Revenue Facts

ನಿನ್ನೆ ಒಂದೇ ದಿನ 2,600 ಆಸ್ತಿ ನೋಂದಣಿ, ದಾಖಲೆಯ 311 ಕೋಟಿ ಸಂಗ್ರಹ

ನಿನ್ನೆ ಒಂದೇ ದಿನ 2,600 ಆಸ್ತಿ ನೋಂದಣಿ, ದಾಖಲೆಯ 311 ಕೋಟಿ ಸಂಗ್ರಹ

ಬೆಂಗಳೂರು: ಕರ್ನಾಟಕವು ಬುಧವಾರ 26,000 ಆಸ್ತಿಯನ್ನು ದೊಡ್ಡ ಪ್ರಮಾಣದಲ್ಲಿ ನೋಂದಾಯಿಸುವ ಮೂಲಕ ಮತ್ತು 311 ಕೋಟಿ ರೂಪಾಯಿಗಳ ಆದಾಯವನ್ನು ಸಂಗ್ರಹಿಸುವ ಮೂಲಕ ಆಸ್ತಿ ರವಾನೆಗೆ ಹೊಸ ಏಕದಿನ ದಾಖಲೆಯನ್ನು ನಿರ್ಮಿಸಿದೆ. ಅ.1ರಿಂದ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳು ಪರಿಷ್ಕರಣೆಯಾಗಲಿವೆ ಎಂದು ಈಗಾಗಲೇ ನೋಂದಣಿ & ಮುದ್ರಾಂಕ ಇಲಾಖೆಯು ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿಗೆ ಖರೀದಿದಾರರು ಮತ್ತು ಮಾರಾಟಗಾರರು ಮುಗಿಬಿದ್ದಾರೆ. ಆಸ್ತಿ ನೋಂದಣಿ ಸೇರಿದಂತೆ ದಸ್ತಾವೇಜು ಪ್ರಕ್ರಿಯೆಗೆ ಬಂದ ಜನ, ಒಂದೇ ದಿನ (ಬುಧವಾರ) 26,058 ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆಂದು ಇಲಾಖೆ ತಿಳಿಸಿದೆ. ಒಟ್ಟು 1312 ಕೋಟಿ ಆದಾಯ ಸಂಗ್ರಹಿಸುವ ಮೂಲಕ ಇಲಾಖೆಯು ಸಾರ್ವಕಾಲಿಕ ದಾಖಲೆ ಮಾಡಿದೆಕಳೆದ ಸೋಮವಾರ 15,936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದು 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಸೆ.22ರಂದು 12,955ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆಯಿಂದ 130.87 ಕೋಟಿ ರೂ. ಸೆ.25ರಂದು ‘158.28 ಕೋ.ಟಿ ರೂ. ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಕಾವೇರಿ 2 ತಂತ್ರಾಂಶದಲ್ಲಿ ಆನ್ ಲೈನ್‌ ಶುಲ್ಕ ಪಾವತಿಗೆ ವ್ಯವಸ್ಥೆಯನ್ನು ಅಳವಡಿಸಿದ್ದು, ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಂದು ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದಡಿಯೇ ಈ ಪ್ರಕ್ರಿಯೆ ನಡೆದಿದೆ,ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದ ಅಡಿ ನೋಂದಣಿ, ದಸ್ತಾವೇಜು ನಡೆದಿವೆ.

ಒಂದೇ ದಿನ ಗರಿಷ್ಠ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಯಶಸ್ವಿಯಾಗಿ ನಡೆಸುವ ಮೂಲಕ ತಂತ್ರಾಂಶ ಗರಿಷ್ಠ ಕಾರ್ಯಕ್ರಮತೆ ಸಾಬೀತುಪಡಿಸುತ್ತಿದೆ.ಕಾವೇರಿ-2 ತಂತ್ರಾಂಶದ ಸಹಾಯದಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಶೀಘ್ರ ಮತ್ತು ಪಾರದರ್ಶಕವಾಗಿ ನೋಂದಣಿ ಪ್ರಕ್ರಿಯೆಗಳು ಮುಗಿಯುತ್ತಿವೆ ಎಂಬುದು ಕೂಡ ಗಮನಾರ್ಹವಾದ ಅಂಶವಾಗಿದೆ.ಮೊದಲೇ ಅರ್ಜಿ ಸಲ್ಲಿಸಿ, ನೋಂದಣಿ ಶುಲ್ಕ ಪಾವತಿಸಿ ಸಮಯ ನಿಗದಿ ಮಾಡಿಕೊಂಡಿರುವವರು ಶನಿವಾರ ರಾತ್ರಿ ಒಳಗೆ ನೋಂದಣಿ ಪ್ರಕ್ರಿಯೆ ಮುಗಿಸಲ ಸಾಧ್ಯವಾಗದಿದ್ದಲ್ಲಿ, ಪರಿಷ್ಕೃತ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಭರಿಸಬೇಕಾಗುತ್ತದೆ. ಸರ್ಕಾರ ಆಯಾ ಪ್ರದೇಶಕ್ಕೆ ತಕ್ಕಂತೆ ಶೇ.10 ರಿಂದ 90 ಪಟ್ಟು ಮಾರ್ಗಸೂಚಿ ದರ ಹೆಚ್ಚಳ ಮಾಡಿದೆ. ಅ.1ರ ಬಳಿಕ ಸ್ವೀಕರಿಸಿದ ದಸ್ತುವೇಜುಗಳ ನೋಂದಣಿಗೆ ಪರಿಷ್ಕೃತ ಮಾರ್ಗಸೂಚಿ ದರ ಅನ್ವಯ ಆಗಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version