Revenue Facts

ರಾಜ್ಯಕ್ಕೆ324 ಕೋಟಿ ರೂ. ಬರ ಪರಿಹಾರ ಬಿಡುಗಡೆ;ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ

ರಾಜ್ಯಕ್ಕೆ324 ಕೋಟಿ ರೂ. ಬರ ಪರಿಹಾರ ಬಿಡುಗಡೆ;ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ

#324 crores #state #Release # drought relief #how much #drought relief # which district

ಬೆಂಗಳೂರು;ಬರ ಸಂಕಷ್ಟದಲ್ಲಿದ್ದ ರೈತರಿಗೆ(Farmers) ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರ 324 ಕೋಟಿ ರೂ.ಬರ ಪರಿಹಾರ ಹಣ(Drought relief fund) ಬಿಡುಗಡೆ ಮಾಡಿದೆ.324 ಕೋಟಿ ರೂ. ಬರ ಪರಿಹಾರವನ್ನು ಎಸ್ ಡಿ ಆರ್ ಎಫ್(SDRF) ಅಡಿಯಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ.ಹೊಲ ಗದ್ದೆಗಳಿಗೆ ನೀರು ಇಲ್ಲದೇ ಬೆಳೆಗಳು ಒಣಗಿ ನಿಂತಿದೆ. ಮಳೆಯಾಗದಿರುವ ಹಿನ್ನೆಲೆ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ,ಬರ ಪೀಡಿತ ತಾಲೂಕುಗಳಿಗೆ(For drought prone taluks) ಇತ್ತೀಚೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆ ಹಾಗೂ ಬೆಳೆ ಸಮೀಕ್ಷೆಯನ್ನು ಪರಿಶೀಲನೆ ನಡೆಸಿತ್ತು.ಇದೀಗ ರಾಜ್ಯ ಸರ್ಕಾರ ಬೆಳೆ ಪರಿಹಾರಕ್ಕೆ ಅನುದಾನ ರಿಲೀಸ್ ಮಾಡಿದ್ದು, ಬೆಳೆ ಕಳೆದುಕೊಂಡು ಕಂಗಾಲಾಗಿರುವ ಅರ್ಹ ರೈತರಿಗೆ ಸರ್ಕಾರದ ಈ ಬರ ಪರಿಹಾರ ಸಹಾಯವಾಗಲಿದೆ.ರಾಜ್ಯದಲ್ಲಿ ಮಳೆಯ ಕೊರತೆ ಕಾರಣ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿತ್ತು. ತದನಂತರ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿತ್ತು.ಇತ್ತೀಚೆಗೆ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಪ್ರತಿಯೊಂದು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆ ಹಾಗೂ ಬೆಳೆ ಸಮೀಕ್ಷೆಯನ್ನು ಪರಿಶೀಲನೆ ನಡೆಸಿತ್ತು.

ಯಾವ ಜಿಲ್ಲೆಗೆ ಎಷ್ಟು ಅನುದಾನ

ಬೆಂಗಳೂರು ನಗರ- 7.50 ಕೋಟಿ,ಬೆಂಗಳೂರು ಗ್ರಾಮಾಂತರ- 6 ಕೋಟಿ,ರಾಮನಗರ-7.50 ಕೋಟಿ,ಕೋಲಾರ – 9 ಕೋಟಿ,ಚಿಕ್ಕಬಳ್ಳಾಪುರ- 9 ಕೋಟಿ,ತುಮಕೂರು-15 ಕೋಟಿ,ಚಿತ್ರದುರ್ಗ- 9 ಕೋಟಿ,ದಾವಣಗೆರೆ- 9 ಕೋಟಿ,ಚಾಮರಾಜನಗರ-7.50 ಕೋಟಿ,ಮೈಸೂರು – 13.50 ಕೋಟಿ,ಮಂಡ್ಯ- 10.50 ಕೋಟಿ,ಬಳ್ಳಾರಿ- 7.50 ಕೋಟಿ,ಕೊಪ್ಪಳ- 10.50 ಕೋಟಿ,ರಾಯಚೂರು- 9 ಕೋಟಿ,ಕಲಬುರ್ಗಿ- 16.50 ಕೋಟಿ,ಬೀದರ್- 4.50 ಕೋಟಿ,ಬೆಳಗಾವಿ- 22.50 ಕೋಟಿ,ಬಾಗಲಕೋಟೆ- 13.50 ಕೋಟಿ.
ವಿಜಯಪುರ- 18 ಕೋಟಿ,ಗದಗ-10.50 ಕೋಟಿ,ಹಾವೇರಿ-12 ಕೋಟಿ,ಧಾರವಾಡ-12 ಕೋಟಿ,ಶಿವಮೊಗ್ಗ-10.50 ಕೋಟಿ,ಹಾಸನ- 12 ಕೋಟಿ,ಚಿಕ್ಕಮಗಳೂರು-12 ಕೋಟಿ,ಕೊಡಗು-7.50 ಕೋಟಿ,ದಕ್ಷಿಣ ಕನ್ನಡ- 3 ಕೋಟಿ,ಉಡುಪಿ- 4.50 ಕೋಟಿ,ಉತ್ತರ ಕನ್ನಡ-16.50 ಕೋಟಿ,ಯಾದಗಿರಿ-9 ಕೋಟಿ,ವಿಜಯನಗರ-9 ಕೋಟಿ.

 

Exit mobile version