#13,000 bribe #demanded # death certificate #Village Accountant #Lokayukta
ಮಂಗಳೂರು;ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಚೇಳಾರು ಗ್ರಾಮದ ವ್ಯಕ್ತಿಯೊಬ್ಬನ ಅಜ್ಜನ ಡೆತ್ ಸರ್ಟಿಫಿಕೇಟ್ ಗೆ 13 ಸಾವಿರ ರೂಪಾಯಿ ಲಂಚದ(Bribe) ಬೇಡಿಕೆಯಿಟ್ಟು ಸ್ವೀಕರಿಸಿದ ಆರೋಪದಡಿಯಲ್ಲಿ ಮಂಗಳೂರು ತಾಲೂಕಿನ ಸುರತ್ಕಲ್ ಗ್ರಾಮದ ವಿಎ(Village accountent) ಯನ್ನು ಲೋಕಾಯುಕ್ತರು ಬಂಧಿಸಿದ್ದಾರೆ.ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಯನ್ನು ಚೇಳ್ಯಾರು ಗ್ರಾಮ ಅಧಿಕಾರಿ ವಿಜಿತ್ ಎಂದು ಗುರುತಿಸಲಾಗಿದೆ.ವ್ಯಕ್ತಿಯೊಬ್ಬರು ತನ್ನ ತಾಯಿಯ ಹೆಸರಿನಲ್ಲಿದ್ದ ಜಾಗದಲ್ಲಿ 5 ಸೆಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಅಜ್ಜನ ಮರಣ ಪತ್ರ ಹಾಗೂ ವಂಶ ವೃಕ್ಷ(Familytree) ಮಾಡಲು ಮುಂದಾಗಿದ್ದು ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗ ವಿಜಿತ್ ಬಳಿ ಅರ್ಜಿ ಹಾಕಿದ್ದರು.ನ. 20ರಂದು ಗ್ರಾಮ ಆಡಳಿತ ಅಧಿಕಾರಿಯ ಮೊಬೈಲ್ ನಂಬರಿಗೆ ಕರೆ ಮಾಡಿ ಮಾತನಾಡಿದಾಗ ದೃಢೀಕರಣ ಪತ್ರ ಸಿದ್ಧವಿದೆ. 15,000 ರೂ. ತರುವಂತೆ ತಿಳಿಸಿದ್ದರು. ಆದರೆ ತನ್ನಲ್ಲಿ ಅಷ್ಟು ಹಣ ಇಲ್ಲ ಎಂದಾಗ ನಾಳೆ ಕೊಡಿ ಎಂದು ತಿಳಿಸಿದ್ದರು. ಈ ಬಗ್ಗೆ ಆ ವ್ಯಕ್ತಿಯು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು ಅದರಂತೆ ದೂರುದಾರರಿಂದ ವಿಜಿತ್ 13,000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಲೋಕಾಯುಕ್ತ ಪೊಲೀಸ್ ಎಸ್ಪಿ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕ ಚಲುವರಾಯ ಬಿ. ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಸ್ ಪಿ. ಅವರು ಸಿಬ್ಬಂದಿ ಜತೆ ಈ ಕಾರ್ಯಾಚರಣೆ ನಡೆಸಿದ್ದಾರೆ.