Revenue Facts

ಬೆಂಗಳೂರಿನಲ್ಲಿ ಯಮ ಸ್ವರೂಪಿ ಡೇಂಜರ್‌ ಟ್ರಾನ್ಸ್‌ಫರ್ಮರ್‌ ಇರುವ ಜಾಗಗಳು!

Bangalore Danger spots

Beware of Bangalore Danger transformers

#Bangalore #Electric transformer #Dangerous footpath #Bescom

ಬೆಂಗಳೂರು, ನ. 21: ಯಮ ಅವತಾರ ತಾಳಿರುವ ಬೆಸ್ಕಾಂ ತಂತಿಗಳು ಮತ್ತು ಟ್ರಾನ್ಸ್‌ಫರ್ಮರ್‌ಗಳು ರಾಜಧಾನಿಯಲ್ಲಿ ಪದೇ ಪದೇ ಮುಗ್ಧ ಜೀವಗಳನ್ನು ಬಲಿ ಪಡೆಯುತ್ತಲೇ ಇವೆ. ಕಾಡುಗೋಡಿಯಲ್ಲಿ ಗರ್ಭಿಣಿ ತಾಯಿ ಮತ್ತು 9 ತಿಂಗಳ ಕಂದಮ್ಮನನ್ನು ಬಲಿ ಪಡೆದ ಪ್ರಕರಣಲ್ಲಿ ಐವರು ಅಧಿಕಾರಿಗಳನ್ನು ಅಮಾನತು ಮಾಡಿ ಬೆಸ್ಕಾಂ ತಿಪ್ಪೆ ಸಾರಿಸುವ ಕೆಲಸ ಮಾಡಿದೆ.

ವಾಸ್ತವದಲ್ಲಿ ರಸ್ತೆ ಬದಿ ಇರುವ ಟ್ರಾನ್ಸ್‌ ಫಾರ್ಮರ್ ಮತ್ತು ತಂತಿಗಳು ನೇತಾಡುವುದಕ್ಕೆ ಲೈನ್‌ ಮೆನ್‌ ಗಳನ್ನು ಅಥವಾ ಬೆಸ್ಕಾಂ ಸಿಬ್ಬಂದಿಯನ್ನು ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ! ಯಾಕೆಂದರೆ ಟ್ರಾನ್ಸ್‌ ಫರ್ಮರ್‌ ಗಳನ್ನುಅಳವಡಿಸಿರುವ ಜಾಗದಲ್ಲಿ ಸುರಕ್ಷತಾ ಕ್ರಮಕ್ಕೆ ಒಂದಷ್ಟು ಹಣ ಬಿಡುಗಡೆ ಮಾಡಿ ಸುರಕ್ಷತಾ ಕ್ರಮ ಕೈಗೊಳ್ಳಬೇಕಾಗಿರುವುದು ಬೆಸ್ಕಾಂ ಎಂಡಿ ಹಾಗೂ ಸಚಿವರು. ಈ ಕುರಿತ ಯೋಜನೆ ರೂಪಿಸಬೇಕಾಗಿರುವುದು ಮೇಲಾಧಿಕಾರಿಗಳು. ಸದ್ಯ ಅಗುತ್ತಿರುವ ಹಾಗೂ ಆಗುವ ಅನಾಹುತಗಳಿಗೆ ಇಲಾಖೆಯ ಮುಖ್ಯಸ್ಥರು ಹೊಣೆ ಹೊರತು ಸಿಬ್ಬಂದಿ ಅಲ್ಲ. ಈ ವಾಸ್ತವ ಅರಿಯದೇ ಕೇವಲ ಸಿಬ್ಬಂದಿ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಿವೆ.

ಬೆಂಗಳೂರಿನಲ್ಲಿ ಅಪಾಯಕಾರಿ ತಂತಿಗಳನ್ನು ಪತ್ತೆ ಮಾಡಿ ಅಪಾಯಕಾರಿ ಟ್ರಾನ್ಸ್‌ ಫರ್ಮರ್‌ ಗಳ ಸುತ್ತ ಬೇಲಿ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಂಬಂಧ ಮೊದಲು ಇಲಾಖೆ ಸಮೀಕ್ಷೆ ನಡೆಸಬೇಕು. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅದನ್ನು ಸರಿ ಪಡಿಸುವ ಪ್ರಯತ್ನ ಮಾಡಬೇಕು. ಅ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕಳೆದ ಐದು ವರ್ಷದಲ್ಲಿ 70 ಕ್ಕಿಂತಲೂ ಹೆಚ್ಚು ಮುಗ್ದರು ಜೀವ ಕಳೆದುಕೊಂಡಿದ್ದಾರೆ.

ರಸ್ತೆಗಳಲ್ಲಿ ಯಮರಾಜ ಉರುಳು ಹಾಕಿ ಕಾಯುತ್ತಿರುವಂತೆ ಟ್ರಾನ್ಸ್‌ಫರ್ಮರ್‌ ಗಳು ವಿದ್ಯುತ್ ತಂತಿಗಳನ್ನು ಉರುಳು ಬಿಟ್ಟು ಕಾಯುತ್ತಿವೆ. ಮುಟ್ಟಿದರೆ ಮೂರೇ ಕ್ಷಣಕ್ಕೆ ಬೂದಿ ಮಾಡಿ ಮಸಣ ಸೇರಿಸುವ ಡೇಂಜರ್ ಟ್ರಾನ್‌ಫರ್ಮಗಳ ಸಚಿತ್ರ ವರದಿಯನ್ನು revenuefacts.com ವರದಿಗಾರ ಅಭಿಜಿತ್‌ ಮತ್ತು ಕ್ಯಾಮರಾ ಪ್ರತಿನಿಧಿ ಮೋಹಿತ್ ದರ್ಶನ ಮಾಡಿಸಿದ್ದಾರೆ. ಜೀವ ತೆಗೆಯುವ ಈ ಟ್ರಾನ್ಸ್‌ ಫರ್ಮಗಳು, ತುಕ್ಕು ಹಿಡಿದಿರುವ ಕಂಬಿಗಳು, ರಸ್ತೆಗೆ ಬಿದ್ದು ಮೃತ್ಯು ಆಹ್ವಾನಕ್ಕೆ ಕಾಯುತ್ತಿರುವ ತಂತಿಗಳು, ಆ ಸ್ಥಳಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Bangalore Danger electric transformer spot -1

ಕೇಸ್‌ ನಂ. 1 : ಸ್ಥಳ: ಕೆಂಗೇರಿ : ಗೂ. ಲೊಕೇಷನ್‌:

ಸಮಸ್ಯೆ: ವಿದ್ಯುತ್‌ ಟ್ರಾನ್ಸ್ ಫಾರ್ಮರ್‌ ನಲ್ಲಿ ಎರಡು ತಂತಿಗಳು ನೇತಾಡುತ್ತಿವೆ. ವಿದ್ಯುತ್ ಟ್ರಾನ್ಸ್‌ ಪರ್ಮರ್‌ ಗೆ ಅಳವಡಿಸಿರುವ ಕಂಬಿಗಳು ತುಕ್ಕು ಹಿಡಿದಿವೆ. ವಿದ್ಯುತ್ ತಂತಿಗಳು ಕೈಗೆ ಎಟಕುವಂತಿದೆ.

ಪರಿಹಾರ: ವಿದ್ಯುತ್ ಟ್ರಾನ್ಸ್‌ ಫರ್ಮರ್ ಸುತ್ತಲೂ ಬೇಲಿ ಅಳವಡಿಸುವುದು. ತಂತಿಗಳಲ್ಲಿ ವಿದ್ಯುತ್ ಹರಿಯದಂತೆ ಟೇಪ್‌ ಆದರೂ ಸುತ್ತುವುದು. ತುಕ್ಕು ಹಿಡಿದಿರುವ ಕಂಬಿಗಳ ತುರ್ತು ಬದಲಾವಣೆ.

ಕೇಸ್ ನಂ. 2: ಸ್ಥಳ : ಜ್ಞಾನ ಜ್ಯೋತಿ ನಗರ ಜ್ಞಾನ ಭಾರತಿ, ಬೆಂಗಳೂರು ಗೂ. ಲೊಕೇಷನ್:https://www.google.com/maps?q=12.927503,77.486264&z=17&hl=en

Bangalore Danger electric transformer

ಸಮಸ್ಯೆ: ಭೂಮಿಯ ತಳ ಮಟ್ಟದ ಎರಡು ಅಡಿಯಲ್ಲಿ ವಿದ್ಯುತ್ ತಂತಿಗಳು ಇವೆ. ಪುಟ್‌ ಪಾತ್‌ ನಲ್ಲಿಯೇ ಟ್ರಾನ್ಸ್‌ಫರ್ಮರ್ ಅಳವಡಿಸಿರುವುದರಿಂದ ನಡೆದಾಡುವರಿಗೆ ತಂತಿಗಳು ತಾಗುವ ಸಂಭವವಿದೆ. ಟ್ರಾನ್ಸ್‌ಫರ್ಮರ್‌ ಸುತ್ತಲೂ ಬೇಲಿ ಅಳವಡಿಸದಿರುವುದು.

ಬೆಂಗಳೂರಿನಲ್ಲಿ ಯಮ ಸ್ವರೂಪಿ ಟ್ರಾನ್ಸ್‌ಫರ್ಮರ್‌ ಸ್ಥಳಗಳು

ಕೇಸ್ ನಂ. 3: ಸ್ಥಳ: ಮೈಸೂರು ರಸ್ತೆ ಗೂ. ಲೊಕೇಶನ್ :https://www.google.com/maps/place/12%C2%B055’10.0%22N+77%C2%B029’29.9%22E/@12.9194371,77.4890762,17z/data=!3m1!4b1!4m4!3m3!8m2!3d12.9194371!4d77.4916511?hl=en&entry=ttu

ಸಮಸ್ಯೆ: ರಾಜ ಕಾಲುವೆ ಮೇಲೆ ಟ್ರಾನ್ಸ್‌ಫರ್ಮರ್‌ ಅಳವಡಿಸಲಾಗಿದೆ. ಮೇಲ್ನೋಟಕ್ಕೆ ಯಾವುದೇ ತಂತಿ ಕಾಣದಿದ್ದರೂ ಕೆಳಗೆ ಹಾದು ಹೋಗಿರುವ ವೈರ್‌ ಗಳನ್ನು ಹೆಗ್ಗಣ ಕಡಿದಿದ್ದಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಟ್ರಾನ್ಸ್‌ಫಮರ್‌ ಸಮೀಪ ಹೋಗದಂತೆ ಗ್ರಿಲ್ ಅಳವಡಿಸಿಲ್ಲ. ಜನ ಓಡಾಡುವ ಈ ರಸ್ತೆಯಲ್ಲಿ ಮಳೆ ಬಿದ್ದಲ್ಲಿ ಈ ಹಾದಿಯಲ್ಲಿ ಹೋಗುವುದು ತುಂಬಾ ಅಪಾಯಕಾರಿ.

ಬೆಂಗಳೂರಿನಲ್ಲಿ ಯಮ ಸ್ವರೂಪಿ ಟ್ರಾನ್ಸ್‌ಫರ್ಮರ್‌ ಸ್ಥಳಗಳು

ಕೇಸ್ ನಂ. 4: ಸ್ಥಳ: ಗೋಪಾಲನ್ ಮಾಲ್, ಮೈಸೂರು ರಸ್ತೆ, ಗೂ. ಲೊಕೇಶನ್ :https://www.google.com/maps/place/12%C2%B056’18.7%22N+77%C2%B031’21.7%22E/@12.9385401,77.5201154,17z/data=!3m1!4b1!4m4!3m3!8m2!3d12.9385401!4d77.5226903?hl=en&entry=ttu

ಸಮಸ್ಯೆ: ಟ್ರಾನ್ಸ್‌ಫರ್ಮರ್ ಪಕ್ಕದಲ್ಲಿ ಚರಂಡಿ ಕಲ್ಲುಗಳು ಮುರಿದು ಬಿದ್ದಿವೆ. ಟ್ರಾನ್ಸ್‌ಫರ್ಮರ್ ಕಂಬ ಬಾಗಿದೆ. ಯಾವಾಗ ಬೇಕಾದರೂ ಬೀಳುವ ಶಿಥಿಲ ವ್ಯವಸ್ಥೆಗೆ ತಲುಪಿದೆ. ವಿದ್ಯುತ್‌ ತಂತಿಗಳು ನೇತಾಡುತ್ತಿವೆ. ಮಳೆ ಬಿದ್ದ ಸಂದರ್ಭದಲ್ಲಿ ಈ ಹಾದಿಯಲ್ಲಿ ನಡೆದುಕೊಂಡು ಹೋದರೆ, ವೃಷಭಾವತಿ ನಾಲೆ ಸೇರುವುದು ಖಚಿತ.

ಕೇಸ್ ನಂ. 5: ಸ್ಥಳ: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಗೂ. ಲೊಕೇಶನ್ : https://www.google.com/maps/place/12%C2%B057’13.9%22N+77%C2%B032’35.8%22E/@12.9538578,77.5406905,17z/data=!3m1!4b1!4m4!3m3!8m2!3d12.9538578!4d77.5432654?hl=en&entry=ttu

ಸಮಸ್ಯೆ: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಬಂದು ಹೋಗುತ್ತಾರೆ. ರಸ್ತೆ ಪಕ್ಕದಲ್ಲಿರುವ ಟ್ರಾನ್ಸ್‌ಫರ್ಮರ್ ನ ತಂತಿಗಳು ಭೂಮಿಗೆ ತಾಗಿಕೊಂಡಿವೆ. ಪಕ್ಕದಲ್ಲಿನ ಪೋಲ್‌ ನಲ್ಲಿನ ವೈರ್‌ ಗಳು ನೇತಾಡುತ್ತಿವೆ. ಶಿಥಿಲಗೊಂಡಿರುವ ವೈರ್‌ ಗಳಿಗೆ ಯಾವುದೇ ಸುರಕ್ಷತಾ ಕ್ರಮ ಅಳವಡಿಸಿಲ್ಲ. ಎದೆ ಮಟ್ಟದಲ್ಲಿರುವ ಈ ಕಂಬಿಗಳು ಜನರಿಗೆ ತಾಗಿದರೆ ವಿದ್ಯುತ್‌ ಶ್ಪರ್ಶ ವಾಗಿ ಅವಘಡ ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ!

ಕೇಸ್ ನಂ.6: ಸ್ಥಳ: ಗುಡ್ಡದಹಳ್ಳಿ, ಮೈಸೂರು ರಸ್ತೆ, ಗೂ. ಲೊಕೇಶನ್ :https://www.google.com/maps/place/12%C2%B057’20.4%22N+77%C2%B032’43.5%22E/@12.9556589,77.5428505,17z/data=!3m1!4b1!4m4!3m3!8m2!3d12.9556589!4d77.5454254?hl=en&entry=ttu

ಸಮಸ್ಯೆ: ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಹಳ್ಳಿಯಲ್ಲಿ ಟ್ರಾನ್ಸ್‌ಫರ್ಮರ್ ನೆಲಮಟ್ಟದಲ್ಲಿದೆ. ಪಕ್ಕದ ಕಂಬದ ತಂತಿಗಳು ನೇತಾಡುತ್ತಿವೆ. ವೈರ್‌ ಗಳು ಶಿಥಿಲಗೊಂಡಿವೆ. ಮುಖ್ಯ ರಸ್ತೆ ಪಕ್ಕದಲ್ಲಿರುವ ಟ್ರಾನ್ಸ್‌ ಫರ್ಮರ್‌ ಗೆ ಯಾವುದೇ ಗ್ರಿಲ್ ಅಳವಡಿಸಿಲ್ಲ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ಸಂಚಕಾರ ತಪ್ಪಿದ್ದಲ್ಲ.

ಕೇಸ್ ನಂ. 7: ಸ್ಥಳ: ಗೋಪಾಲನ್ ಮಾಲ್‌ ಮೈಸೂರು ರಸ್ತೆ, ಲೊಕೇಶನ್ :https://www.google.com/maps/place/12%C2%B057’27.7%22N+77%C2%B033’09.8%22E/@12.9576849,77.5501419,17z/data=!3m1!4b1!4m4!3m3!8m2!3d12.9576849!4d77.5527168?hl=en&entry=ttu

ಸಮಸ್ಯೆ: ಟ್ರಾನ್ಸ್‌ಫರ್ಮರ್ ಕೆಳಗೆ ಅಳವಡಿಸಿರುವ ಬಾಕ್ಸ್‌ ನಲ್ಲಿನ ಬಾಗಿಲು ಮುರಿದು ತೆರೆದುಕೊಂಡಿದೆ. ಅಪ್ಪಿ ತಪ್ಪಿ ಕೈ ಇಟ್ಟರೆ ಸುಡುವುದು ಗ್ಯಾರೆಂಟಿ. ಇಲ್ಲಿನ ಟ್ರಾನ್ಸ್‌ಫರ್ಮರ್‌ ಕಂಬಕ್ಕೆ ಅಳವಡಿಸಿರುವ ವೈರ್‌ ಗಳು ಕಿತ್ತು ಹೋಗಿವೆ. ತಲೆಗೆ ತಾಗುವ ಎತ್ತರದಲ್ಲಿರುವ ಟ್ರಾನ್ಸ್‌ ಫರ್ಮರ್‌ ಸುತ್ತ ಬೇಲಿ ಇಲ್ಲ. ಅದರ ಕೆಳಗೆ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದು, ಯಾವುದೇ ಎಚ್ಚರಿಕೆ ಫಲಕ ಕೂಡ ಅಳವಡಿಸಿಲ್ಲ. ಟ್ರಾನ್ಸ್‌ ಫರ್ಮರ್‌ ತಂತಿಗಳು ಕೈಗೆಟಕುವಂತಿದ್ದು, ಮಳೆ ಬಿದ್ದರಂತೂ ಅಪಾಯ ತಪ್ಪಿದ್ದಲ್ಲ!

ಕೇಸ್ ನಂ. 8: ಸ್ಥಳ: ಮೈಸೂರು ರಸ್ತೆ, ವುಡ್‌ ಫ್ಯಾಕ್ಟರಿ ಸಮೀಪಲೊಕೇಶನ್ :https://www.google.com/maps/place/12%C2%B057’27.8%22N+77%C2%B033’11.2%22E/@12.9577175,77.550546,17z/data=!3m1!4b1!4m4!3m3!8m2!3d12.9577175!4d77.5531209?hl=en&entry=ttu

ಸಮಸ್ಯೆ: ಮೈಸೂರು ರಸ್ತೆಯ ವುಡ್ ಫ್ಯಾಕ್ಟರಿ ಸಮೀಪದ ಮುಖ್ಯ ರಸ್ತೆಯಲ್ಲಿಯೇ ಟ್ರಾನ್ಸ್‌ಫರ್ಮರ್ ಅಳವಡಿಸಲಾಗಿದೆ. ನೆಲ ಮಟ್ಟದಿಂದ ಎರಡು ಅಡಿಯಲ್ಲಿ ಟ್ರಾನ್ಸ್‌ಫರ್ಮರ್ ಬಾಕ್ಸ್‌ ಅಳವಡಿಸಲಾಗಿದೆ. ತಂತಿಗಳು ಭೂಮಿಗೆ ತಾಗಿವೆ. ಟ್ರಾನ್ಸ್‌ಫರ್ಮರ್ ಸುತ್ತಲು ಪ್ರದೇಶದಲ್ಲಿ ಕಸ – ಕಡ್ಡಿ ರಾಶಿ ಹಾಕಲಾಗಿದೆ. ಸಾರ್ವಜನಿಕರು ಸಂಚರಿಸಿದರೆ,ಆಕಸ್ಮಿಕ ತೆರೆದುಕೊಂಡಿರುವ ತಂತಿಗಳು ಸ್ಪರ್ಶಿಸಿದರೆ ಅಥವಾ ಮಳೆ ಬೀಳುವ ಸಂದರ್ಭದಲ್ಲಿ ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವುದು ಅಪಾಯಕಾರಿ. ಇಲ್ಲಿನ ಟ್ರಾನ್ಸ್‌ಫರ್ಮರ್‌ ಗೂ ಸಹ ಬೇಲಿ ಹಾಕಿಲ್ಲ. ಸಾರ್ವಜನಿಕ ಅಪಾಯ ಕುರಿತ ಎಚ್ಚರಿಕೆ ಫಲಕಗಳು ಇಲ್ಲ!

ಕೇಸ್ ನಂ. 9: ಸ್ಥಳ: ಚಿಕ್ಕಪೇಟೆ , ಲೊಕೇಶನ್ : https://www.google.com/maps/place/12%C2%B057’27.8%22N+77%C2%B033’11.2%22E/@12.9577175,77.550546,17z/data=!3m1!4b1!4m4!3m3!8m2!3d12.9577175!4d77.5531209?hl=en&entry=ttu

ಸಮಸ್ಯೆ: ನೆಲಮಟ್ಟದಿಂದ ಒಂದು ಅಡಿ ಅಂತರದಲ್ಲಿಯೇ ಟ್ರಾನ್ಸ್‌ಫರ್ಮರ್‌ ವೈರ್‌ಗಳು ನೇತಾಡುತ್ತಿವೆ.ದಿನ ನಿತ್ಯ ಸಾವಿರಾರು ಜನ ಓಡಾಡುವ ಚಿಕ್ಕಪೇಟೆ ವ್ಯವಹಾರಿಕ ಹಬ್. ಇಲ್ಲಿನ ಟ್ರಾನ್ಸ್‌ಫರ್ಮರ್ ಕೆಳಗೆ ಸ್ವಚ್ಛತೆ ಕಾಪಾಡಿರುವುದು ದೊಡ್ಡ ಸಂತೋಷದ ಸಂಗತಿ. ಆದರೆ ಇಲ್ಲಿನ ಟ್ರಾನ್ಸ್‌ ಫರ್ಮರ್ ಗೂ ಬೇಲಿ ಅಳವಡಿಸಿಲ್ಲ. ತಂತಿಗಳನ್ನು ಸುರಕ್ಷಿತವಾಗಿಟ್ಟರೂ ಮಳೆ ಬಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇಲ್ಲಿನ ವಿದ್ಯುತ್‌ ಟ್ರಾನ್ಸ್‌ಫರ್ಮರ್‌ ಗೆ ಕಡ್ಡಾಯವಾಗಿ ಬೇಲಿ ಅಳವಡಿಸಬೇಕಾದ ಅಗತ್ಯವಿದೆ.

ಕೇಸ್ ನಂ.10: ಸ್ಥಳ: ಚಿಕ್ಕಪೇಟೆ, ಲೊಕೇಶನ್ :https://www.google.com/maps/place/12%C2%B058’12.3%22N+77%C2%B034’05.5%22E/@12.9700933,77.5656146,17z/data=!3m1!4b1!4m4!3m3!8m2!3d12.9700933!4d77.5681895?hl=en&entry=ttu

ಸಮಸ್ಯೆ: ಪುಟ್‌ಪಾತ್‌ ಮೇಲೆ ಅಳವಡಿಸಿರುವ ವಿದ್ಯುತ್ ಟ್ರಾನ್ಸ್‌ ಫರ್ಮರ್ ತಂತಿಗಳು ನೆಲಮಟ್ಟದಲ್ಲಿವೆ. ಸಾರ್ವಜನಿಕರು ಇದೇ ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುತ್ತಾರೆ. ಮನೆಗಳಿಗೆ ತಾಗಿಕೊಂಡಿರುವ ವಿದ್ಯುತ್‌ ಟ್ರಾನ್ಸ್‌ಫರ್ಮರ್‌ ತಂತಿಗಳಿಗೆ ಪಿವಿಸಿ ಪೈಪ್ ಅಳವಡಿಸಿರುವುದು ಸಮಾಧಾನಕರ ಸಂಗತಿ. ಆದರೆ ಟ್ರಾನ್ಸ್ ಫರ್ಮರ್ ಸುತ್ತಲೂ ಬೇಲಿ ಅಳವಡಿಸುವುದು ಸೂಕ್ತ. ಇಲ್ಲದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಯಾವುದೇ ಟ್ರಾನ್ಸ್‌ಫರ್ಮರ್ ನೋಡಿದರೂ ಒಂದಲ್ಲಾ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಬೆಸ್ಕಾಂ ಏನೇನೋ ಸಾಹಸಗಳಿಗೆ ದುಂದು ವೆಚ್ಚ ಮಾಡುವ ಬದಲು ಮೂಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಸೂಕ್ತ. ಪದೇ ಪದೇ ವಿದ್ಯುತ್‌ ಅವಘಡಳು ಸಂಭವಿಸುತ್ತಿದ್ದರೂ ಈವರೆಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯೋಚಿಸಿಲ್ಲ. ಬೆಂಗಳೂರಿನ ರಸ್ತೆ ಬದಿಯ ಟ್ರಾನ್ಸ್‌ಫರ್ಮರ್‌ ಗಳಿಗೆ ಬೇಲಿ ಹಾಕುವುದು, ನೇತಾಡುವ ತಂತಿಗಳನ್ನು ಮೇಲ್ಮಟ್ಟಕ್ಕೆ ಕಟ್ಟುವುದು, ತುಕ್ಕು ಹಿಡಿದಿರುವ ವಿದ್ಯುತ್ ಕಂಬಗಳನ್ನು ಬದಲಿಸುವ ನಿಟ್ಟಿನಲ್ಲಿ ಸಮಗ್ರವಾಗಿ ಅಧ್ಯಯನ ನಡೆಸಿ ಕ್ರಮ ವಹಿಸದ ಹೊರತು ಯಮ ಸ್ವರೂಪಿ ಟ್ರಾನ್ಸ್‌ಫರ್ಮರ್‌ಗಳು ಮತ್ತು ತಂತಿಗಳು ಮುಗ್ಧರನ್ನು ಬಲಿ ಪಡೆಯುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಇಂಧನ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಚಿಂತನೆ ನಡೆಸುವುದು ಸೂಕ್ತ.

ನಮಗೆ ಕಳುಹಿಸಿ:

ನಿಮ್ಮ ಮನೆಯ ಆಜು ಬಾಜು ಇರುವ ಅಪಾಯಕಾರಿ ಟ್ರಾನ್ಸ್‌ಫರ್ಮರ್‌ ಗಳನ್ನು ಪೋಟೋ ತೆಗೆದು ಗೂಗಲ್ ಲೊಕೇಷನ್ ಸಮೇತ ನಮ್ಮವಾಟ್ಸ್ ಪ್ ನಂಬರ್‌ ಗೆ ಕಳುಹಿಸಿ. ಅದನ್ನು ಬೆಸ್ಕಾಂಗೆ ಕಳುಹಿಸಿ ಸುರಕ್ಷತಾ ಕ್ರಮ ವಹಿಸುವ ಸಣ್ಣ ಪ್ರಯತ್ನ ಮಾಡೋಣ. ಅಮಾಯಕ ಜೀವಗಳನ್ನು ಕಾಪಾಡೋಣ. ರೆವಿನ್ಯೂ ಫ್ಯಾಕ್ಟ್ಸ್ 6363386332

Exit mobile version