Revenue Facts

ರೈತನಿಂದ 10,000 ಲಂಚ ಪಡೆಯುತ್ತಿದ್ದ ಭ್ರಷ್ಟ ಸರ್ವೆಯರ್ ಲೋಕಾ ಬಲೆಗೆ

ರೈತನಿಂದ 10,000 ಲಂಚ ಪಡೆಯುತ್ತಿದ್ದ ಭ್ರಷ್ಟ ಸರ್ವೆಯರ್ ಲೋಕಾ ಬಲೆಗೆ

Karnataka Lokayuktha Police Raided BBMP offices in Bengaluru

ಬೀದರ್‌: ಹೊಲಕ್ಕೆ ಸಂಬಂಧಿಸಿದಂತೆ ಪೋಡಿ ಮಾಡಿ ವರ್ಗಾವಣೆ ಮಾಡಲು ಬೇಡಿಕೆ ಇಟ್ಟಿದ್ದ ಲಂಚದ ಹಣ ಪಡೆದ ಇಲ್ಲಿಯ ಸಹಾಯಕ ನಿರ್ದೇಶಕರ ಕಚೇರಿಯ ಪರವಾನಿಗೆ ಭೂಮಾಪಕ ಅಧಿಕಾರಿ ಸಿದ್ಧಾರ್ಥ ಭಂಡಾರಿ  ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.ವೆಂಕಟರಾವ್ ಶೇರಿಕಾರ ಎನ್ನುವವರು ಹೊಲದ ಪೋಡಿ ಮಾಡಿ ವರ್ಗಾವಣೆ(Transfer) ಮಾಡಲು ಭೂಮಾಪಕ ಅಧಿಕಾರಿ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟು, 2,500 ಸಾವಿರ ಮುಂಗಡ ಪಡೆದಿದ್ದು, ಇನ್ನುಳಿದ ಹಣ ಗುರುವಾರ ಪಡೆಯುವಾಗ ಲೋಕಾಯುಕ್ತ(lokayukta) ಪೊಲೀಸರ ಬಲೆಗೆ ಬಿದ್ದಿದ್ದಾನೆ.ಹಿಪ್ಪಳಗಾಂವ್ ಗ್ರಾಮದ ರೈತ ವೆಂಕಟರಾವ್ ಎಂಬುವರ ಭೂಮಿ ನಾಲ್ವರು ಮಕ್ಕಳಿಗೆ ಫೋಡಿ ಮಾಡಿಕೊಡಲು ಅರ್ಜಿ ಹಾಕ ಲಾಗಿತ್ತು, ಸರ್ಕಾರ ಫೀಸ್ ಕಟ್ಟಿದರೂ ಪ್ರತ್ಯೇಕ ವಾಗಿ 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಸರ್ವೆಯರ್ ಸಿದ್ದಾರ್ಥನ ವಿರುದ್ಧ ರೈತ ವೆಂಕಟರಾವ್ ಲೋಕಾಯಕ್ತರಿಗೆ ದೂರು ನೀಡಿದ್ದರು,ಪ್ರಕರಣವನ್ನ ಗಂಭೀರವಾಗಿ ತಗೆದುಕೊಂಡ ಲೋಕಾ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಸರ್ವೆಯರ್ ನನ್ನು ಟ್ರ್ಯಾಪ್ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಭೂಮಾಪಕ ಅಧಿಕಾರಿ(ಸರ್ವೆಯರ್) ಸಿದ್ದಾರ್ಥ ಲಂಚ ಪಡೆಯುತ್ತಿದ್ದ ಸಮಯದಲ್ಲಿ ಬಲೆ ಬೀಸಿ ಧಾಳಿಯನ್ನು ನಡೆಸಿದ್ದಾರೆ 6 ಸಾವಿರ ಲಂಚ(Bribe) ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ಎನ್.ಎಮ್.ಓಲೆಕಾರ್ ಮತ್ತು ತಂಡ ದಾಳಿ ನಡೆಸಿ ಸರ್ವೆಯರ್ ಸಿದ್ದಾರ್ಥಗೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ,

Exit mobile version