ಬೆಂಗಳೂರು;ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ 5KG ಅಕ್ಕಿಯನ್ನು ಈ ಬಾರಿಯೂ ರಾಜ್ಯ ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿಲ್ಲ. ಬದಲಿಗೆ ಹಿಂದಿನಂತೆ KGಗೆ 734 ನಂತೆ ಒಟ್ಟು 1170 ಗಳನ್ನು ಖಾತೆಗೆ ಸಂದಾಯ ಮಾಡಲು ನಿರ್ಧರಿಸಿದೆ. ಸೆಪ್ಟೆಂಬರ್ ತಿಂಗಳ ಹಣವನ್ನು ಈಗಾಗಲೇ ಖಾತೆಗೆ ಹಾಕಲಾಗಿದ್ದು, ಬೆಳಗಾವಿ, ಬೆಂಗಳೂರು ಗ್ರಾ, ಬೆಂಗಳೂರು ನ. ಚಾಮರಾಜನಗರ, ಚಿತ್ರದುರ್ಗ, ದ. ಕನ್ನಡ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ಉ. ಕನ್ನಡ ಜಿಲ್ಲೆಯಲ್ಲಿ DBT ಮಾಡಲಾಗಿದೆ,ಸೆಪ್ಟೆಂಬರ್ ತಿಂಗಳ ಹೆಚ್ಚುವರಿ ಅಕ್ಕಿ ಬದಲಿಗೆ ಇದುವರೆಗೆ 14 ಜಿಲ್ಲೆಗಳ 41.23 ಲಕ್ಷ ಪಡಿತರ ಚೀಟಿದಾರರಿಗೆ 240 ಕೋಟಿ ರೂಪಾಯಿ ಪಾವತಿಸಲಾಗಿದೆ.ಡಿಬಿಟಿ ಮೂಲಕ ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ.ಗೃಹಲಕ್ಷ್ಮಿ, ಅನ್ನ ಭಾಗ್ಯ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಹಣ ಜಮೆ ಆಗುವಲ್ಲಿ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ನಲ್ಲಿ (Ration Card) ಫಲಾನುಭವಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮಾಡಲು ಅ.5ರಿಂದ ಅವಕಾಶ ನೀಡಲಾಗಿದೆ.
ಬಿಪಿಎಲ್ ರೇಷನ್ ಕಾರ್ಡ್ದಾರರ ಖಾತೆಗೆ ಈ ತಿಂಗಳೂ 5 ಕೆ.ಜಿ. ಅಕ್ಕಿ ಬದಲು ಹಣ ಜಮಾ
