Revenue Facts

ಕಾವೇರಿ 2.0 ತಂತ್ರಾಂಶ ಬಳಕೆಯಲ್ಲಿ ಎರಡನೇ ಸ್ಥಾನ ಪಡೆದ ದೊಡ್ಡಬಳ್ಳಾಪುರ

ಬೆಂಗಳೂರು, ಜೂ. 21 : ಆಸ್ತಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆಯ ಉಪನೋಂದಣಿ ಕಚೇರಿಗಳಲ್ಲಿ ಈಗ ಕಾವೇರಿ 2.0 ಆನ್ ಲೈನ್ ತಂತ್ರಾಂಶ ಬಂದಿದೆ. ಸರ್ಕಾರ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿಯೇ ಈ ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ನೋಂದಣಿ ಪ್ರಕ್ರಿಯೆಗಾಗಿ ಕಚೇರಿಗೆ ಅಲೆಯುವ ಗೋಜಿಲ್ಲ. ಕಾವೇರಿ 2.0 ಆನ್ ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದರೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಕಚೇರಿಗೆ ಹೋದರೆ, ಸುಲಭವಾಗಿ ನೋಂದಣಿ ಮಾಡಿಸಬಹುದು.

ಆಗ ನಿಮ್ಮ ನೋಂದಣಿ ಕಾರ್ಯವು ಶೀಘ್ರವಾಗಿ ಮುಗಿಯುತ್ತದೆ. ಜನರು ಕಾವೇರಿ 2.0 ಆನ್ ಲೈನ್ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಬೇಕು. ತಂತ್ರಜ್ಞಾನ ಮುಂದುವರೆದಂತೆ ಜನರ ಕೆಲಸಗಳು ಕೂಡ ಸುಲಭವಾಗಿ ನಡೆಯುತ್ತದೆ. ಹೀಗಾಗಿಯೇ ಈ ವ್ಯವಸ್ಥೆ ಅನ್ನು ಜಾರಿಗೆ ತರಲಾಗಿದೆ. ವೇರಿ 2.0 ಆನ್ ಲೈನ್ ತಂತ್ರಾಂಶವಿಲ್ಲದೇ, ನೋಂದಣಿ ಕಚೇರಿಗಳಲ್ಲಿ ದಿನಗಟ್ಟಲೆ ಕಾಯಬೇಕಿತ್ತು. ಮಧ್ಯವರ್ತಿಗಳ ಹಾವಳಿ ಅಧಿಕವಾಗಿತ್ತು. ಆದರೆ, ಈಗ ಕಾವೇರಿ 2.0 ಆನ್ ಲೈನ್ ತಂತ್ರಾಂಶ ಬಂದಿದ್ದರಿಂದ ಸುಲಭವಾಗಿಯೂ, ಮೀಡಿಯೇಟರ್ ಗಳ ಸಮಸ್ಯೆಗಳು ಇಲ್ಲದೆಯೂ ನೋಂದಣಿ ಮಾಡಿಸಬಹುದಾಗಿದೆ.

ಈಗಂತೂ ಎಲ್ಲಾ ಕಡೆಗಳಲ್ಲೂ ಕಾವೇರಿ ತಂತ್ರಾಂಶವನ್ನು ಬಳಸಲಾಗುತ್ತಿದೆ. ಇನ್ನು ದೊಡ್ಡಬಳ್ಳಾಪುರದ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಮಾರ್ಚ್ 29 ರಿಂದ ಕಾವೇರಿ-2 ತಂತ್ರಾಂಶ ಆಳವಡಿಸಲಾಗಿದೆ. ಇದೀಗ ದೊಡ್ಡಬಳ್ಳಾಪುರದಲ್ಲಿ ಹೆಚ್ಚಿನ ನೋಂದಣಿಗಳನ್ನು ನಡೆಸುವ ಮೂಲಕ 2ನೇ ಸ್ಥಾನ ಪಡೆದಿದೆ. ಈ ಬಗ್ಗೆ ಉಪನೋಂದಣಿ ಅಧಿಕಾರಿ ಎಚ್.ಎಸ್.ಸತೀಶ್ ಮಾಹಿತಿಯನ್ನು ನೀಡಿದ್ದಾರೆ.

ಮೂರು ತಿಂಗಳಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚಿನ ಪತ್ರಗಳು ನೋಂದಣಿಯಾಗಿವೆ. ಈ ಮೂಲಕ ಸರ್ಕಾರದ ಖಜಾನೆಗೆ ತಿಂಗಳು ರೂ.10 ಕೋಟಿ ಮುದ್ರಾಂಕ ಹಾಗೂ ನೋಂದ ಶುಲ್ಕ ಸಂಗ್ರಹವಾಗಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Exit mobile version