Revenue Facts

ಎಲ್ ಪಿಜಿ ಸಿಲಿಂಡರ್ ಗೆ ಮತ್ತೆ 100 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ

ಎಲ್ ಪಿಜಿ ಸಿಲಿಂಡರ್ ಗೆ ಮತ್ತೆ 100 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ;ಪ್ರಧಾನಿ‌ ನರೇಂದ್ರ ಮೋದಿ ಸರ್ಕಾರ ಎಲ್ ಪಿಜಿ(LPG) ಸಿಲಿಂಡರ್ ಗೆ ಮತ್ತೆ 100 ರೂ. ಸಬ್ಸಿಡಿ(Subsidy) ಘೋಷಿಸಿದೆ.ಪ್ರಧಾನ ಮಂತ್ರಿ ಉಜ್ವಲ ಯೋಜನೆಯ(Ujwalayojana) ಫಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ₹200 ರಿಂದ ₹300 ಕ್ಕೆ ಸರ್ಕಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಪ್ರಕಟಿಸಿದ್ದಾರೆ.ಉಜ್ವಲ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್‌ಗೆ ₹ 903 ಮಾರುಕಟ್ಟೆ ಬೆಲೆಗೆ ₹ 703 ಪಾವತಿಸುತ್ತಾರೆ. ಕೇಂದ್ರ ಸಚಿವ ಸಂಪುಟದ ನಿರ್ಧಾರದ ಬಳಿಕ ಈಗ ₹603 ಪಾವತಿಸಲಿದ್ದಾರೆ.ಸರ್ಕಾರವು ಆಗಸ್ಟ್‌ನಲ್ಲಿ 14.2 ಕಿಲೋಗ್ರಾಂ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ₹ 200 ಕಡಿಮೆ ಮಾಡಿತ್ತು. ಕ್ಯಾಬಿನೆಟ್ ಸಭೆಯ ನಂತರ ಮಾತನಾಡಿದ ಅವರು,ಉಜ್ವಲ ಯೋಜನೆ ಮಹಿಳೆಯರ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ.ಈಗ 200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಸಿಗಲಿದೆ. ಎಂದು ತಿಳಿಸಿದರು.ದೇಶೀಯ ಗ್ರಾಹಕರ ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು, ಕೇಂದ್ರ ಸಚಿವ ಸಂಪುಟವು ಆಗಸ್ಟ್ 29 ರಂದು LPG ಮೇಲಿನ ಬೆಲೆ ಕಡಿತವನ್ನು ಘೋಷಿಸಿತು.

Exit mobile version