Revenue Facts

40 ಬಾರಿ ಸಂಚಾರ ನಿಯಮ ಉಲ್ಲಂಘನೆ; ‍12 ಸಾವಿರ ದಂಡ

40 ಬಾರಿ ಸಂಚಾರ ನಿಯಮ ಉಲ್ಲಂಘನೆ; ‍12 ಸಾವಿರ ದಂಡ

#40 # traffic # violations # 12 thousand # fine

ಬೆಂಗಳೂರು;ಸಂಚಾರ ನಿಯಮಗಳನ್ನು 40 ಬಾರಿ ಉಲ್ಲಂಘಿಸಿದ್ದ ಬೈಕ್(Bike ) ಸವಾರರೊಬ್ಬರಿಗೆ ಪೊಲೀಸರು 12 ಸಾವಿರ ದಂಡ(Fine) ವಿಧಿಸಿದ್ದಾರೆ.ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಹೊರಟಿದ್ದ ಬೈಕ್ ಸವಾರರೊಬ್ಬರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.ವಾಹನಗಳ ಮೇಲೆ ದಾಖಲಾಗಿದ್ದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಬೈಕ್ ಮೇಲೆ 12 ಸಾವಿರ ದಂಡವಿರುವುದು ಗೊತ್ತಾಗಿತ್ತು. ಸವಾರನಿಗೆ ರಶೀದಿ ನೀಡಿದ್ದ ಪೊಲೀಸರು,ದಂಡ ಸಂಗ್ರಹಿಸಿದ್ದಾರೆ.ಆತನ ವಾಹನದ ಮಾಹಿತಿ ನೋಡಿದಾಗ 40 ಪ್ರಕರಣಗಳಲ್ಲಿ ಆತ ದಂಡ ಪಾವತಿ ಮಾಡದೇ ಇರುವುದು ಕಂಡು ಬಂದಿತು. ಆನಂತರ ಆತನಿಂದ 12000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಲಘಟ್ಟಪುರ ಸಂಚಾರ ಪೊಲೀಸರು ತಿಳಿಸಿದ್ದಾರೆ.ಆ ಫೋಟೋವಂತೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಶೇರ್‌ ಆಗಿದೆ. ಜತೆಗೆ ಬಹಳಷ್ಟು ಜನ ಅದಕ್ಕೆ ಭಿನ್ನ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ.ಪದೇ ಪದೇ ನಿಯಮ ಉಲ್ಲಂಘನೆ ಮಾಡುವವರು ವಾಹನ ಚಲಾವಣೆ ಪತ್ರ( DL) ರದ್ದುಪಡಿಸಬೇಕು. ಈ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಪಾಠವಾಗಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಈಗಾಗಲೇ ತಂತ್ರಜ್ಞಾನ(Technology) ಆಧರಿತ ಸೇವೆಯನ್ನು ಬಲಪಡಿಸಿದ್ದಾರೆ. ಅದರಲ್ಲೂ ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ( ITMS) ಕೂಡ ಜಾರಿಯಲ್ಲಿದೆ. ಸಂಚಾರ ನಿಯಮ ಉಲ್ಲಂಘಿಸುವವರನ್ನು ಈ ವ್ಯವಸ್ಥೆ ಮೂಲಕವೇ ಪತ್ತೆ ಮಾಡಿ ಅವರಿಗೆ ದಂಡದ ಪತ್ರ ಕಳುಹಿಸಲಾಗುತ್ತದೆ.

Exit mobile version