Revenue Facts

ಆಧಾರ್ ತಿದ್ದುಪಡಿಗೆ ಹೆಚ್ಚುವರಿ ಸಂಗ್ರಹಕ್ಕೆ ₹50 ಸಾವಿರ ದಂಡ;ಕೇಂದ್ರ ಸಚಿವ ರಾಜೀವ್ ಚಂದ್ರಶೇಖ‌ರ್

ಆಧಾರ್ ತಿದ್ದುಪಡಿಗೆ ಹೆಚ್ಚುವರಿ ಸಂಗ್ರಹಕ್ಕೆ ₹50 ಸಾವಿರ ದಂಡ;ಕೇಂದ್ರ ಸಚಿವ ರಾಜೀವ್ ಚಂದ್ರಶೇಖ‌ರ್

#₹50 thousand fine # additional collection # Aadhaar amendment# Union Minister Rajeev Chandrashekhar

ನವದೆಹಲಿ : ಆಧಾ‌ರ್ ಸಂಬಂಧಿತ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಆಪರೇಟರ್ ಗಳಿಗೆ ₹50,000 ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖ‌ರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಆಧಾ‌ರ್ ಸೇವೆಗಳಿಗೆ ಹೆಚ್ಚುವರಿ ಶುಲ್ಕ(Additional charge) ವಿಧಿಸುವಂತಿಲ್ಲ, ಒಂದು ವೇಳೆ ಹೆಚ್ಚಿನ ಶುಲ್ಕ(charge) ತೆಗೆದುಕೊಂಡಿರವುದು ಸಾಬೀತಾದರೆ, ಆಪರೇಟ‌ರ್ ಅನ್ನು ಅಮಾನತುಗೊಳಿಸಲಾಗುವುದು ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ದೂರುಗಳಿಗಾಗಿ, ನೀವು ಟೋಲ್-ಫ್ರೀ ಸಂಖ್ಯೆ(Tollfreee number) 1947 ಗೆ ಕರೆ ಮಾಡಬಹುದು.ಆಧಾರ್‌ ಕಾರ್ಡ್‌ ತಿದ್ದುಪಡಿ, ನವೀಕರಣ, ಮಾಹಿತಿ ಸರಿಪಡಿಸುವಿಕೆ ಸೇರಿ ಇತರೆ ಸೇವೆಗಳಿಗೆ ಸೇವಾ ಕೇಂದ್ರಗಳು ಹೆಚ್ಚುವರಿ ಹಣ ಪಡೆದ್ರೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.ಆಧಾರ್‌ ಸೇವೆಗಳಿಗೆ ಹೆಚ್ಚುವರಿ ಹಣ ಪಡೆದರೆ 50 ಸಾವಿರ ರೂ. ದಂಡ(Fine) ಹಾಗೂ ಪರವಾನಗಿ ಪಡೆದ ಆಧಾರ್‌ ಸೇವಾ ಕೇಂದ್ರವನ್ನು ಅಮಾನತು ಮಾಡಲಾಗುವುದು ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.ಯುಐಡಿಎಐ(UIDAI) ಉಚಿತ ಆಧಾರ್ ನವೀಕರಣಕ್ಕಾಗಿ 2023 ರ ಡಿಸೆಂಬರ್ 14 ರ ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು, ಅದು ಗುರುವಾರ ಕೊನೆಗೊಳ್ಳಬೇಕಿತ್ತು ಆಧಾರ್ ಅನ್ನು ಉಚಿತವಾಗಿ ನವೀಕರಿಸುವ ಗಡುವನ್ನು ಮುಂದಿನ ವರ್ಷದ ಮಾರ್ಚ್ 14, 2024 ರವರೆಗೆ ಉಚಿತವಾಗಿ ಆಧಾರ್ ನವೀಕರಣ ಮಾಡಬಹುದು.

Exit mobile version