಮ ವಾಯುವ್ಯದಲ್ಲಿ ಪೋರ್ಟಿಗೋ ಅನ್ನು ಮುಂದಕ್ಕೆ ಹಾಕಿ ಸಮಸ್ಯೆ ಮಾಡಿಕೊಳ್ಳುವುದಕ್ಕಿಂತ ಗ್ರಿಲ್‌ ಗಳನ್ನು ಹಾಕಿ ಸಮಸ್ಯೆ ಅನ್ನು ಬಗೆ ಹರಿಸಿಕೊಳ್ಳಬಹುದು. ಇನ್ನು ಉತ್ತಮ ಸ್ಥಳ ಎಂದು ಬಂದಾಗ ಅಗತ್ಯವಾಗಿ ಉಚ್ಛಸ್ಥಾನ ಅಥವಾ ಈಶಾನ್ಯ ಒಳ್ಳೆಯದು.

ಇನ್ನು ಓಪನ್‌ ಪೋರ್ಟಿಗೊ ಹಾಗೂ ಮುಚ್ಚಿರುವಂತಹ ಪೋರ್ಟಿಗೊ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಓಪನ್‌ ಪೋರ್ಟಿಗೊ ಎಂದು ಬಂದಾಗ, ಅದು ನಮಗೆ ಮೂಲೆಗಳಲ್ಲಿ ಕಡಿತವನ್ನು ಕೊಡುವಂತಹ ಚಾನ್ಸ್‌ ಇರುತ್ತದೆ. ಹಾಗಾಗಿ ಯಾವುದಾದರೂ ಒಂದು ಕಡೆ ಕಡಿತಗೊಳಿಸದಂತೆ ಹಾಕಬೇಕಾಗುತ್ತದೆ. ಹಾಗಾಗಿ ಗ್ರಿಲ್‌ ಅನ್ನು ಅಳವಡಿಸಿ ಬೌಂಡರಿಯನ್ನು ಸ್ಕ್ವಯರ್‌ ಅಥವಾ ರೆಕ್ಟ್‌ಯಾಂಗ್ಯುಲರ್‌ ನಲ್ಲೇ ನಿರ್ಮಾಣ ಮಾಡುವುದರಿಂದ ಶುಭ ಫಲಗಳು ಇರುತ್ತವೆ.

Exit mobile version