Revenue Facts

30 ದಿನದೊಳಗೆ ಇ-ಖಾತಾ ವಿಲೇವಾರಿ ಮಾಡುವಂತೆ ಹೈ ಕೋರ್ಟ್‌ ಆದೇಶ

30 ದಿನದೊಳಗೆ ಇ-ಖಾತಾ ವಿಲೇವಾರಿ ಮಾಡುವಂತೆ ಹೈ ಕೋರ್ಟ್‌ ಆದೇಶ

e-khata#high court#khata approval#government#high court notice#RDPR

ಬೆಂಗಳೂರು, ಮಾ. 27 : ಹಸ್ತ ಚಾಲಿತ ಖಾತಾ ನೀಡಿದ 30 ದಿನದೊಳಗೆ ಇ-ಖಾತಾ ನೀಡುವಂತೆ ಹೈಕೋರ್ಟ್‌ ಹೇಳಿದೆ. ಹಾಗೊಂದು ವೇಳೆ ತಡವಾದರೆ, ಸರ್ಕಾರ ಜಾರಿಗೆ ತಂದಿರುವ ಇ-ಖಾತಾದ ಉದ್ದೇಶ ಈಡೇರುವುದಿಲ್ಲ ಎಂದು ಹೈ ಕೋರ್ಟ್‌ ಬೇಸರವನ್ನು ವ್ಯಕ್ತ ಪಡಿಸಿದೆ. ಇ-ಖಾತಾಗೆ ಅರ್ಜಿ ಸಲ್ಲಿಸಿದ ಕೂಡಲೇ ಸಕಾಲದಲ್ಲಿ ವಿಲೇವಾರಿ ಮಾಡಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

-ಖಾತಾ ಅರ್ಜಿಯನ್ನು ಪರಿಗಣಿಸಿಲ್ಲವೆಂದು ರೇಣುಕಾ ಮನ್‌ಘನಾನಿ ಅವರು ಹೈ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯಿತಿ ಇನ್ನು ಈ-ಖಾತಾ ನೀಡಿಲ್ಲ. 2019ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಇ-ಖಾತಾ ವಿಲೇವಾರಿಗೆ ಅಳವಡಿಸಿರುವ ಹೊಸ ವಿಧಾನದ ಬಗ್ಗೆ ಏಪ್ರಿಲ್‌ 6 ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವೆಬ್‌ ಸೈಟ್‌ ನಲ್ಲಿ ಇ-ಖಾತಾಗಳ ಮಾಹಿತಿ ನೀಡುವಂತೆಯೂ, ಗ್ರಾಮ ಪಂಚಾಯಿತಿಗಳಡಿ ಸಲ್ಲಿಕೆಯಾಗುವ ಪ್ರತಿಯೊಂದು ಇ-ಖಾತಾ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ.

ವೆಬ್‌ಸೈಟ್‌ನಲ್ಲಿಅರ್ಜಿದಾರರು ಹೆಸರು, ಆಸ್ತಿಯ ವಿವರಗಳು, ಇ-ಖಾತಾ ಅರ್ಜಿ ಸಲ್ಲಿಸಿದ ದಿನ ಮತ್ತು ಇ-ಖಾತಾ ವಿತರಿಸಿದ ದಿನಾಂಕಗಳನ್ನು ಉಲ್ಲೇಖ ಮಾಡಬೇಕು. ಇ-ಸುಗಮ ನಿಯಮದ ಪ್ರಕಾರ ಇ-ಖಾತೆಗೆ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಒಂದು ವೇಳೆ 30 ದಿನಕ್ಕೂ ವಿಳಂಬವಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ವೆಬ್‌ ಸೈಟ್‌ ನಲ್ಲಿ ತಿಳಿಸಿರಬೇಕು ಎಂದು ಹೈಕೋರ್ಟ್ ಆರ್‌ಡಿಪಿಆರ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದೆ.

Exit mobile version