ಬೆಂಗಳೂರು;BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ B.S.ಯಡಿಯೂರಪ್ಪ ವಿರುದ್ಧ ಹೊಸ ಬಾಂಬ್ ಸ್ಫೋಟಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿ, ಕೋವಿಡ್ ಮೊದಲನೇ ಅಲೆಯಲ್ಲಿ BSY ಸಿಎಂ ಇದ್ದಾಗ ₹40,000 ಕೋಟಿಗೂ ಹೆಚ್ಚು ಅವ್ಯವಹಹ್ನ ನಡೆಸಿದ್ದು, ಪ್ರತಿಯೊಬ್ಬ ರೋಗಿಗೂ ₹8 ರಿಂದ ₹10 ಲಕ್ಷ ಬಿಲ್ ಮಾಡಿದ್ದಾರೆ. ಅದು ನಮ್ಮ ಸರ್ಕಾರವಿದ್ದರೇನು? ಕಳ್ಳರು ಕಳ್ಳರೇ ಅಲ್ಲವಾ? ಎಂದು ಸಿಡಿದೆದ್ದಿದ್ದಾರೆ. ₹45 ಮಾಸ್ಕ್ ಗೆ ₹485 ನಿಗದಿಪಡಿಸಿ, ರಾಜ್ಯವನ್ನು ಲೂಟಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಸಿದ್ದಪಡಿಸಿದ್ರಿ. ಇದಕ್ಕೆ 10 ಸಾವಿರ ಬೆಡ್ ಬಾಡಿಗೆ ಪಡೆದಿದರು. ಆ ಹಣದಲ್ಲೇ ಬೆಡ್ ಗಳನ್ನು ಖರೀದಿ ಮಾಡಿದ್ದರೆ ಉಳಿಯುತ್ತಿತ್ತು. ನನಗೆ ಕೊರೊನಾ ಪಾಸಿಟಿವ್ ಆದಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5 ಲಕ್ಷ 80 ಸಾವಿರ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕೆಂದು ವಿಧಾನಸೌಧದಲ್ಲಿ ಮಾತನಾಡಿದ್ದೆ ಎಂದು ತಿಳಿಸಿದರು.ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ. ಕಲ್ಲಿದ್ದಲು ಹಗರಣ 2ಜಿ ಹಗರಣ ಆಗಿವೆ.