Revenue Facts

“ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಎರಡೇ ವಾರದಲ್ಲಿ 140 ಕೋಟಿ ವಶ:

“ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಎರಡೇ ವಾರದಲ್ಲಿ 140 ಕೋಟಿ ವಶ:

ಏಪ್ರಿಲ್:13;ರಾಜ್ಯದಲ್ಲಿ ನಡೆಯಲ್ಲಿರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದು ಅಂದಿನಿಂದ ಇಂದಿನ ವರೆಗೂ ಹಣ, ಮಧ್ಯ, ಚಿನ್ನ ಹಾಗೂ ಇತ್ಯಾದಿಗಳು ಸೇರಿದಂತೆ ಸುಮಾರು 140 ಕೋಟಿ ಮೌಲ್ಯದ ವಸ್ತುಗಳನ್ನು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದೆ.

ಈ ಪೈಕಿ ಗೋಕಾಕ್ ಕ್ಷೇತ್ರದಲ್ಲಿ 05 ಕೋಟಿ ನಗದು, ಜಯನಗರ ಕ್ಷೇತ್ರದಲ್ಲಿ 2.45 ಕೋಟಿ ಮೌಲ್ಯದ 6.29 KG ಚಿನ್ನ, ಚಿಕ್ಕಪೇಟೆ ಕ್ಷೇತ್ರದಲ್ಲಿ 1.22 ಕೋಟಿ ಮೌಲ್ಯದ 2.44 KG ಚಿನ್ನ ಹಾಗೂ ಶ್ರವಣಬೆಳಗೊಳದಲ್ಲಿ ಫ್ಲೇಯಿಂಗ್ ಸ್ಕ್ಯಾಡ್ ಸದಸ್ಯರು 80 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.ಇದರೊಂದಿಗೆ ಚುನಾವಣಾ ಆಯೋಗವು CRPC ಸೆಕ್ಷನ್ ಗಳ ಅಡಿಯಲ್ಲಿ 3,116 ಪ್ರಕರಣಗಳನ್ನು ದಾಖಲಿಸಿ 8,145 ಜಾಮೀನು ಸಹಿತ ವಾರಂಟ್ ಗಳನ್ನು ಹೊರಡಿಸಿದೆ.

Exit mobile version