Revenue Facts

ಬಿಬಿಎಂಪಿಯ 223 ಕೋಟಿ ವಾಹನ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಎಎಪಿ

ಬಿಬಿಎಂಪಿಯ 223 ಕೋಟಿ ವಾಹನ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಎಎಪಿ

ಬೆಂಗಳೂರು, ಏ. 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಾಹನ ವಿತರಣೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಮ್‌ ಆದ್ಮಿ ಪಕ್ಷ ಆರೋಪ ಮಾಡಿದೆ. ಬಿಬಿಎಂಪಿಯಲ್ಲಿ ವಾಹನ ವಿತರಣೆ ಯೋಜನೆಯಲ್ಲಿ ಬರೋಬ್ಬರಿ 223 ಕೋಟಿ ರೂಪಾಯಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

ಬಿಬಿಎಂಪಿಯ 2017-18ರಿಂದ 166 ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರಿಗೆ ಬಿಬಿಎಂಪಿ ವಾಹನಗಳನ್ನು ಪೂರೈಸುವ ಬಗ್ಗೆ ಆದೇಶ ಹೊರಡಿಸಿದೆ. ಇದರಲ್ಲಿ ಇನ್ನೂ ಶೇಕಡಾ 90ರಷ್ಟು ಜನರಿಗೆ ವಾಹನಗಳನ್ನು ವಿತರಣೆ ಮಾಡಿಲ್ಲ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಆರೋಪ ಮಾಡಿದ್ದಾರೆ. ಇನ್ನೂ ವಾಹನಗಳನ್ನು ವಿತರಣೆ ಮಾಡಿಲ್ಲವೆಂದರೆ ಹಣ ಎಲ್ಲಿಗೆ ಹೋಯ್ತು. ಈ ಬಗ್ಗೆ ಸಮಗ್ರ ತನಿಯಾಗಬೇಕು ಎಂದಿದ್ದಾರೆ.

ಈ ವಾಹನ ವಿತರಣೆ ಹಗರಣ ಸಂಬಂಧ ಚುನಾವಣಾ ಆಯೋಗ ನಿಗಾ ವಹಿಸಬೇಕು. ವಾಹನ ವಿತರಣೆ ಸಂಬಂಧ ಅಧಿಕಾರಿಗಳು ಮಂಜೂರು ಮಾಡಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ, ಈ ಹಣ ಏನಾಯಿತು? ಲೆಕ್ಕಪತ್ರ ಇಲಾಖೆ ಬಿಲ್‌ಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದೆ. ಈ ಯಾವುದರ ಬಗ್ಗೆಯೂ ಉತ್ತರ ಸಿಕ್ಕಿಲ್ಲ. ಹಾಗಾಗಿ ಬಿಬಿಎಂಪಿ ವಿರುದ್ಧ ತನಿಖೆಯಾಗಬೇಕು ಎಂದು ಹೇಳಿದರು.

ಬಿಬಿಎಂಪಿ ಆದೇಶದಂತೆ 2017-18ನೇ ಸಾಲಿನಿಂದ 166 ಹುದ್ದೆಗಳನ್ನು ಹೊಂದಿರುವ ಎಲ್ಲರಿಗೂ ವಾಹನಗಳನ್ನು ಬಿಬಿಎಂಪಿ ನೀಡಿದೆ. ಆದರೆ ಇದರಲ್ಲಿ ಶೇ 90ರಷ್ಟು ಜನರಿಗೆ ವಾಹನ ವಿತರಣೆಯಾಗಿಲ್ಲ. ಈ ಯೋಜನೆಯು ರೂ.223 ಕೋಟಿ ಮೌಲ್ಯದ್ದಾಗಿದೆ ಮತ್ತು ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತಿದೆ ಎಂಬುದು ತನಿಖೆಯ ವಿಷಯವಾಗಿದೆ.

Exit mobile version